ETV Bharat / business

ಭಾರತದ ಈಗಿನ ಜಿಡಿಪಿ ಬೆಳವಣಿಗೆ ಶೂನ್ಯಕ್ಕೆ ಹತ್ತಿರದಲ್ಲಿ ಇರಬಹುದು: ನಿರ್ಮಲಾ ಸೀತಾರಾಮನ್​ - Nirmala Sitharaman comments on GDP Growth

ಹಬ್ಬದ ಋತುಮಾನವು ಆರ್ಥಿಕತೆಯನ್ನು ಮತ್ತಷ್ಟು ಉತ್ತೇಜಿಸುತ್ತದೆ. ಮೂರನೇ ಮತ್ತು ನಾಲ್ಕನೇ ತ್ರೈಮಾಸಿಕಗಳಲ್ಲಿ ಸಕಾರಾತ್ಮಕ ಬೆಳವಣಿಗೆಯ ಭರವಸೆಯನ್ನು ಚಿಗುರೊಡೆದಿದೆ. ಒಟ್ಟಾರೆಯಾಗಿ, ಜಿಡಿಪಿ ಬೆಳವಣಿಗೆಯ ಪ್ರಸಕ್ತ ಹಣಕಾಸು (ಏಪ್ರಿಲ್ 2020 ರಿಂದ ಮಾರ್ಚ್ 2021) ಋಣಾತ್ಮಕ ವಲಯದಲ್ಲಿ ಅಥವಾ ಶೂನ್ಯಕ್ಕೆ ಹತ್ತಿರವಾಗಲಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

FM
ನಿರ್ಮಲಾ ಸೀತಾರಾಮನ್​
author img

By

Published : Oct 27, 2020, 4:57 PM IST

ನವದೆಹಲಿ: ಆರ್ಥಿಕತೆಯಲ್ಲಿ ಪುನರುಜ್ಜೀವನದ ಲಕ್ಷಣಗಳು ಕಂಡುಬರುತ್ತಿವೆ. ಆದರೆ, ಜಿಡಿಪಿ ಬೆಳವಣಿಗೆ ಋಣಾತ್ಮಕ ವಲಯದಲ್ಲಿ ಇರಬಹುದು ಅಥವಾ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೂನ್ಯಕ್ಕೆ ಹತ್ತಿರವಾಗಬಹುದು ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) ಆರ್ಥಿಕತೆಯಲ್ಲಿ ಶೇ 23.9ರಷ್ಟು ಸಂಕೋಚನ ಇರುವುದೆ ಇದಕ್ಕೆ ಮುಖ್ಯ ಕಾರಣ ಎಂದು ಸಿಇಆರ್‌ವೀಕ್‌ನ ಇಂಡಿಯಾ ಎನರ್ಜಿ ಫೋರಂನಲ್ಲಿ ಹೇಳಿದರು.

ಮಾರ್ಚ್ 25ರಿಂದ ಸರ್ಕಾರವು ಜೀವನೋಪಾಯಕ್ಕೆ ಜೀವ ತುಂಬಲು ಬಹಳ ದೃಢವಾದ ಲಾಕ್‌ಡೌನ್ ವಿಧಿಸಿತ್ತು. ಸಾಂಕ್ರಾಮಿಕ ರೋಗ ಎದುರಿಸಲು ಪೂರ್ವಸಿದ್ಧತಾ ಕಾರ್ಯಗಳಿಗಾಗಿ ಲಾಕ್‌ಡೌನ್ ಸಾಕಷ್ಟು ಸಮಯ ನೀಡಿತು. ಆದರೆ, ಅನ್​ಲಾಕ್​​ನೊಂದಿಗೆ, ಸ್ಥೂಲ ಆರ್ಥಿಕ ಸೂಚಕಗಳು ಪುನರುಜ್ಜೀವನದ ಲಕ್ಷಣಗಳನ್ನು ತೋರಿಸುತ್ತವೆ ಎಂದು ತಿಳಿಸಿದರು.

ಹಬ್ಬದ ಋತುಮಾನವು ಆರ್ಥಿಕತೆಯನ್ನು ಮತ್ತಷ್ಟು ಉತ್ತೇಜಿಸುತ್ತದೆ. ಮೂರನೇ ಮತ್ತು ನಾಲ್ಕನೇ ತ್ರೈಮಾಸಿಕಗಳಲ್ಲಿ ಸಕಾರಾತ್ಮಕ ಬೆಳವಣಿಗೆಯ ಭರವಸೆಯನ್ನು ಚಿಗುರೊಡೆದಿದೆ. ಒಟ್ಟಾರೆಯಾಗಿ, ಜಿಡಿಪಿ ಬೆಳವಣಿಗೆಯ ಪ್ರಸಕ್ತ ಹಣಕಾಸು (ಏಪ್ರಿಲ್ 2020 ರಿಂದ ಮಾರ್ಚ್ 2021) ಋಣಾತ್ಮಕ ವಲಯದಲ್ಲಿ ಅಥವಾ ಶೂನ್ಯಕ್ಕೆ ಹತ್ತಿರವಾಗಲಿದೆ. ಮುಂದಿನ ಹಣಕಾಸು ವರ್ಷದಿಂದ ಈ ಬೆಳವಣಿಗೆ ಪುನರುಜ್ಜೀವನಗೊಳ್ಳುತ್ತದೆ. ಆರ್ಥಿಕ ಚಟುವಟಿಕೆ ಹೆಚ್ಚಿಸಲು ಸಾರ್ವಜನಿಕ ಖರ್ಚಿನತ್ತ ಸರ್ಕಾರ ಗಮನ ಹರಿಸುತ್ತಿದೆ ಎಂದು ಸೀತಾರಾಮನ್ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.