ETV Bharat / business

ಮೋದಿ ಆರ್ಥಿಕತೆ ಮೂಡೀಸ್ ಶ್ರೇಣಿಯ ಕಳಪೆಗಿಂತ ಒಂದು ಹೆಜ್ಜೆ ಮೇಲಿದೆ.. ರಾಹುಲ್​ ಗಾಂಧಿ ವ್ಯಂಗ್ಯ

author img

By

Published : Jun 2, 2020, 5:41 PM IST

ಮೂಡೀಸ್​ ಇನ್ವೆಸ್ಟರ್ ಸರ್ವೀಸ್​ ಭಾರತದ ಕ್ರೆಡಿಟ್​ ರೇಟಿಂಗ್‌ನ ಕಡಿಮೆ ಮಾಡಿದೆ. ಇದು ಕಳೆದ ಎರಡು ದಶಕಗಳಲ್ಲಿ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ತಗ್ಗಿಸಿದೆ. ನೀತಿ ರೂಪಿಸುವವರು ಕಡಿಮೆ ಬೆಳವಣಿಗೆಯ ಅಪಾಯಗಳನ್ನು ತಗ್ಗಿಸುವ ಸವಾಲನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

Congress leader Rahul Gandhi
ರಾಹುಲ್​ ಗಾಂಧಿ

ನವದೆಹಲಿ : ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಭಾರತದ ಆರ್ಥಿಕತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಜಾಗತಿಕ ರೇಟಿಂಗ್ ಏಜೆನ್ಸಿ ಮೂಡೀಸ್ ಕಳಪೆಗಿಂತ ಕೇವಲ ಒಂದು ಹೆಜ್ಜೆ ಮೇಲೆ ಇದೆ ಎಂದು ಹೇಳಿದ್ದಾರೆ.

ಮೋದಿ ನಿರ್ವಹಿಸುತ್ತಿರುವ ಭಾರತದ ಆರ್ಥಿಕತೆಯು ಮೂಡೀಸ್​ ರೇಟಿಂಗ್​ನ ಕಳಪೆಗಿಂತ ಒಂದು ಹಂತ ಮೇಲಿದೆ. ಬಡವರಿಗೆ ಮತ್ತು ಎಂಎಸ್‌ಎಂಇ ವಲಯಕ್ಕೆ ಬೆಂಬಲದ ಕೊರತೆ ಇರುವುದರಿಂದ ಮತ್ತಷ್ಟು ಕೆಟ್ಟ ಪರಿಸ್ಥಿತಿ ಬರಬಹುದು ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

Rahul Gandhi
ರಾಹುಲ್​ ಗಾಂಧಿ ಟ್ವೀಟ್

ಮೂಡೀಸ್​ ಇನ್ವೆಸ್ಟರ್ ಸರ್ವೀಸ್​ ಭಾರತದ ಕ್ರೆಡಿಟ್​ ರೇಟಿಂಗ್‌ನ ಕಡಿಮೆ ಮಾಡಿದೆ. ಇದು ಕಳೆದ ಎರಡು ದಶಕಗಳಲ್ಲಿ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ತಗ್ಗಿಸಿದೆ. ನೀತಿ ರೂಪಿಸುವವರು ಕಡಿಮೆ ಬೆಳವಣಿಗೆಯ ಅಪಾಯಗಳನ್ನು ತಗ್ಗಿಸುವ ಸವಾಲನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಮೂಡೀಸ್​ ಬಿಎಎಯಿಂದ ಬಿಎಎ3ಗೆ ಭಾರತದ ರೇಟಿಂಗ್​ ಇಳಿಕೆ ಮಾಡಿದೆ. 40 ವರ್ಷಗಳಲ್ಲಿ ಪ್ರಥಮ ಬಾರಿಗೆ ಜಿಡಿಪಿ ದರ ಶೇ.4ರಷ್ಟು ಕುಸಿತ ಕಾಣಲಿದೆ ಎಂದು ಅಂದಾಜಿಸಿದೆ. ಬಿಎಎ3 ರೇಟಿಂಗ್ ಅತ್ಯಂತ ಕಡಿಮೆ ಹೂಡಿಕೆ ಶ್ರೇಣಿ ಆಗಿದ್ದು, ಕೇವಲ ಕಳೆಪೆಗಿಂತ ಕೇವಲ ಒಂದು ಹಂತ ಮೇಲಿನದ್ದಾಗಿದೆ. ಈ ಹಿಂದೆ 1998ರಲ್ಲಿ ಮೂಡೀಸ್ ಇಂತಹ ಇಳಿಕೆ ರೇಟಿಂಗ್ ನೀಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.