ETV Bharat / business

ಕೊರೊನಾ ವೈರಸ್​ನ ಆರ್ಥಿಕ ಬಿಕ್ಕಟ್ಟಿನಲ್ಲಿ 'ಹೆಲಿಕಾಪ್ಟರ್​ ಮನಿ' ಚರ್ಚೆ... ಏನಿದು ಗೊತ್ತೆ?

author img

By

Published : Apr 13, 2020, 10:58 PM IST

ಹೆಲಿಕಾಪ್ಟರ್ ಮನಿ ಸಾಂಪ್ರದಾಯಿಕ ಅಲ್ಲದ ಹಣಕಾಸು ನಿಯಮ. ಹಾದಿ ತಪ್ಪಿದ ಆರ್ಥಿಕತೆಯನ್ನು ಮತ್ತೆ ಸರಿದಾರಿಗೆ ತರಲು ಬಳಸುವ ವಿತ್ತೀಯ ತಂತ್ರ. ದೊಡ್ಡ ಮೊತ್ತದ ಹಣವನ್ನು ಮುದ್ರಿಸಿ ಅದನ್ನು ಜನರಿಗೆ ಹಂಚುವುದು. 'ಹೆಲಿಕಾಪ್ಟರ್ ಮನಿ' ಎಂಬ ಪದ ಆಗಸದಿಂದ ಹೆಲಿಕಾಪ್ಟರ್ ಮೂಲಕ ಹಣವನ್ನು ಕೆಳಗೆ ಹಾಕುವುದು ಎಂದಾಗುತ್ತದೆ. ಹೆಲಿಕಾಪ್ಟರ್ ಡ್ರಾಪ್ ಎಂದೂ ಕರೆಯಲ್ಪಡುವ ಈ ಪದವನ್ನು 1969ರಲ್ಲಿ ಅಮೆರಿಕಾದ ಅರ್ಥಶಾಸ್ತ್ರಜ್ಞ ಮಿಲ್ಟನ್ ಫ್ರೀಡ್ಮನ್ ಅವರು ಪ್ರಥಮ ಬಾರಿಗೆ ಬಳಸಿದರು. ಬಹಳ ಕಷ್ಟದಲ್ಲಿ ಇರುವ ಆರ್ಥಿಕತೆಗೆ ದಿಢೀರನೇ ಹಣವನ್ನು ಪೂರೈಸಿ ಆ ಸಂದಿಗ್ಧ ಸ್ಥಿತಿಯಿಂದ ಆಚೆಗೆ ತರಲು ಬಳಸುವುದು ಎಂದರ್ಥ.

Helicopter Money
ಹೆಲಿಕಾಪ್ಟರ್ ಮನಿ

ಹೈದರಾಬಾದ್: ದಿನ ಕಳೆದಂತೆ ಕೊರೊನಾ ವೈರಸ್ ಪೀಡಿತ ಆರ್ಥಿಕತೆ ಪ್ರಪಾತಕ್ಕೆ ಬೀಳುತ್ತಿದೆ. ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ.ರಾವ್ ಅವರು ಆದಾಯದ ಕೊರತೆಯಿಂದಾಗಿ ಭಾರೀ ಆರ್ಥಿಕ ಹೊರೆಯಿಂದ ಬಳಲುತ್ತಿರುವ ರಾಜ್ಯಗಳಿಗೆ ಸಹಾಯ ಮಾಡಲು ‘ಹೆಲಿಕಾಪ್ಟರ್ ಹಣ’ ಬಳಸುಬೇಕು ಎಂದು ಪ್ರಸ್ತಾಪಿಸಿದ್ದಾರೆ.

ಏನಿದು ಹೆಲಿಕಾಪ್ಟರ್ ಮನಿ?

ಸರಳವಾಗಿ ಹೇಳುವುದಾದರೆ ಹೆಲಿಕಾಪ್ಟರ್ ಹಣವು ಕೇಂದ್ರ ಬ್ಯಾಂಕ್ ಅಥವಾ ಕೇಂದ್ರ ಸರ್ಕಾರವು ಸಾರ್ವಜನಿಕರಿಗೆ ಹೆಚ್ಚಿನ ಪ್ರಮಾಣದ ಹಣವನ್ನು ಸರಬರಾಜು ಮಾಡುವುದು.

ಇದೊಂದು ಸಾಂಪ್ರದಾಯಿಕ ಅಲ್ಲದ ಹಣಕಾಸು ನಿಯಮ. ಹಾದಿ ತಪ್ಪಿದ ಆರ್ಥಿಕತೆಯನ್ನು ಮತ್ತೆ ಸರಿದಾರಿಗೆ ತರಲು ಬಳಸುವ ವಿತ್ತೀಯ ತಂತ್ರ. ದೊಡ್ಡ ಮೊತ್ತದ ಹಣವನ್ನು ಮುದ್ರಿಸಿ ಅದನ್ನು ಜನರಿಗೆ ಹಂಚುವುದು. 'ಹೆಲಿಕಾಪ್ಟರ್ ಮನಿ' ಎಂಬ ಪದ ಆಗಸದಿಂದ ಹೆಲಿಕಾಪ್ಟರ್ ಮೂಲಕ ಹಣವನ್ನು ಕೆಳಗೆ ಹಾಕುವುದು ಎಂದಾಗುತ್ತದೆ. ಹೆಲಿಕಾಪ್ಟರ್ ಡ್ರಾಪ್ ಎಂದೂ ಕರೆಯಲ್ಪಡುವ ಈ ಪದವನ್ನು 1969ರಲ್ಲಿ ಅಮೆರಿಕಾದ ಅರ್ಥಶಾಸ್ತ್ರಜ್ಞ ಮಿಲ್ಟನ್ ಫ್ರೀಡ್ಮನ್ ಅವರು ಪ್ರಥಮ ಬಾರಿಗೆ ಬಳಸಿದರು. ಬಹಳ ಕಷ್ಟದಲ್ಲಿ ಇರುವ ಆರ್ಥಿಕತೆಗೆ ದಿಢೀರನೇ ಹಣವನ್ನು ಪೂರೈಸಿ ಆ ಸಂದಿಗ್ಧ ಸ್ಥಿತಿಯಿಂದ ಆಚೆಗೆ ತರಲು ಬಳಸುವುದು ಎಂದರ್ಥ.

ಹೆಲಿಕಾಪ್ಟರ್ ಮನಿಯನ್ನು ಹಣದುಬ್ಬರ ಮತ್ತು ಆರ್ಥಿಕ ಉತ್ಪಾದನೆ ಭೀಕರ ಸಂದರ್ಭಗಳಲ್ಲಿ ಅಧಿಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಾರೆ.

ಪ್ರಾಯೋಗಿಕ ದೃಷ್ಟಿಕೋನದಿಂದ ನೋಡಿದರೆ ಸೈದ್ಧಾಂತಿಕವಾಗಿ ಕಾರ್ಯಸಾಧ್ಯವೆಂದು ತೋರುತ್ತದೆ ಆದರೂ ಇದನ್ನು ಕಾಲ್ಪನಿಕ, ಅಸಾಂಪ್ರದಾಯಿಕ ವಿತ್ತೀಯ ನೀತಿ ಸಾಧನವೆಂದು ಪರಿಗಣಿಸಲಾಗಿದೆ. ಇದರ ಅನುಷ್ಠಾನವು ಹೆಚ್ಚು ಅಸಂಭವವಾಗಿದೆ.

ಮೊದಲ ಬಾರಿಗೆ ಬಳಸಿದ್ದು ಯಾವಾಗ?

ತೀರ ಅಗತ್ಯ ಇದ್ದ ಸಂದರ್ಭದಲ್ಲಿ ಕೇಂದ್ರೀಯ ಬ್ಯಾಂಕ್ ಹಣದುಬ್ಬರ ಉಂಟುಮಾಡಬಹುದು ಎಂದು 2002ರಲ್ಲಿ ಬೆನ್ ಬರ್ನಾಂಕೆ ಉಲ್ಲೇಖಿಸಿದಾಗ, ಈ ಕಲ್ಪನೆ ಹೆಚ್ಚು ಪ್ರಾಮುಖ್ಯತೆ ಪಡೆಯಿತು.

ಅಮೆರಿಕದ ಫೆಡರಲ್ ರಿಸರ್ವ್ ಸದಸ್ಯರಾಗಿ ಮತ್ತು ಅದರ ಅಧ್ಯಕ್ಷರಾಗಿ ಅಧಿಕಾರವಧಿಯಲ್ಲಿ ಇದ್ದಾಗ 'ಹೆಲಿಕಾಪ್ಟರ್ ಬೆನ್' ಎಂಬ ಅಡ್ಡಹೆಸರನ್ನು ಬರ್ನಾಂಕೆ ಸೂಚಿಸಲಾಯಿತು.

2002ರ ಭಾಷಣದಲ್ಲಿ ಬರ್ನಾಂಕೆ ಅವರು ವಿಶಾಲ ಆಧಾರಿತ ತೆರಿಗೆ ಕಡಿತ ಉದಾಹರಣೆ ಸಮೆತ ವಿವರಿಸಿದ್ದರು. ಬಡ್ಡಿದರಗಳು ಹೆಚ್ಚಾಗುವ ಯಾವುದೇ ಪ್ರವೃತ್ತಿಯನ್ನು ನಿವಾರಿಸಲು ಮುಕ್ತ-ಮಾರುಕಟ್ಟೆಯಲ್ಲಿ ಖರೀದಿ ಯೋಜನೆಗಳಿಗೆ ಅವಕಾಶ ಕಲ್ಪಿಸಬೇಕು. ಇದು ಖಂಡಿತವಾಗಿಯೂ ಬಳಕೆಗೆ ಪರಿಣಾಮಕಾರಿ ಉತ್ತೇಜಕವಾಗುತ್ತದೆ. ಗೃಹ ಬಳಕೆ ಹೆಚ್ಚಿಸದಿರಲು ನಿರ್ಧರಿಸಿದರೂ ನೈಜ ಮತ್ತು ಹಣಕಾಸಿನ ಸ್ವತ್ತುಗಳನ್ನು ಪಡೆಯಲು ತಮ್ಮ ಹೆಚ್ಚುವರಿ ಹಣವನ್ನು ಬಳಸಿಕೊಂಡು ತಮ್ಮ ಬಂಡವಾಳ ಮರು ಸಮತೋಲನಗೊಳಿಸುತ್ತದೆ. ಇದರ ಪರಿಣಾಮವಾಗಿ ಆಸ್ತಿ ಮೌಲ್ಯಗಳ ಹೆಚ್ಚಳವು ಬಂಡವಾಳದ ವೆಚ್ಚವನ್ನು ಕಡಿಮೆ ಮಾಡುತ್ತದೆ. ಸಂಭಾವ್ಯ ಸಾಲಗಾರರ ಬ್ಯಾಲೆನ್ಸ್ ಶೀಟ್ ಸ್ಥಾನಗಳು ಸುಧಾರಿಸುತ್ತದೆ' ಎಂದಿದ್ದರು.

ಕ್ವಾಂಟಿಟೇಟಿವ್ ಈಸಿಂಗ್ ಅನ್ನು ಕೇಂದ್ರ ಬ್ಯಾಂಕ್​ಗಳು ಮುದ್ರಿಸಿರುವ ನೋಟುಗಳನ್ನು ಸರ್ಕಾರದ ಬಾಂಡ್​ಗಳನ್ನು ಖರೀದಿಸಲು ಬಳಸಲಾಗುತ್ತದೆ. ಎಲ್ಲರೂ ಹೇಳುವ ಹಾಗೆ ಕ್ಯೂಈ ಅನ್ನು ಹೆಲಿಕಾಪ್ಟರ್ ಮನಿ ಎಂದು ಹೇಳಲು ಸಾಧ್ಯವಿಲ್ಲ. ಸರ್ಕಾರದ ವಿತ್ತೀಯ ಕೊರತೆ ನಿವಾರಿಸಲು ಕೇಂದ್ರ ಬ್ಯಾಂಕ್ ನೋಟು ಮುದ್ರಿಸುತ್ತದೆ. ಆದರೆ, ಬಾಂಡ್ ಮೂಲಕವಾಗಿ ಕೇಂದ್ರ ಬ್ಯಾಂಕ್ ಖರೀದಿಸುವ ಆಸ್ತಿಯನ್ನು ವಾಪಸ್ ಪಡೆಯಲು ಸರ್ಕಾರ ಹಣ ಮರುಪಾವತಿಸಬೇಕು. ಹೆಲಿಕಾಪ್ಟರ್ ಮನಿ ಅಂದರೆ ಸರ್ಕಾರದ ಸಾಲಕ್ಕೆ ನೇರವಾಗಿ ಕೇಂದ್ರಬ್ಯಾಂಕ್ ಹಣ ನೀಡುತ್ತದೆ. ಇದನ್ನು ಮರಳಿ ಕೊಡುವತಿಲ್ಲ.

ತೀರಾ ಇತ್ತೀಚೆಗೆ 21ನೇ ಶತಮಾನದುದ್ದಕ್ಕೂ ಸ್ಥಿರವಾದ ಬೆಳವಣಿಗೆ ಎದುರಿಸಿದ ಜಪಾನ್, 2016ರಲ್ಲಿ ಹೆಲಿಕಾಪ್ಟರ್ ಮನಿ ಕಲ್ಪನೆ ಬಳಸಿಕೊಂಡಿತು.

2016ರ ಏಪ್ರಿಲ್0​ನಲ್ಲಿ ಬ್ಲಾಗ್ ಪೋಸ್ಟ್, ಬರ್ನಾಂಕೆ ಹೆಲಿಕಾಪ್ಟರ್ ಮನಿ ಕೆಲವು ಸಂಕಷ್ಟದ ಸಂದರ್ಭಗಳಲ್ಲಿ ಲಭ್ಯವಿರುವ ಅತ್ಯುತ್ತಮ ಪರ್ಯಾಯ ಎಂದು ಹೇಳಿದರು.

ಇತ್ತೀಚಿನ ಚರ್ಚೆಗಳಲ್ಲಿ ಜನರು, ಬ್ಯಾಂಕ್​ಗಳಲ್ಲಿ ಜಮಾ ಮಾಡುವ ಮೂಲಕ ಅಥವಾ ತೆರಿಗೆ ರಿಯಾಯಿತಿಯಾಗಿ ಹೆಲಿಕಾಪ್ಟರ್ ಹಣ ವಿತರಿಸಲಾಗುವುದು ಎಂದು ಊಹಿಸುತ್ತಿದ್ದಾರೆ.

ಇದು ಒಳಗೊಂಡ ಸಮಸ್ಯೆಗಳು ಯಾವುವು?

ಹೆಲಿಕಾಪ್ಟರ್-ಡ್ರಾಪ್ ಮಾದರಿಯ ನೀತಿಯಲ್ಲಿ ಸರ್ಕಾರ ಮತ್ತು ಕೇಂದ್ರೀಯ ಬ್ಯಾಂಕ್ ಒಟ್ಟಾಗಿ ಕೈ ಜೋಡಿಸಬೇಕು.

ಸಿದ್ಧಾಂತದಲ್ಲಿ ಅಡೆತಡೆಗಳು ಪ್ರಸ್ತುತಪಡಿಸದಿದ್ದರೂ ಪ್ರಾಯೋಗಿಕವಾಗಿ ಎರಡು ವಿರಳವಾಗಿ ಮನಬಂದಂತೆ ಕಾರ್ಯನಿರ್ವಹಿಸುತ್ತವೆ. ಪರಸ್ಪರ ಮತ್ತು ವಾಸ್ತವವಾಗಿ ಆಗಾಗ್ಗೆ ಬೇರೆ ಉದ್ದೇಶಗಳಲ್ಲಿ ಕಾರ್ಯನಿರ್ವಹಿಸಬಹುದು.

ಪ್ರಾಯೋಗಿಕವಾಗಿ ಬಳಸಿಕೊಂಡ ರಾಷ್ಟ್ರಗಳು ಯಾವುವು?

ಹೆಲಿಕಾಪ್ಟರ್ ಮನಿ ಮೇಲೆ ಪ್ರಯೋಗ ಮಾಡುವ ದೇಶಗಳ ಪೈಕಿ, ಗ್ರಾಹಕರನ್ನು ಖರ್ಚು ಮಾಡಲು ಒತ್ತಾಯಿಸುವಲ್ಲಿ ಜಪಾನ್‌ನ ಹೆಲಿಕಾಪ್ಟರ್ ಹಣವು ಹೆಚ್ಚು ಪರಿಣಾಮಕಾರಿ ಬಳಸಿಕೊಂಡಿತು.

2019ರಲ್ಲಿ ಜಪಾನ್​ ಒಂದು ಕಾರ್ಯಕ್ರಮ ಪರಿಚಯಿಸಿತು. ಅದು ಅರ್ಹ ಕುಟುಂಬಗಳಿಗೆ ವ್ಯಾಟ್ ಹೆಚ್ಚಳದ ಪರಿಣಾಮ ತಗ್ಗಿಸಲು “ಪ್ರೀಮಿಯಂ” ಶಾಪಿಂಗ್ ವೋಚರ್‌ಗಳನ್ನು ಖರೀದಿಸಲು ಅನುವು ಮಾಡಿಕೊಟ್ಟಿತು. ಶೇ 20ರಷ್ಟು ರಿಯಾಯಿತಿಯಲ್ಲಿ ನೀಡಲಾಗುವ ಚೀಟಿಗಳನ್ನು ಮುನ್ಸಿಪಲ್​ ಕಚೇರಿ ಗೊತ್ತುಪಡಿಸಿದ ಮಳಿಗೆ ಹಾಗೂ ಆಸ್ಪತ್ರೆಗಳಲ್ಲಿ ಸರಕು ಮತ್ತು ಸೇವೆಗಳಿಗೆ ಪಾವತಿಸಲು ಅವುಗಳನ್ನು ಬಳಸಬಹುದು. ಆದರೆ, ಅವು ಮಾರ್ಚ್ ಅಂತ್ಯದಲ್ಲಿ ಮುಕ್ತಾಯಗೊಳ್ಳುತ್ತವೆ ಎಂಬ ವಾಯ್ದೆ ನಿಗದಿಪಡಿಸಿತು.

2020ರ ಫೆಬ್ರವರಿಯಲ್ಲಿ ಹಾಂಗ್ ಕಾಂಗ್ ತನ್ನ ವಯಸ್ಕ ನಾಗರಿಕರಿಗೆ ವೈರಸ್ ಪೀಡಿತ ಆರ್ಥಿಕತೆಯನ್ನು ಹೆಚ್ಚಿಸಲು 1,284 ಡಾಲರ್ ನಗದು ಪಾವತಿಯನ್ನು ನೀಡುವುದಾಗಿ ಘೋಷಿಸಿತು. ಆಸ್ಟ್ರೇಲಿಯಾ ಸಹ ನಗದು ಕರಪತ್ರಗಳನ್ನು ಪರಿಗಣಿನೆಗೆ ತೆಗೆದುಕೊಳ್ಳುತ್ತಿದೆ. 2011ರಲ್ಲಿ ನಡೆದ ಅರಬ್ ಅಶಾಂತಿಯ ವೇಳೆಯಲ್ಲಿ ಹಲವಾರು ಅರೇಬಿಯನ್ ಕೊಲ್ಲಿ ಆರ್ಥಿಕತೆಗಳು ಇದೇ ರೀತಿ ಮಾಡಿದ್ದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.