ನವದೆಹಲಿ: ಕಾಗದರಹಿತ ದಿಕ್ಕಿನಲ್ಲಿ ಹೆಜ್ಜೆಯಿಟ್ಟ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಸೋಮವಾರ ದೇಶಾದ್ಯಂತ ತನ್ನ ಎಲ್ಲಾ ಜಿಎಸ್‌ಟಿ ಮತ್ತು ಕಸ್ಟಮ್ಸ್ ಕಚೇರಿಗಳನ್ನು ಎಲೆಕ್ಟ್ರಾನಿಕ್ ಕಚೇರಿಯಾಗಿ (ಇ-ಆಫೀಸ್) ಪರಿವರ್ತಿಸಿದೆ.
ಹಳೆಯ ಅಭ್ಯಾಸದ ಭೌತಿಕ ಫೈಲ್‌ಗಳ ದಾಖಲೆ ಹಾಗೂ ಟೇಬಲ್‌ನಿಂದ ಟೇಬಲ್‌ಗೆ ಅಲೆಯುವುದನ್ನು ಇ- ಆಫೀಸ್ನ ಡಿಜಿಟಲೀಕರಣ ತಪ್ಪಿಸಲಿದೆ.
ಬಹು ಉದ್ದೇಶಿತ ಈ ಕ್ರಮವು ದೇಶದ ತೆರಿಗೆ ವ್ಯವಸ್ಥೆಯ ಆಡಳಿತದಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ತರುತ್ತದೆ. ಡಿಜಿಟಲ್ ಫೈಲ್ ಅಥವಾ ಡಿಜಿಟಲ್ ರೆಕಾರ್ಡ್ ಮುಂದೆಂದು ಅಳಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಯೊಬ್ಬರು ಈಟಿವಿ ಭಾರತಗೆ ತಿಳಿಸಿದ್ದಾರೆ.
ದೇಶವ್ಯಾಪಿ ಏಕಿಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ), ಕಸ್ಟಮ್ಸ್ ಮತ್ತು ಅಬಕಾರಿ ಸುಂಕಗಳನ್ನು ನಿರ್ವಹಿಸುವ ಸುಪ್ರೀಂ ಕೇಂದ್ರವಾಗಿವೆ. ಇ-ಆಫೀಸ್, 50,000ಕ್ಕೂ ಹೆಚ್ಚು ತೆರಿಗೆ ಅಧಿಕಾರಿಗಳು, 500 ಜಿಎಸ್‌ಟಿ ಮತ್ತು ಕಸ್ಟಮ್ಸ್ ಕಚೇರಿಗಳಲ್ಲಿ ಈ ಸ್ವಯಂಚಾಲಿತ ವೇದಿಕೆಯನ್ನು ಬಳಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು.
ಎಲೆಕ್ಟ್ರಾನಿಕ್ ಆಫೀಸ್ ಅಥವಾ ಇ-ಆಫೀಸ್, ಫೈಲ್‌ಗಳನ್ನು ನಿರ್ವಹಿಸುವ ಆಂತರಿಕ ಪ್ರಕ್ರಿಯೆಗಳನ್ನು ಸ್ವಯಂಚಾಲಿತಗೊಳಿಸುತ್ತದೆ. ತ್ವರಿತ ನಿರ್ಧಾರ ತೆಗೆದುಕೊಳ್ಳುವ ಮೂಲಕ ಸರ್ಕಾರಿ ಯಂತ್ರೋಪಕರಣಗಳ ಕಾರ್ಯ ವೈಖರಿ ಸುಧಾರಿಸುವ ಗುರಿ ಹೊಂದಿದೆ.
ಈ ಸ್ವಯಂಚಾಲಿತ ವ್ಯವಸ್ಥೆಯಡಿ ಎಲೆಕ್ಟ್ರಾನಿಕ್ ಫೈಲ್, ಡಾಕ್ಯುಮೆಂಟ್ ಸ್ವೀಕರಿಸುವುದು. ಫೈಲ್ ನಿರ್ವಹಣೆ, ಕರಡು ಪತ್ರ ತಯಾರಿ, ಕರಡುಗಳ ಅನುಮೋದನೆ, ಸಂಬಂಧಪಟ್ಟ ಅಧಿಕಾರಿಗಳ ಸಹಿಯಂತಹ ಪ್ರಕ್ರಿಯೆಗಳು ಡಿಜಿಟಲೀಕರಣಕ್ಕೆ ಒಳಪಡಲಿವೆ.