ETV Bharat / business

2020ರ ಭಾರತದ ಜಿಡಿಪಿ ಶೇ. 5.3ರಿಂದ 2.5ಕ್ಕೆ ತಗ್ಗಿಸಿದ ಮೂಡಿಸ್!​? - ವಾಣಿಜ್ಯ ಸುದ್ದಿ

ಕೋವಿಡ್​ 19 ಪ್ರಪಂಚದಾದ್ಯಂತ ಹಬ್ಬಿದ್ದರಿಂದ ಇತ್ತೀಚಿನ ಆರ್ಥಿಕ ಚಟುವಟಿಕೆಗಳು ತೀವ್ರ ಕುಸಿತ ಕಂಡಿವೆ. ಲಾಕ್‌ಡೌನ್‌ಗಳು ಮತ್ತು ಸಾಮಾಜಿಕ ಅಂತರ ಮುಂದುವರಿದ ಮತ್ತು ಉದಯೋನ್ಮುಖ ಮಾರುಕಟ್ಟೆಗಳಿಗೂ ವಿಸ್ತರಿಸಿಕೊಂಡಿವೆ. ಹಣಕಾಸು ವಲಯದ ಚಂಚಲತೆ ಉದ್ಭವಿಸಿದೆ.

GDP
ಜಿಡಿಪಿ
author img

By

Published : Mar 27, 2020, 3:57 PM IST

ನವದೆಹಲಿ : ಮೂಡಿಸ್ ಇನ್​ವೆಸ್ಟರ್ಸ್​ ಸರ್ವೀಸ್ 2020ರಲ್ಲಿನ ಭಾರತದ ಜಿಡಿಪಿ ಶೇ. 2.5ರಷ್ಟು ಇರಲಿದೆ ಎಂದು ಅಂದಾಜಿಸಿದೆ.

ಈ ಹಿಂದೆ ಭಾರತದ ಜಿಡಿಪಿ ಶೇ. 5.3ರಷ್ಟು ಇರಲಿದೆ ಎಂದು ಭವಿಷ್ಯ ನುಡಿದಿತ್ತು. ಜಗತ್ತಿನಾದ್ಯಂತ ಆವರಿಸಿರುವ ಕೊರೊನಾ ವೈರಸ್​ ಬಿಕ್ಕಟ್ಟು ವಿಶ್ವ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ಹೀಗಾಗಿ, ಬೆಳವಣಿಗೆ ದರ ಇಳಿಕೆ ಮಾಡಿದ್ದಾಗಿ ಸ್ಪಷ್ಟನೆ ನೀಡಿದೆ. ಭಾರತವು ಅಂದಾಜು ಶೇ. 2.5ರಷ್ಟು ಬೆಳವಣಿಗೆಯ ದರದಲ್ಲಿ ಆದಾಯದಲ್ಲಿ ತೀವ್ರ ಕುಸಿತ ಕಾಣುವ ಸಾಧ್ಯತೆಯಿದೆ.

ಇದು ದೇಶಿಯ ಬೇಡಿಕೆ ಮತ್ತು 2021ರಲ್ಲಿ ಚೇತರಿಕೆಯ ವೇಗ ಮತ್ತಷ್ಟು ತಗ್ಗಲಿದೆ ಎಂದು ಗ್ಲೋಬಲ್ ಮ್ಯಾಕ್ರೋ ಔಟ್​ಲುಕ್ 2020-21ರಲ್ಲಿ ಹೇಳಿದೆ. ಭಾರತದಲ್ಲಿ ಸಾಲದ ಹರಿವು ಬ್ಯಾಂಕ್ ಮತ್ತು ಬ್ಯಾಂಕೇತರ ಹಣಕಾಸು ಕ್ಷೇತ್ರಗಳಲ್ಲಿನ ತೀವ್ರ ನಗದು ನಿರ್ಬಂಧದಿಂದಾಗಿ ಆರ್ಥಿಕತೆಯು ಈಗಾಗಲೇ ತೀವ್ರ ಅಡಚಣೆಗೊಳಗಾಗಿದೆ ಎಂದು ಹೇಳಿದೆ.

ಕೊರೊನಾ ವೈರಸ್ ಆಘಾತದಿಂದ ಆರ್ಥಿಕ ವೆಚ್ಚಗಳು ಹೆಚ್ಚಾಗುತ್ತಿವೆ. ವಿಶೇಷವಾಗಿ ಮುಂದುವರಿದ ರಾಷ್ಟ್ರಗಳ ಆರ್ಥಿಕತೆಗಳಲ್ಲಿ ಅದು ವ್ಯಾಪಕವಾಗಿದೆ. 2020ಕ್ಕೆ ನಮ್ಮ ಜಾಗತಿಕ ಬೆಳವಣಿಗೆಯ ಮುನ್ಸೂಚನೆಗಳನ್ನು ಕೆಳಕ್ಕೆ ಪರಿಷ್ಕರಿಸಿದ್ದೇವೆ. ಕುಸಿತವನ್ನು ಎದುರಿಸಲು ನೀತಿ ಪ್ರತಿಕ್ರಿಯೆಗಳು ಸ್ಪಷ್ಟವಾಗಿ ಸೂಚಿಸಿದ್ದೇವೆ ಎಂದಿದೆ.

ಕೋವಿಡ್​ 19 ಪ್ರಪಂಚದಾದ್ಯಂತ ಹಬ್ಬಿದ್ದರಿಂದ ಇತ್ತೀಚಿನ ಆರ್ಥಿಕ ಚಟುವಟಿಕೆಗಳು ತೀವ್ರ ಕುಸಿತ ಕಂಡಿವೆ. ಲಾಕ್‌ಡೌನ್‌ಗಳು ಮತ್ತು ಸಾಮಾಜಿಕ ಅಂತರ ಮುಂದುವರಿದ ಮತ್ತು ಉದಯೋನ್ಮುಖ ಮಾರುಕಟ್ಟೆಗಳಿಗೂ ವಿಸ್ತರಿಸಿಕೊಂಡಿವೆ. ಹಣಕಾಸು ವಲಯದ ಚಂಚಲತೆ ಉದ್ಭವಿಸಿದೆ.

ಪ್ರಮುಖ ಕೇಂದ್ರೀಯ ಬ್ಯಾಂಕ್​ಗಳ ಮತ್ತು ಸರ್ಕಾರಗಳ ತ್ವರಿತ ಪ್ರತಿಕ್ರಿಯೆಗಳನ್ನು ಜಾರಿಗೆ ತಂದಿದ್ದರೂ 2008ರ ಜಾಗತಿಕ ಆರ್ಥಿಕ ಕೊನೆಯ ಅವಧಿಯಲ್ಲಿ ಕಂಡು ಬಂದ ಒತ್ತಡ ಪ್ರಸ್ತುತದಲ್ಲಿದೆ ಎಂದು ವಿವರಣೆ ನೀಡಿದೆ ಮೂಡಿಸ್‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.