ನವದೆಹಲಿ: ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಕಳೆದ ಭಾನುವಾರ ಒಂದೇ ದಿನ ಅತ್ಯಧಿಕ ಅಂದ್ರೆ ₹86.2 ಕೋಟಿ ಟೋಲ್ ಮೊತ್ತ ಸಂಗ್ರಹಿಸಿದೆ ಎಂದು ಮುಖ್ಯಸ್ಥ ಸುಖ್ಬೀರ್ ಸಿಂಗ್ ಸಂಧು ಹೇಳಿದ್ದಾರೆ.
ಫಾಸ್ಟ್‌ಟ್ಯಾಗ್‌ಗಳ ಎಲೆಕ್ಟ್ರಾನಿಕ್ ಸಿಸ್ಟಮ್ ಮೂಲಕ ಅತಿಹೆಚ್ಚು ದೈನಂದಿನ ಟೋಲ್ ಸಂಗ್ರಹವು 2020ರ ಜನವರಿಯಲ್ಲಿ 50 ಕೋಟಿ ರೂ. (ಒಂದೇ ದಿನದ ಸಂಗ್ರಹ) ದಾಖಲಾಗಿದೆ. 2019ರ ನವೆಂಬರ್‌ನಲ್ಲಿ 23 ಕೋಟಿ ರೂ. ಈ ಹಿಂದಿನ ಗರಿಷ್ಠ ದಾಖಲೆ ಆಗಿತ್ತು.
ಎನ್‌ಎಚ್‌ಎಐ, ಕಳೆದ ಎರಡು ದಿನಗಳ ಹಿಂದೆ ಅತಿಹೆಚ್ಚು ಟೋಲ್ ಸಂಗ್ರಹವಾದ ₹86.2 ಕೋಟಿ ದಾಖಲಿಸಿದೆ. ಫಾಸ್ಟ್‌ಟ್ಯಾಗ್‌ಗಳ ಮೂಲಕ ದೈನಂದಿನ ವಹಿವಾಟು 2019ರ ಜನವರಿಯಲ್ಲಿ 8 ಲಕ್ಷದಿಂದ 2020ರ ಜನವರಿಗೆ ದಿನಕ್ಕೆ ಸುಮಾರು 30 ಲಕ್ಷ ರೂ.ಗೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿಗಳ ಶ್ರೇಷ್ಠ ಪ್ರಶಸ್ತಿ- 2019 ಕಾರ್ಯಕ್ರಮದಲ್ಲಿ ಹೇಳಿದರು.
ಜೈಪುರ ಪ್ರದೇಶದ ಜೋಧ್‌ಪುರ ಟೋಲ್ ಪ್ಲಾಜಾ ಫಾಸ್ಟ್‌ಟ್ಯಾಗ್‌ಗಳ ಅನುಷ್ಠಾನದಲ್ಲಿ ಇತರರನ್ನು ಮೀರಿಸಿದೆ. ಶೇ.91ರಷ್ಟು ಟೋಲ್ ಸಂಗ್ರಹವು ಫಾಸ್ಟ್‌ಟ್ಯಾಗ್‌ಗಳ ಮೂಲಕ ನಡೆಯುತ್ತಿದೆ. ಭೋಪಾಲ್ ಮತ್ತು ಗಾಂಧಿನಗರದ ಟೋಲ್ ಪ್ಲಾಜಾಗಳು ಫಾಸ್ಟ್ಟ್ಯಾಗ್ ಅನುಷ್ಠಾನದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿವೆ ಎಂದು ಮಾಹಿತಿ ನೀಡಿದರು.