ನವದೆಹಲಿ: ಅಂತಾರಾಷ್ಟ್ರೀಯ ಹಣಕಾಸು ನಿಧಿಯು ಇತ್ತೀಚೆಗೆ ಭಾರತೀಯ ಆರ್ಥಿಕತೆ ಚೇತರಿಕೆ ಬಗ್ಗೆ ತನ್ನ ಅಂದಾಜಿತ ವರದಿ ಸಲ್ಲಿಸಿದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನರೇಂದ್ರ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಮುಂದಿನ ಆರ್ಥಿಕ ವರ್ಷದಲ್ಲಿ ಶೇ 11.5ರಷ್ಟು ಬೆಳವಣಿಗೆಯೊಂದಿಗೆ ಭಾರತದ ಆರ್ಥಿಕತೆಯು ಬಲವಾಗಿ ಪುಟಿದೇಳುವ ನಿರೀಕ್ಷೆಯಿದೆ. ಸಾಂಕ್ರಾಮಿಕ ರೋಗದಿಂದ ಉಂಟಾದ ಹಾನಿಯ ನಂತರ 2021ರಲ್ಲಿ ಜಾಗತಿಕ ಮಟ್ಟದಲ್ಲಿ ತೀವ್ರ ಚೇತರಿಕೆ ಕಂಡುಬರುತ್ತದೆ ಎಂದು ಐಎಂಎಫ್ ಹೇಳಿತ್ತು.
-
Mr Modi’s governance is a lesson in how to ruin one of the world’s fastest growing economies.
— Rahul Gandhi (@RahulGandhi) January 28, 2021 " class="align-text-top noRightClick twitterSection" data="
">Mr Modi’s governance is a lesson in how to ruin one of the world’s fastest growing economies.
— Rahul Gandhi (@RahulGandhi) January 28, 2021Mr Modi’s governance is a lesson in how to ruin one of the world’s fastest growing economies.
— Rahul Gandhi (@RahulGandhi) January 28, 2021
ನಿಧಾನಗತಿಯ ಜಾಗತಿಕ ಆರ್ಥಿಕತೆ ಹಾಗೂ ಕೊರೊನಾ ಪ್ರೇರೇಪಿತ ಲಾಕ್ಡೌನ್ನಿಂದಾಗಿ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿದ್ದ ಭಾರತದ ಆರ್ಥಿಕತೆ ಮೈನಸ್ಗೆ ಕುಸಿದಿದೆ. ಇದೇ ಆವೇಗವನ್ನು ಕಾಯ್ದುಕೊಳ್ಳಲು ವಿಫಲವಾದ ಮೋದಿ ಆಡಳಿತದ ವೈಖರಿಯನ್ನು ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಇದನ್ನೂ ಓದಿ: ಷೇರುಪೇಟೆಯಲ್ಲಿ ಕೋಲಾಹಲ: ಬೆಳಂಬೆಳಗ್ಗೆ 500 ಅಂಕ ಕುಸಿತ, ಕಾರಣ ಇಷ್ಟೆ!
ಶ್ರೀಯುತ ಮೋದಿ ಅವರ ಆಡಳಿತ ವೈಖರಿಯು ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದನ್ನು ಹೇಗೆ ಹಾಳು ಮಾಡಿದರು ಎಂಬುದರ ಪಾಠವಾಗಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ.
ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಮೊದಲ ಸುಧಾರಿತ ಅಂದಾಜಿನ ಪ್ರಕಾರ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) 2020ರಿಂದ 21ರವರೆಗೆ ಶೇ.7.7ರಷ್ಟು ಕುಗ್ಗಬಹುದು ಎಂದು ಊಹಿಸಿದೆ.