ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 2ನೇ ಅವಧಿಯ ಮೂರನೇ ಹಂತದ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆಯನ್ನು 2019ರ ಅಗಸ್ಟ್ 30ರಂದು ಘೋಷಿಸಲಾಗಿತ್ತು. ಅಂದು ಘೋಷಣೆಯಾದ ಸಾರ್ವಜನಿಕ ವಲಯದ ಹತ್ತು ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆಯು ಇಂದಿನಿಂದ ನಡೆಯಲಿದೆ.
ಈ ಪ್ರಕ್ರಿಯೆಯಿಂದ ಒಟ್ಟು ಹತ್ತು ಬ್ಯಾಂಕ್ಗಳಲ್ಲಿ ಆರು ದೊಡ್ಡ ಬ್ಯಾಂಕ್ಗಳಾಗಿ ಹೊರಹೊಮ್ಮಲಿವೆ. ಇದರಲ್ಲಿ ಕರ್ನಾಟಕದಲ್ಲಿ ಜನ್ಮ ತಳೆದ ಮೂರು ರಾಷ್ಟ್ರೀಕೃತ ಬ್ಯಾಂಕ್ಗಳು ಸೇರಿವೆ. ಇದಕ್ಕೂ ಮೊದಲು ನವಂಬರ್ 2018ರಲ್ಲಿ ಕನ್ನಡ ನೆಲದ ವಿಜಯಾ ಬ್ಯಾಂಕ್‌ನ ರಾಷ್ಟ್ರೀಯ ಬ್ಯಾಂಕ್ ಉಳಿಸಿಕೊಳ್ಳಲು ದೇನಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಜೊತೆಗೆ ವಿಲೀನಗೊಳಿಸಲಾಯಿತು. ಇದಕ್ಕೂ ಮೊದಲೇ ದೇಶದ ಹಳೆಯ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಮೈಸೂರನ್ನೂ ಎಸ್ಬಿಐನೊಂದಿಗೆ ಮರ್ಜ್ ಮಾಡಲಾಯಿತು.
ವಿಲೀನವಾಗಲಿರುವ ರಾಜ್ಯದ 3 ಬ್ಯಾಂಕ್ಗಳು
: ಕೆನರಾ ಬ್ಯಾಂಕ್,
ಕಾರ್ಪೊರೇಷನ್ ಬ್ಯಾಂಕ್,
ಸಿಂಡಿಕೇಟ್ ಬ್ಯಾಂಕ್
4ನೇ ಹಂತದಲ್ಲಿ ವಿಲೀನವಾಗುವ ಬ್ಯಾಂಕ್ಗಳು
ಓರಿಯಂಟಲ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಯುನೈಟೆಡ್ ಬ್ಯಾಂಕ್,
ಯೂನಿಯನ್ ಬ್ಯಾಂಕ್, ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್, ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್
, ಇಂಡಿಯನ್ ಬ್ಯಾಂಕ್ ಮತ್ತು ಅಲಹಾಬಾದ್ ಬ್ಯಾಂಕ್
ಸಾರ್ವಜನಿಕ ಬ್ಯಾಂಕ್‌ಗಳನ್ನು ವಿಲೀನಗೊಳಿಸಿ ಜಾಗತಿಕ ಮಟ್ಟದ ಬೃಹತ್ ಬ್ಯಾಂಕ್‌ಗಳ ರಚನೆ ಮಾಡಲಾಗುವುದು. ಹೆಚ್ಚು ಬ್ಯಾಂಕ್‌ಗಳಿದ್ದರೆ ನಿರ್ವಹಣೆ ಮತ್ತು ವಹಿವಾಟು ಕ್ಲಿಷ್ಟಕರ ಆಗುತ್ತಿದೆ. ಬ್ಯಾಂಕಿಂಗ್ ವೆಚ್ಚ ನಿಯಂತ್ರಣಕ್ಕೆ ಸಹಕಾರಿ ಆಗಲಿದೆ ಎಂಬ ಸ್ಪಷ್ಟನೆಯನ್ನು ಕೇಂದ್ರ ಸರ್ಕಾರ ನೀಡಿತ್ತು.
ಮಾ. 4ರಂದು ಬ್ಯಾಂಕ್‌ಗಳ ವಿಲೀನಕ್ಕೆ ಕೇಂದ್ರ ಸಚಿವ ಸಂಪುಟ ಅಸ್ತು : ವಿಲೀನಗೊಳ್ಳುವ ಬ್ಯಾಂಕ್ಗಳು ಸಲ್ಲಿಸಿದ ವಿಲೀನದ ಯೋಜನೆಯೊಂದಿಗೆ ಪಿಎಸ್‌ಯು ಬ್ಯಾಂಕ್ ಸಂಯೋಜನೆಗೂ ಕೇಂದ್ರ ಸಚಿವ ಸಂಪುಟ ಮಾರ್ಚ್ 4ರಂದು ಅನುಮೋದನೆ ನೀಡಿತ್ತು. 'ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆಯಿಂದ ಪ್ರಮುಖ ಬ್ಯಾಂಕಿಂಗ್ ಕಾರ್ಯಾಚರಣೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ' ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭರವಸೆ ನೀಡಿದ್ದರು.