ETV Bharat / business

ದುಬಾರಿ ದಂಡಕ್ಕೆ ಭಯಪಟ್ಟು ಕಡಿಮೆಯಾಯ್ತು ಸಂಚಾರ ನಿಯಮ ಉಲ್ಲಂಘನೆ..!

ನೂತನ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದ ನಂತರ ವಾಹನ ಚಾಲಕರು ಮತ್ತು ಮಾಲೀಕರು ನಿಯಮಗಳ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ. ದುಬಾರಿ ದಂಡಕ್ಕೆ ಹೆದರಿ ಯಾವುದೇ ಸಂಚಾರ ನಿಯಮಗಳ ಉಲ್ಲಂಘನೆಗೆ ಅವಕಾಶಗಳು ನೀಡುತ್ತಿಲ್ಲ ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Oct 27, 2019, 7:15 PM IST

ನವದೆಹಲಿ: ಸಂಚಾರ ನಿಯಮಗಳ ಉಲ್ಲಂಘನೆ ನಿಯಂತ್ರಣಕ್ಕೆ ಸೆಪ್ಟೆಂಬರ್ 1ರಿಂದ ಜಾರಿಗೆ ತರಲಾದ ನೂತನ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯ ಬಳಿಕ ಹೆಚ್ಚಿನ ವಾಣಿಜ್ಯ ವಾಹನಗಳು ನಿಯಮ ಉಲ್ಲಂಘಿಸುತ್ತಿಲ್ಲ. ಕಳೆದ ಎಂಟು ತಿಂಗಳ ಮಾಸಿಕ ಸರಾಸರಿಗೆ ಹೋಲಿಸಿದರೆ ಸಾರಿಗೆ ಇಲಾಖೆಯ ಎನ್​​ಫೋರ್ಸ್​ಮೆಂಟ್​ ವಿಂಗ್​ ದಂಡ ವಿಧಿಸಿದ ವಾಹನಗಳ ಸಂಖ್ಯೆಯು ಸೆಪ್ಟೆಂಬರ್‌ನಲ್ಲಿ ಶೇ.70ಕ್ಕಿಂತ ಹೆಚ್ಚಾಗಿದೆ ಎಂಬುದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.

ಸೆಪ್ಟೆಂಬರ್‌ನಲ್ಲಿ ಎನ್​ಫೋರ್ಸ್​ಮೆಂಟ್​ ವಿಂಗ್, 6,458 ವಾಹನಗಳನ್ನು ವಿವಿಧ ಅಪರಾಧಗಳಿಗೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಡಿಸಿತು. ಇದು ಜನವರಿಯಿಂದ ಅಗಸ್ಟ್‌ವರೆಗೆ ಜರುಗಿಸಿದ ಕಾನೂನು ಕ್ರಮಗಳಿಗೆ ಹೋಲಿಸಿದರೆ ಸರಾಸರಿ 22,044 ವಾಹನಗಳಿಂದ ಶೇ. 70.7ರಷ್ಟು ಕುಸಿತ ಕಂಡು ಬಂದಿದೆ. ತಿಂಗಳಿಗೆ ಒಮ್ಮೆ ಸಂಖ್ಯೆಗಳನ್ನು ಗಣನೆಗೆ ತೆಗೆದುಕೊಂಡರೂ ಅಗಸ್ಟ್‌ನಲ್ಲಿ 17,227 ವಾಹನಗಳನ್ನು ವಿಚಾರಣೆಗೆ ಒಳಪಡಿಸಿದಂತಾಗುತ್ತದೆ ಎಂದು ವರದಿಯಲ್ಲಿದೆ.

ಸೆಪ್ಟೆಂಬರ್‌ನಲ್ಲಿ ಎನ್​ಫೋರ್ಸ್​​ಮೆಂಟ್ ವಿಂಗ್ 9,186 ಚಲನ್‌ಗಳನ್ನು ಹೊರಡಿಸಿದೆ. ಇದು ಜನವರಿಯಿಂದ ಅಗಸ್ಟ್‌ ನಡುವಿನ ಮಾಸಿಕ 25,218 ಚಲನ್​ಗಳ ಸರಾಸರಿಗೆ ಹೋಲಿಸಿದರೆ ಶೇ. 63.5ರಷ್ಟು ಕಡಿಮೆಯಾಗಿದೆ. ಅಗಸ್ಟ್‌ನಲ್ಲಿ 20,276 ಚಲನ್‌ಗಳು ನೀಡಲಾಗಿದೆ.

ನೂತನ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದ ನಂತರ ವಾಹನ ಚಾಲಕರು ಮತ್ತು ಮಾಲೀಕರು ನಿಯಮಗಳ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ. ದುಬಾರಿ ದಂಡಕ್ಕೆ ಹೆದರಿ ಯಾವುದೇ ಸಂಚಾರ ನಿಯಮಗಳ ಉಲ್ಲಂಘನೆಗೆ ಅವಕಾಶಗಳನ್ನು ನೀಡುತ್ತಿಲ್ಲ ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎನ್ನಲಾಗುತ್ತಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.