ನವದೆಹಲಿ: ವಾಯುಮಾಲಿನ್ಯ ನಿರ್ವಹಣೆಯಲ್ಲಿ ವಿಫಲವಾದ ಫರೀದಾಬಾದ್ ಬಿಲ್ಡರ್ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್ಜಿಟಿ) 10 ಕೋಟಿ ರೂ. ದಂಡ ವಿಧಿಸಿದೆ.
ಸ್ಮಾರ್ಟ್ ಹೌಸಿಂಗ್ ಪ್ರೈವೇಟ್ ಲಿಮಿಟೆಡ್ ಭವಿಷ್ಯದಲ್ಲಿ ಇಂತಹ ತಪ್ಪುಗಳನ್ನು ಮತ್ತೆ ಮರುಕಳಿಸಿದಂತೆ ಎಚ್ಚವಹಿಸಬೇಕು. ಪರಿಸರ ಸಂರಕ್ಷಣೆಯ ಮಾನದಂಡಗಳನ್ನು ಪಾಲಿಸದಿದ್ದರೇ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಹರಿಯಾಣ ರಾಜ್ಯ ಸರ್ಕಾರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪೀಠ ನಿರ್ದೇಶನ ನೀಡಿದೆ.
'ವೆಸ್ಟಾ ಹೈಟ್ಸ್' ಯೋಜನೆಯಲ್ಲಿ ಸಾರ್ವಜನಿಕರ ಉಪಯುಕ್ತ ಸ್ಥಳಗಳನ್ನು ಸ್ವಾಧೀನಪಡಿಸಿಕೊಳ್ಳಲು ಯತ್ನಿಸಿದೆಯಾ ಎಂದು ಕೇಳಿದೆ ಎನ್ಜಿಟಿ, ಖಾಲಿ ಇರುವ ಫ್ಲ್ಯಾಟ್‌ಗಳನ್ನು ಮೊಹರ ಮಾಡಿಸಿಕೊಂಡಲಿ ಮರು ಸ್ವಾಧೀನಪಡಿಸಿಕೊಳ್ಳುವಂತೆ ಸೂಚಿಸಿದೆ.
ಫರೀದಾಬಾದ್‌ನ ಸೆಕ್ಟರ್-86ರಲ್ಲಿನ ವಸತಿ ಯೋಜನೆ 'ವೆಸ್ಟಾ ಹೈಟ್ಸ್' ಬಸೆಲ್ವಾ ಗ್ರಾಮದಲ್ಲಿ ಪರಿಸರ ತೆರವು ಮತ್ತು ನೀರು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ, 1974ರ ಷರತ್ತುಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಮುಕುಂದ್ ಧೋಟೆ ಸಲ್ಲಿಸಿದ್ದ ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ, ಬಿಲ್ಡರ್ಗೆ 10 ಕೋಟಿ ರೂ. ದಂಡದ ಆದೇಶ ನೀಡಿದೆ.