ETV Bharat / business

ಗುಡ್​ ನ್ಯೂಸ್​: 20 ಲಕ್ಷ ಬಿಪಿಎಲ್​ ಕುಟುಂಬಗಳಿಗೆ ಹೈಸ್ಪೀಡ್​ ಉಚಿತ ಇಂಟರ್​ನೆಟ್​ ಸಂಪರ್ಕ - ಬಿಪಿಎಲ್​​ಮ ಕುಟುಂಬಗಳಿಗೆ ಉಚಿತ ಇಂಟರ್​ನೆಟ್​

ಕೇರಳದ ಬಿಪಿಎಲ್​ ಕುಟುಂಬಗಳಿಗೆ ಇನ್ಮುಂದೆ ಉಚಿತ ಇಂಟರ್​ನೆಟ್​ ದೊರೆಯಲಿದೆ. 20 ಲಕ್ಷ ಕುಟುಂಬಗಳಿಗೆ ಈ ಸೌಲಭ್ಯ ಸಿಗಲಿದ್ದು, ಸಿಎಂ ಪಿಣರಾಯಿ ವಿಜಯನ್​ ಈ ಯೊಜನೆಗೆ ಚಾಲನೆ ನೀಡಿದ್ದಾರೆ.

internet access
internet access
author img

By

Published : Feb 16, 2021, 7:39 AM IST

ತಿರುವನಂತಪುರಂ: ಪ್ರತಿ ಮನೆಗೂ ಹೆಚ್ಚಿನ ವೇಗದ ಮತ್ತು ಕೈಗೆಟುಕುವ ಇಂಟರ್​​ನೆಟೆ ಸಂಪರ್ಕ ಒದಗಿಸುವ ಉದ್ದೇಶಿತ ಕೆಎಫ್‌ಒಎನ್ (ಕೇರಳ ಫೈಬರ್ ಆಪ್ಟಿಕ್ ನೆಟ್‌ವರ್ಕ್)ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಚಾಲನೆ ನೀಡಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ, ಕೆಎಫ್‌ಒಎನ್ ಡಿಜಿಟಲ್ ಕ್ಷೇತ್ರದಲ್ಲಿ ಕ್ರಾಂತಿಯುಂಟು ಮಾಡಲಿದ್ದು, 20 ಲಕ್ಷ ಬಿಪಿಎಲ್ ಕುಟುಂಬಗಳಿಗೆ ಉಚಿತ ಇಂಟರ್​ನೆಟ್​ ಸಂಪರ್ಕವನ್ನು ಒದಗಿಸಲಾಗುವುದು. ಎಲ್ಲಾ 14 ಜಿಲ್ಲೆಗಳ ಹಳ್ಳಿಗಳನ್ನು ಸಹ ಒಳಗೊಳ್ಳುತ್ತದೆ. ಈ ಹಿಂದೆ ಕೇವಲ ಶೇ 10ರಷ್ಟು ಸರ್ಕಾರಿ ಕಚೇರಿಗಳಲ್ಲಿ ಮಾತ್ರ ಅತಿ ವೇಗದ ಇಂಟರ್​​ನೆಟ್​ ಸಂಪರ್ಕವಿತ್ತು. ಕೆಎಫ್‌ಒನ್ ಪ್ರಾರಂಭಿಸುವುದರೊಂದಿಗೆ 30,000 ಸರ್ಕಾರಿ ಸಂಸ್ಥೆಗಳು ಹೆಚ್ಚಿನ ಬ್ರಾಂಡ್ ವ್ಯಾಪ್ತಿಯ ಸಂಪರ್ಕ ಹೊಂದಿವೆ ಎಂದು ಹೇಳಿದರು.

ಇದನ್ನೂ ಓದಿ: ಐಎಸ್​ಐನಿಂದ ಖಲಿಸ್ತಾನಿಗಳಿಗೆ ಬಾಂಬ್ ತಯಾರಿಕೆ ತರಬೇತಿ: ಗುಪ್ತಚರ ಮಾಹಿತಿ

ಕೆಎಫ್‌ಒಎನ್ ಕೇರಳ ರಾಜ್ಯ ಐಟಿ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಮತ್ತು ಕೇರಳ ರಾಜ್ಯ ವಿದ್ಯುತ್ ಮಂಡಳಿಯ (ಕೆಎಸ್‌ಇಬಿ) ಜಂಟಿ ಉದ್ಯಮವಾಗಿದೆ. ಯೋಜನೆಯನ್ನು 2019ರ ಮಾರ್ಚ್​​ನಲ್ಲಿ ಕಾರ್ಯಗತಗೊಳಿಸಲು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನೇತೃತ್ವದ ಒಕ್ಕೂಟವನ್ನು ಆಯ್ಕೆ ಮಾಡಿಕೊಳ್ಳಲಾಯಿತು.

ರಾಜ್ಯದ 14 ಜಿಲ್ಲೆಗಳಲ್ಲಿ 35,000 ಕಿಲೋಮೀಟರ್ ಉದ್ದದ ಆಪ್ಟಿಕ್ ಫೈಬರ್ ನೆಟ್​​ವರ್ಕ್​ ಹಾಕಲಾಗುತ್ತಿದೆ. ಅದು ಒಮ್ಮೆ ಪೂರ್ಣಗೊಂಡರೆ ದೊಡ್ಡ ನೆಟ್​ವರ್ಕ್​ ಹೊಂದಿದ ಖ್ಯಾತಿಗೆ ಪಾತ್ರವಾಗಲಿದೆ. ಎಲ್ಲಾ ಸೇವಾ ಪೂರೈಕೆದಾರರು ನೆಟ್​ವರ್ಕ್​ ಬಳಸುವ ಆಯ್ಕೆ ಹೊಂದಿರುತ್ತಾರೆ. ಲಭ್ಯವಿರುವ ಇಂಟರ್​​ನೆಟ್​ ವೇಗ 10 Mbps ನಿಂದ 1 Gbps ವರೆಗೆ ಇದೆ ಎಂದು ಸಿಎಂ ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.