ETV Bharat / business

ರಾಷ್ಟ್ರೀಯ ನೇಮಕ ಸಂಸ್ಥೆಯಿಂದ ಕೋಟ್ಯಂತರ ಯುವಕರಿಗೆ ಉದ್ಯೋಗದ ವರದಾನ:  ಪ್ರಧಾನಿ ಮೋದಿ - ಎನ್​ಆರ್​ಎ

ಕೇಂದ್ರ ಸರ್ಕಾರದಲ್ಲಿ ಸುಮಾರು 20ಕ್ಕೂ ಹೆಚ್ಚು ನೇಮಕಾತಿ ಏಜೆನ್ಸಿಗಳಿವೆ. ನಾವು ಈಗ ಕೇವಲ ಮೂರು ಏಜೆನ್ಸಿಗಳ ಪರೀಕ್ಷೆಗಳನ್ನು ಸಾಮಾನ್ಯವಾಗಿಸುತ್ತಿದ್ದೇವೆ. ಕಾಲಕ್ರಮೇಣ ಎಲ್ಲ ನೇಮಕ ಏಜೆನ್ಸಿಗಳಿಗೆ ಸಾಮಾನ್ಯ ಅರ್ಹತಾ ಪರೀಕ್ಷೆಯನ್ನು ಒಂದೇ ಸೂರಿನಡಿ ನಡೆಸಲು ಕೇಂದ್ರ ಉದ್ದೇಶಿಸಿದೆ.

PM Modi
ಪ್ರಧಾನಿ ಮೋದಿ
author img

By

Published : Aug 19, 2020, 5:55 PM IST

ನವದೆಹಲಿ: ಸಾಮಾನ್ಯ ಅರ್ಹತಾ ಪರೀಕ್ಷೆ ನಡೆಸಲು 'ರಾಷ್ಟ್ರೀಯ ನೇಮಕಾತಿ ಸಂಸ್ಥೆ' ಸ್ಥಾಪಿಸಲು ಬುಧವಾರ ನಡೆದ ಕೇಂದ್ರ ಕ್ಯಾಬಿನೆಟ್ ಅನುಮೋದನೆ ನೀಡಿತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿ, ಕೋಟ್ಯಂತರ ಯುವಕರಿಗೆ ರಾಷ್ಟ್ರೀಯ ನೇಮಕಾತಿ ಸಂಸ್ಥೆ ಸ್ಥಾಪನೆಯಿಂದ ವರದಾನವಾಗಲಿದೆ. ಸಾಮಾನ್ಯ ಅರ್ಹತಾ ಪರೀಕ್ಷೆಯು ಅನೇಕ ಪರೀಕ್ಷೆಗಳನ್ನು ತೆಗೆದುಹಾಕುತ್ತದೆ. ಪರಿಕ್ಷಾರ್ಥಿಗಳ ಅಮೂಲ್ಯ ಸಮಯ ಮತ್ತು ಸಂಪನ್ಮೂಲಗಳನ್ನು ಉಳಿಸುತ್ತದೆ. ಇದು ಪಾರದರ್ಶಕತೆಗೆ ದೊಡ್ಡ ಉತ್ತೇಜನ ನೀಡುತ್ತದೆ ಎಂದು ಶ್ಲಾಘಿಸಿದರು.

  • The #NationalRecruitmentAgency will prove to be a boon for crores of youngsters. Through the Common Eligibility Test, it will eliminate multiple tests and save precious time as well as resources. This will also be a big boost to transparency. https://t.co/FbCLAUrYmX

    — Narendra Modi (@narendramodi) August 19, 2020 " class="align-text-top noRightClick twitterSection" data=" ">

ಕೇಂದ್ರ ಸರ್ಕಾರದಲ್ಲಿ ಸುಮಾರು 20ಕ್ಕೂ ಹೆಚ್ಚು ನೇಮಕ ಏಜೆನ್ಸಿಗಳಿವೆ. ನಾವು ಈಗ ಕೇವಲ ಮೂರು ಏಜೆನ್ಸಿಗಳ ಪರೀಕ್ಷೆಗಳನ್ನು ಸಾಮಾನ್ಯವಾಗಿಸುತ್ತಿದ್ದೇವೆ. ಕಾಲಕ್ರಮೇಣ ಎಲ್ಲ ನೇಮಕಾತಿ ಏಜೆನ್ಸಿಗಳಿಗೆ ಸಾಮಾನ್ಯ ಅರ್ಹತಾ ಪರೀಕ್ಷೆಯನ್ನು ಒಂದೇ ಸೂರಿನಡಿ ನಡೆಸಲು ಕೇಂದ್ರ ಉದ್ದೇಶಿಸಿದೆ.

ಗೆಜೆಟೆಡ್ ಅಲ್ಲದ ಎಲ್ಲ ಹುದ್ದೆಗಳಿಗೆ ಒಂದೇ ಪ್ರವೇಶ ಪರೀಕ್ಷೆ ಇರುತ್ತದೆ. ಗ್ರೂಪ್​ 'ಬಿ' ಮತ್ತು 'ಸಿ' ಹುದ್ದೆಗಳಿಗೆ ಅನ್ವಯಿಸಲಿದೆ. ಈ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ಅರ್ಹತೆ ಪಡೆದ ಅಭ್ಯರ್ಥಿಗಳು ಯಾವುದೇ ನೇಮಕಾತಿ ಸಂಸ್ಥೆಗಳಿಗೆ ಉನ್ನತ ಮಟ್ಟದ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು. ಪಡೆದ ಅಂಕಗಳು ಮೂರು ವರ್ಷಗಳವರೆಗೆ ಮಾನ್ಯವಾಗಿರುತ್ತದೆ, ಈ ಸಮಯದಲ್ಲಿ ಅಭ್ಯರ್ಥಿಯು ಯೋಗ್ಯತೆ ಮತ್ತು ಆದ್ಯತೆಗಳನ್ನು ಅವಲಂಬಿಸಿ ವಿವಿಧ ಕ್ಷೇತ್ರಗಳಲ್ಲಿನ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬಹುದು. ಪ್ರಯತ್ನಗಳಿಗೆ ಯಾವುದೇ ನಿರ್ಬಂಧವಿರುವುದಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.