ETV Bharat / business

ಆರ್ಥಿಕತೆ ಮೇಲೆ ಈಗ ಈರುಳ್ಳಿ ಬರೆ: ಕೇಂದ್ರಕ್ಕೂ, ಗ್ರಾಹಕರಿಗೂ ಕಣ್ಣೀರು ತರಿಸಿದೆ ಬೆಲೆ

ದೆಹಲಿಯಲ್ಲಿ ಕಳೆದ ವಾರವಷ್ಟೇ ಕೆಜಿಗೆ 57 ರೂ. ಇದ್ದ ಈರುಳ್ಳಿ ಇಂದು 70ರಿಂದ 80 ರೂ. ನಡುವೆ ಮಾರಾಟ ಆಗುತ್ತಿದೆ. ಈರುಳ್ಳಿ ದರ ಏರಿಕೆಯಾಗಿ ಮಂಡಿಗಳಲ್ಲಿ ದಾಸ್ತಾನು ಕಡಿಮೆ ಆಗುತ್ತಿರುವುದರಿಂದ ಕೇಂದ್ರ ಸರ್ಕಾರವು ತರಕಾರಿ ಮಾರುಕಟ್ಟೆಗಳಲ್ಲಿ ಈರುಳ್ಳಿ ಸಂಗ್ರಹವನ್ನು ಹೆಚ್ಚಿಸಲು ಚಿಂತನೆ ನಡೆಸಿದೆ.

ಸಾಂದರ್ಭಿಕ ಚಿತ್ರ
author img

By

Published : Sep 22, 2019, 6:00 PM IST

ನವದೆಹಲಿ: ಕರ್ನಾಟಕ, ಮಹಾರಾಷ್ಟ್ರ, ಬಿಹಾರದಲ್ಲಿ ಇತ್ತೀಚೆಗೆ ಉಂಟಾದ ಭಾರಿ ಪ್ರವಾಹದ ಬಳಿಕ ಆಹಾರ ಪದಾರ್ಥಗಳ ಅಭಾವ ದೇಶಾದ್ಯಂತ ವ್ಯಾಪಿಸತೊಡಗಿದೆ. ಉತ್ಪಾದನೆ ಮತ್ತು ದಾಸ್ತಾನು ಕೊರತೆಯಿಂದಾಗಿ ಈರುಳ್ಳಿ ಬೆಲೆಯು ದಿನದಿಂದ ದಿನಕ್ಕೆ ಏರುತ್ತಲೇ ಸಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ವಾರವಷ್ಟೆ ಪ್ರತಿ ಕೆಜಿ 57 ರೂ. ಇದ್ದ ಈರುಳ್ಳಿ ಬೆಲೆ ಇಂದು 70ರಿಂದ 80 ರೂ. ನಡುವೆ ಮಾರಾಟ ಆಗುತ್ತಿದೆ. ಈರುಳ್ಳಿ ದರ ಏರಿಕೆಯಾಗಿ ಮಂಡಿಗಳಲ್ಲಿ ದಾಸ್ತಾನು ಕಡಿಮೆ ಆಗುತ್ತಿರುವುದರಿಂದ ಕೇಂದ್ರ ಸರ್ಕಾರವು ತರಕಾರಿ ಮಾರುಕಟ್ಟೆಗಳಲ್ಲಿ ಈರುಳ್ಳಿ ಸಂಗ್ರಹವನ್ನು ಹೆಚ್ಚಿಸಲು ಚಿಂತನೆ ನಡೆಸಿದೆ.

ದೆಹಲಿ ಮಂಡಿಯಲ್ಲಿ ಪ್ರತಿ ಕೆ.ಜಿ.ಗೆ ಈರುಳ್ಳಿ 57 ರೂ., ಮುಂಬೈನಲ್ಲಿ 56 ರೂ, ಕೊಲ್ಕತ್ತಾದಲ್ಲಿ 48 ರೂ., ಚೆನ್ನೈನಲ್ಲಿ 34 ರೂ., ಗುರುಗ್ರಾಮದಲ್ಲಿ 60 ರೂ.ನಂತೆ ಮಾರಾಟವಾಗುತ್ತಿತ್ತು. ಇದೇ ಮಂಡಿಗಳಲ್ಲಿ 70ರಿಂದ 80 ರೂ.ನಂತೆ ಮಾರಾಟವಾಗುತ್ತಿದೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ.

ಹೀಗಾಗಿ ವಿದೇಶಗಳಿಗೆ ಈರುಳ್ಳಿ ರಫ್ತು ಸಹ ಕೇಂದ್ರಕ್ಕೆ ದುಸ್ತರವಾಗಿದೆ. ನಾನಾ ಏಜೆನ್ಸಿಗಳಿಂದ ಈರುಳ್ಳಿ ಖರೀದಿಸಿ ದಾಸ್ತಾನು ಇರಿಸಿಕೊಂಡು ಬಳಿಕ ಮಾರುಕಟ್ಟೆಗಳಿಗೆ ರವಾನಿಸಲು ಸರ್ಕಾರ ನಿರ್ಧರಿಸಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.