ನವದೆಹಲಿ : ಕೇಂದ್ರೀಯ ನೇರ ತೆರಿಗೆ ಮಂಡಳಿಯು 2018-19ನೇ ಸಾಲಿನ (2019-20ನೇ ವಿತ್ತೀಯ ವರ್ಷ) ಪರಿಷ್ಕೃತ ಮತ್ತು ತಡವಾದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ದಿನಾಂಕವನ್ನು ಮತ್ತೆ ಎರಡು ತಿಂಗಳು ವಿಸ್ತರಿಸಿದೆ.
ಸಿಬಿಡಿಟಿಯು ಪರಿಷ್ಕೃತ ಆದೇಶವನ್ನು ಸೆಪ್ಟೆಂಬರ್ 30ರಂದು ಹೊರಡಿಸಿದೆ. ಕೋವಿಡ್-19 ಸೋಂಕಿನ ಪರಿಸ್ಥಿತಿಯಿಂದಾಗಿ ತೆರಿಗೆದಾರರು ಎದುರಿಸುತ್ತಿರುವ ನೈಜ ತೊಂದರೆಗಳನ್ನು ಪರಿಗಣಿಸಲಾಗಿದೆ.
2019-20ರ ಮೌಲ್ಯಮಾಪನ ವರ್ಷಕ್ಕೆ ವಿಳಂಬ/ಪರಿಷ್ಕೃತ ಐಟಿಆರ್ಗಳನ್ನು 2019-20 ಸೆಪ್ಟೆಂಬರ್ 30ರಿಂದ 2020ರ ನವೆಂಬರ್ 30ರವರೆಗೆ ನೀಡಲು ನಿಗದಿತ ದಿನಾಂಕ ವಿಸ್ತರಿಸುತ್ತದೆ ಎಂದು ಸಿಬಿಡಿಟಿ ಟ್ವೀಟ್‌ನಲ್ಲಿ ತಿಳಿಸಿದೆ.
2019-20ರ ಹಣಕಾಸು ವರ್ಷಕ್ಕೆ ಪರಿಷ್ಕೃತ ಮತ್ತು ವಿಳಂಬದ ಐಟಿಆರ್‌ನ ಸಲ್ಲಿಸುವ ಗಡುವಿನ 4ನೇ ವಿಸ್ತರಣೆಯಾಗಿದೆ. ಅಂತಹ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕ ಮೌಲ್ಯಮಾಪನ ವರ್ಷದ ಮಾರ್ಚ್ 31 ಆಗಿದೆ.
ಕೋವಿಡ್-19 ಜಾಗತಿಕ ಸಾಂಕ್ರಾಮಿಕ ರೋಗದಿಂದಾಗಿ ತೆರಿಗೆದಾರರು ಎದುರಿಸುತ್ತಿರುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು, ಸಿಬಿಡಿಟಿ ಮಾರ್ಚ್ 31ರಿಂದ ಜೂನ್ 30ರವರೆಗೆ ದಿನಾಂಕ ವಿಸ್ತರಿಸಿತ್ತು. ಅದನ್ನು ಮತ್ತೆ ಜುಲೈ 31ಕ್ಕೆ ವಿಸ್ತರಿಸಲಾಯಿತು.
ಜಾಗತಿಕ ಸಾಂಕ್ರಾಮಿಕ ರೋಗದ ಪ್ರಮಾಣ ಕಡಿಮೆಯಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಜುಲೈ 31ರಿಂದ ಸೆಪ್ಟೆಂಬರ್ 30ರವರೆಗೆ ದಿನಾಂಕ ವಿಸ್ತರಿಸಲು ಸಿಬಿಡಿಟಿ ನಿರ್ಧರಿಸಿದೆ.