ETV Bharat / business

ಪ್ರಧಾನಿ ಬ್ಯಾಂಕ್​ ಬ್ಯಾಲೆನ್ಸ್​​​ನಲ್ಲಿ ​ ಏರಿಕೆ: ಸ್ವಂತ ಕಾರು, ಸಾಲವಿಲ್ಲದ ಮೋದಿಯ ಈಗಿನ ಆಸ್ತಿ ಮೌಲ್ಯವೆಷ್ಟು ಗೊತ್ತೇ? - ಮೋದಿ ಬಳಿ ಇರುವ ಸಂಪತ್ತು

ಪಿಎಂ ಮೋದಿ ಅವರ ಸಂಪತ್ತು 2020ರ ಜೂನ್ 30ರ ವೇಳೆಗೆ ಸುಮಾರು 2.85 ಕೋಟಿ ಮೌಲ್ಯವಾಗಿದ್ದು, 2019ರಲ್ಲಿ ಘೋಷಿಸಿದ 2.49 ಕೋಟಿ ಮೌಲ್ಯದ ಆಸ್ತಿಗಿಂತ ಅಲ್ಪ ಏರಿಕೆಯಾಗಿದೆ. ಆಸ್ತಿ ಮೌಲ್ಯ ಏರಿಕೆಯು ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳ ಮತ್ತು ಮೌಲ್ಯದ ಸೇರ್ಪಡೆಯಿಂದಾಗಿ ಬ್ಯಾಂಕ್ ಸ್ಥಿರ ಠೇವಣಿ ಹೆಚ್ಚಾಗಿದೆ.

PM Modi
ಮೋದಿ
author img

By

Published : Oct 15, 2020, 3:10 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ತಮ್ಮ ಸಂಪುಟ ಸಹೋದ್ಯೋಗಿಗಳ ಜತೆ ತಮ್ಮ ಆಸ್ತಿ ಮತ್ತು ಸಾಲದ ಮೊತ್ತವನ್ನು ಸ್ವಯಂಪ್ರೇರಣೆಯಿಂದ ಘೋಷಿಸಿದರು.

ಪಿಎಂ ಮೋದಿಯವರ ಸಂಪತ್ತು 2020ರ ಜೂನ್ 30ರ ವೇಳೆಗೆ ಸುಮಾರು 2.85 ಕೋಟಿ ಮೌಲ್ಯವಾಗಿದ್ದು, 2019ರಲ್ಲಿ ಘೋಷಿಸಿದ 2.49 ಕೋಟಿ ಮೌಲ್ಯದ ಆಸ್ತಿಗಿಂತ ಅಲ್ಪ ಏರಿಕೆಯಾಗಿದೆ. ಆಸ್ತಿ ಮೌಲ್ಯ ಏರಿಕೆಯು ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳ ಮತ್ತು ಮೌಲ್ಯದ ಸೇರ್ಪಡೆಯಿಂದಾಗಿ ಬ್ಯಾಂಕ್ ಸ್ಥಿರ ಠೇವಣಿ ಹೆಚ್ಚಾಗಿದೆ.

ಪಿಎಂ ಮೋದಿಗೆ ಶೂನ್ಯ ಸಾಲ

70 ವರ್ಷದ ಪ್ರಧಾನ ಮಂತ್ರಿ ಶೂನ್ಯ ಸಾಲ ಹೊಂದಿದ್ದಾರೆ. ಜೂನ್ ಅಂತ್ಯದ ವೇಳೆಗೆ ಪ್ರಧಾನಿ ಮೋದಿ, 31,450 ರೂ. ನಗದು ಹೊಂದಿದ್ದರು. ಉಳಿತಾಯ ಖಾತೆ ಬಾಕಿ ಜೂನ್ 30ರಂದು 3.38 ಲಕ್ಷವಾಗಿದ್ದು, 2019ರ ಮಾರ್ಚ್ 31ರಂದು 4,143 ರೂ.ಯಷ್ಟಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗಾಂಧಿನಗರ ಶಾಖೆಯಲ್ಲಿ ಅವರ ಎಫ್‌ಡಿಯಲ್ಲಿ 2020ರ ಜೂನ್ 30ರ ವೇಳೆಗೆ 1,27,81,574 ರೂಯಿಂದ 1,60,28,039 ರೂ.ಗೆ ಏರಿದೆ.

ಚಿನ್ನ, ರಿಯಲ್ ಎಸ್ಟೇಟ್​​ ಹೂಡಿಕೆ

ಪ್ರಧಾನಿ ಮೋದಿ 1,51,875 ರೂ. ಮೌಲ್ಯದ ಸುಮಾರು 45 ಗ್ರಾಂ. ನಾಲ್ಕು ಚಿನ್ನದ ಉಂಗುರ ಹೊಂದಿದ್ದಾರೆ. ಯಾವುದೇ ಈಕ್ವಿಟಿಗಳಲ್ಲಿ ಹೂಡಿಕೆ ಮಾಡಿಲ್ಲ. 1.1 ಕೋಟಿ ರೂ. ಮೌಲ್ಯದ ಗಾಂಧಿನಗರದಲ್ಲಿ ಒಂದು ಜಮೀನು ಮತ್ತು ಮನೆ ಇದೆ. ತಮ್ಮ ಕುಟುಂಬಸ್ಥರೊಂದಿಗೆ ಇದರ ಭಾಗ ಮಾಲೀಕರಾಗಿದ್ದಾರೆ. ಈ ಸ್ಥಿರ ಆಸ್ತಿಯು ಪಿಎಂ ಮತ್ತು ಇತರ ಮೂವರು ಜಂಟಿ ಮಾಲೀಕತ್ವವಿದೆ.

ಪಿಎಂ ಮೋದಿ ಅವರಿಗೆ ಕಾರುಗಳಿಲ್ಲ

ಪ್ರಧಾನಿ ತಮ್ಮ ಸಂಪತ್ತಿನ ಘೋಷಣೆಯಲ್ಲಿ ಯಾವುದೇ ಕಾರು ಇಲ್ಲ ಎಂದು ಹೇಳಿದ್ದಾರೆ.

ಪಿಎಂ ಮೋದಿಯವರ ತೆರಿಗೆ ಉಳಿತಾಯ ಸಾಧನಗಳು: ಜೀವ ವಿಮೆ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ) ಮತ್ತು ಮೂಲಸೌಕರ್ಯ ಬಾಂಡ್‌ಗಳು ಪಿಎಂ ಮೋದಿಯವರ ತೆರಿಗೆ ಉಳಿತಾಯ ಸಾಧನಗಳಾಗಿವೆ. ಪ್ರಧಾನಿ ಅವರು 8,43,124 ರೂ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಮೂಲಕ ತೆರಿಗೆ ಉಳಿಸಿದ್ದು, ಜೀವ ವಿಮೆಗಾಗಿ 1,50,957 ರೂ. ಪ್ರೀಮಿಯಂ ಪಾವತಿಸಿದ್ದಾರೆ.

2019-20ರ ಹಣಕಾಸು ವರ್ಷದಲ್ಲಿ 7,61,646 ರೂ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಹೊಂದಿದ್ದು, 1,90,347 ರೂ. ಅನ್ನು ಜೀವ ವಿಮಾ ಕಂತುಗಳಾಗಿ ಪಾವತಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.