ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಬದಲಾದ ವಿಶ್ವದ ವಾಣಿಜ್ಯ-ವಹಿವಾಟು ಚಲನೆಯ ಮಧ್ಯೆ ಉತ್ಪಾದನಾ ಕ್ಷೇತ್ರ ವೃದ್ಧಿಯತ್ತ ದೃಷ್ಟಿನೆಟ್ಟಿದ್ದು, 'ಹೊಸ ವಿದೇಶಿ ವ್ಯಾಪಾರ ನೀತಿ' ರೂಪಿಸುವಲ್ಲಿ ಕೇಂದ್ರ ಸರ್ಕಾರ ನಿರತವಾಗಿದೆ.
ಆಮದು ಪ್ರಮಾಣ ಕಡಿಮೆ ಮಾಡುವ ಒತ್ತಡವಿದ್ದರೂ ಯಾವುದೇ ಪ್ರದೇಶದಿಂದ ಒಳಬರುವ ಸಾಗಣೆಯನ್ನು ರದ್ದುಗೊಳಿಸದಿರಲು ಮೋದಿ ಸರ್ಕಾರ ಯಾರನ್ನೂ ಅವಲಂಬಿಸುವುದಿಲ್ಲ ಎಂದು ಈ ನೀತಿಯಲ್ಲಿ ತೊಡಗಿಸಿಕೊಂಡ ಅಧಿಕಾರಿ ಒಬ್ಬರು ಹೇಳಿದ್ದಾರೆ.
ಜಾಗತಿಕ ಮತ್ತು ಸ್ಥಳೀಯ ಪೂರೈಕೆ ಸರಪಳಿ ಜತೆ ಹೊಂದಾಣಿಕೆ ಮಾಡುವ ಮೂಲಕ 'ಮೇಕ್ ಇನ್ ಇಂಡಿಯಾ' ಅಭಿಯಾನದತ್ತ ಹೆಚ್ಚು ಗಮನಹರಿಸಲಾಗುವುದು ಎಂದಿದ್ದಾರೆ.
ಪ್ರಧಾನಿ ಮೋದಿ ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, ವಿದೇಶಿ ಮತ್ತು ದೇಶಿಯ ಕಂಪನಿಗಳನ್ನು ಭಾರತವನ್ನು ತಮ್ಮ ಉತ್ಪಾದನಾ ಕೇಂದ್ರವನ್ನಾಗಿ ಮಾಡುವಂತೆ ಕೇಳಿಕೊಂಡರು. 'ಮೇಕ್ ಇನ್ ಇಂಡಿಯಾ'ವನ್ನು 'ಮೇಕ್ ಫಾರ್ ವರ್ಲ್ಡ್' ಆಗಿಸುವಂತೆ ಕರೆ ಕೊಟ್ಟಿದ್ದರು.
ಹೊಸ ವಿದೇಶಿ ವ್ಯಾಪಾರ ನೀತಿಯು ಆಮದಿನ ಪ್ರಮಾಣ ಕಡಿಮೆ ನಾಡುವ ಬಗ್ಗೆ ಅಲ್ಲ. ಈಗಿನ ಸಮಯದಲ್ಲಿ ನಾವು ಇಂತಹ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ, ಅದು ಆರ್ಥಿಕತೆಗೆ ಹಾನಿ ಮಾಡುತ್ತದೆ. ಭಾರತವು ಜಗತ್ತಿಗೆ ಉತ್ಪಾದನೆ ಒದಗಿಸಲು ಸಾಧ್ಯವಾಗುವಂತೆ ಉತ್ಪಾದನಾ ಉದ್ಯಮ ವೃದ್ಧಿಸುವತ್ತ ಕೇಂದ್ರ ಸರ್ಕಾರ ಎದುರು ನೋಡುತ್ತಿದೆ. ಅನೇಕ ಕಂಪನಿಗಳು ಈಗಾಗಲೇ ಭಾರತಕ್ಕೆ ಬಂದು ಇಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಲು ತೀವ್ರ ಆಸಕ್ತಿ ತೋರಿಸಿವೆ ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಗೋಪಾಲ್ ಕೃಷ್ಣ ಅಗರ್ವಾಲ್ ಐಎನ್‌ಗೆ ತಿಳಿಸಿದರು.
ಉತ್ಪಾದನಾ ವಲಯವು ತೊಂದರೆ ಅನುಭವಿಸದಂತೆ ನೋಡಿಕೊಳ್ಳಲು ಕಸ್ಟಮ್ ರಚನೆಯ ಪ್ರಸ್ತುತ ವ್ಯಾಪಾರ ನೀತಿ 2021ರಲ್ಲಿ ಮುಕ್ತಾಯಗೊಳ್ಳಲಿದೆ.
ಭಾರತವು ಕಳೆದ ವರ್ಷ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದಿಂದ (ಆರ್‌ಸಿಇಪಿ) ಹೊರಗುಳಿದಿದ್ದರೂ, 2012ರಿಂದ ಯಾವುದೇ ಹೊಸ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್‌ಟಿಎ) ಸಹಿ ಹಾಕಿಲ್ಲ. ಸರ್ಕಾರವು ಇತರ ದೇಶಗಳೊಂದಿಗೆ ವ್ಯಾಪಾರ ಒಪ್ಪಂದಗಳಿಗೆ ವಿರುದ್ಧವಾಗಿಲ್ಲ ಯಾವುದೇ ನೀತಿ ಸಂಯೋಜಿಸಿಲ್ಲ. ನಾವು ಆರ್‌ಸಿಇಪಿಯಿಂದ ನಿರ್ಗಮಿಸಿದ್ದರೂ ವ್ಯಾಪಾರ ಒಪ್ಪಂದಗಳಿಗೆ ಮುಕ್ತರಾಗಿದ್ದೇವೆ. ಇದರರ್ಥ ಭಾರತವು ವ್ಯಾಪಾರ ಮಾಡಲು ಹಿಂಜರಿಯುತ್ತಿದೆ ಎಂಬ ಅರ್ಥವಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದರು.
ಅಧಿಕೃತ ಮಾಹಿತಿಯ ಪ್ರಕಾರ, 2018ರಲ್ಲಿ ಸರಕುಗಳ ಜಾಗತಿಕ ರಫ್ತಿನಲ್ಲಿ ಭಾರತದ ಪಾಲು ಶೇ 1.7ರಷ್ಟಿತ್ತು. ಹೊಸ ನೀತಿಯಲ್ಲಿ ಅದನ್ನು ಎರಡು ಅಂಕೆಗಳಿಗೆ ಕೊಂಡೊಯ್ಯುವ ಗುರಿ ಇರಿಸಿಕೊಂಡಿದೆ.
ಇಲ್ಲಿಯವರೆಗೆ ಜಾಗತಿಕ ವ್ಯಾಪಾರದಲ್ಲಿ ಶೇ 17ರಷ್ಟು ಪಾಲು ಹೊಂದಿರುವ ಚೀನಾ, ವಿಶ್ವದ ಅತಿದೊಡ್ಡ ಸರಕು ಪೂರೈಕೆದಾರ ರಾಷ್ಟ್ರವಾಗಿದೆ. ಅಮೆರಿಕ ವಿರುದ್ಧ ತೀವ್ರ ವ್ಯಾಪಾರ ಸಮರದಲ್ಲಿ ಸಿಲುಕಿಕೊಂಡಿದ್ದರಿಂದ ಕಳೆದ ಎರಡು ವರ್ಷಗಳಲ್ಲಿ ಡ್ರ್ಯಾಗನ್ ಪಾಲು ಕುಸಿಯಿತು.
ಡಾಟಾ ಪೋರ್ಟಲ್ ಸ್ಟ್ಯಾಟಿಸ್ಟಿಕ್ ಡಾಟ್ ಕಾಮ್ ಚೀನಾ ಜಿಡಿಪಿ ವಹಿವಾಟಿನ ಬಗ್ಗೆ ಮಾಹಿತಿ ಬಹಿರಂಗಪಡಿಸಿದೆ. ತನ್ನ ಒಟ್ಟಾರೆ ಜಿಡಿಪಿ ಪೈಕಿ ರಫ್ತು ವಹಿವಾಟು ಪಾಲು 2019ರಲ್ಲಿ ಅಂದಾಜು 17.4ಕ್ಕೆ ಇಳಿದಿದೆ. ಚೀನಾದ ಸರಕುಗಳ ರಫ್ತು ಮೌಲ್ಯವು ಆ ವರ್ಷ ಸುಮಾರು 17.23 ಟ್ರಿಲಿಯನ್ ಯುವಾನ್ ಆಗಿತ್ತು. ಇದು 2015ರಲ್ಲಿ ಶೇ 20.9ರಷ್ಟು ಮುಟ್ಟಿತ್ತು.