ETV Bharat / business

'ನ್ಯಾಯ್​ ಸ್ಕೀಮ್​ ' ಚೋರ್​ ವ್ಯಾಪಾರಿ' ಮನೋಭಾವದ್ದು: ಜೇಟ್ಲಿ ಟೀಕೆ - ನ್ಯಾಯ್

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಮತ್ತಷ್ಟು ತೆರಿಗೆ ಕಡಿತಗೊಳಿಸುತ್ತೇವೆ. ಮುಂದಿನ ಜಿಎಸ್​ಟಿ ದರ ಪರಿಷ್ಕರಣೆ ಸಭೆಯಲ್ಲಿ ಸಿಮೆಂಟ್​ ಮೇಲಿನ ಜಿಎಸ್​ಟಿ ಸ್ಲ್ಯಾಬ್ ದರ ಇಳಿಕೆ ಮಾಡಲಾಗುವುದು: ಜೇಟ್ಲಿ ಭರವಸೆ

ಅರುಣ್ ಜೇಟ್ಲಿ: ಸಂಗ್ರಹ ಚಿತ್ರ
author img

By

Published : Apr 5, 2019, 12:02 PM IST

ನವದೆಹಲಿ: ಬಡವರಿಗೆ ಕನಿಷ್ಠ ವರಮಾನ ಯೋಜನೆಯಡಿ ವಾರ್ಷಿಕ 72 ಸಾವಿರ ರೂ. ನೀಡುವ ಕಾಂಗ್ರೆಸಿನ ಭರವಸೆಯನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಟೀಕಿಸಿದ್ದಾರೆ.

ನ್ಯಾಯ್ ನಂತಹ ಹಣ ನೀಡುವ ಫಂಡಿಂಗ್​ ಯೋಜನೆ ಚೋರ್ ಉದ್ಯಮ ತರಹವಿದ್ದು, ಇಂತಹ ಮನಸ್ಥಿತಿಯ ಯೋಜನೆ ಭಾರತಕ್ಕೆ ಹೊಂದುವುದಿಲ್ಲ. ಇದು ಸಫಲ ಕೂಡ ಆಗುವುದಿಲ್ಲ ಎಂದು ಆರೋಪಿಸಿದ್ದಾರೆ.

ನಮ್ಮ ಬೆಳವಣಿಗೆ ಮಾದರಿಯೆಂದರೆ ಮಾರುಕಟ್ಟೆ ಆಧಾರಿತ ಸುಧಾರಣೆಗಳನ್ನು ಹೊಂದಬೇಕು. ಆರ್ಥಿಕತೆಯನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗುವಂತಹ ಅವಕಾಶಗಳು ಸೃಷ್ಟಿಸಬೇಕು. ಬಡವರು ಮತ್ತು ಗ್ರಾಮೀಣ ದುರ್ಬಲರಿಗೆ ಸೌಕರ್ಯ ಕಲ್ಪಿಸಿ ಬಡತನ ನಿವಾರಣೆಯಂತಹ ಯೋಜನೆಗಳು ಕಾರ್ಯಗತವಾಗಬೇಕು. ಇವು ಬಡತನದ ಪರಿಹಾರ ಮಾರ್ಗದ ಜೊತೆಗೆ ಸಮರ್ಥವಾದ ಆರ್ಥಿಕತೆ ರೂಪುಗೊಳ್ಳಲು ನೆರವಾಗುತ್ತದೆ ಎಂದು ಕಾಂಗ್ರೆಸ್ ನ ನ್ಯಾಯ್ ಯೋಜನೆಯನ್ನು ಪರೋಕ್ಷವಾಗಿ ಜರಿದರು.

ಸಾಕಷ್ಟು ಸ್ಪಷ್ಟತೆಯಿಂದ ಆಡಳಿತ ನಡೆಸಿ, ಉತ್ತಮ ಹಣಕಾಸಿನ ಹರಿವು ಕಾಪಾಡಿದ್ದೇವೆ. ಜೊತೆಗೆ ತೆರಿಗೆ ದರವನ್ನು ಸಹ ಇಳಿಸಿದ್ದೇವೆ. ಮುಂದಿನ ಬಾರಿ ಮತ್ತೆ ಅಧಿಕಾರಕ್ಕೆ ಬಂದರೆ ಇದೆ ಮಾರ್ಗದಲ್ಲಿ ಸಾಗುತ್ತೇವೆ ಎಂದು ಸಿಐಐ ವಾರ್ಷಿಕ ಸಮಾವೇಶದಲ್ಲಿ ಹೇಳಿದ್ದಾರೆ.

ಆರ್​ಬಿಐ ನಿರೀಕ್ಷೆಯ ಬೆಳವಣಿಗೆ ದರವನ್ನು ಕಡಿತಗೊಳಿಸಿದ ಏಷ್ಯನ್ ಅಭಿವೃದ್ಧಿ ಬ್ಯಾಂಕ್​ (ಎಡಿಬಿ) ಸೂಚ್ಯಂಕ ತೊಂದರೆಗೀಡಾಗುವುದಿಲ್ಲ. ಆರ್​ಬಿಐ 2019-20ರ ದೇಶದ ಆರ್ಥಿಕ ಬೆಳವಣಿಗೆಯ ವೃದ್ಧಿಯನ್ನು ಶೇ 7.4ರಿಂದ ಶೇ 7.2ಕ್ಕೆ ಇಳಿಕೆ ಮಾಡಿದೆ. ಹಾಗೆಯೇ, ಎಡಿಬಿ ಕೂಡ 40 ಅಂಶಗಳ ಆಧಾರದ ಮೇಲೆ ಬೆಳವಣಿಗೆ ದರ ಶೇ 7.2ಕ್ಕೆ ಇರಿಸಿಕೊಂಡಿದೆ. ಈ ಎಲ್ಲ ವೈರುದ್ಯಗಳ ನಡುವೆ ದೇಶದ ಆರ್ಥಿಕತೆ ಸ್ಥಿರವಾಗಿರಲಿದೆ ಎಂದು ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದರು.

Intro:Body:

ಕನಿಷ್ಠ ಆದಾಯದ 'ನ್ಯಾಯ್'​ ಸ್ಕೀಮ್​ ' ಚೋರ್​ ವ್ಯಾಪಾರಿ'ಯದ್ದು': ಜೇಟ್ಲಿ ಟೀಕೆ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.