ನವದೆಹಲಿ: ವ್ಯವಹಾರಗಳಿಗೆ ದೊಡ್ಡ ಪರಿಹಾರವಾಗಿ ದಿವಾಳಿತನ ಮತ್ತು ದಿವಾಳಿತನ ಸಂಹಿತೆಯಡಿ ನೂತನ ದಿವಾಳಿತನ ಪ್ರಕ್ರಿಯೆಯಗಳನ್ನು ಆರು ತಿಂಗಳವರೆಗೆ ಸ್ಥಗಿತಗೊಳಿಸಲು ಸರ್ಕಾರ ಚಿಂತಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರವು ಐಬಿಸಿ, 2016 ಅನ್ನು ತಿದ್ದುಪಡಿ ಮಾಡಬಹುದು. ಇದಕ್ಕಾಗಿ ಸುಗ್ರೀವಾಜ್ಞೆ ಪ್ರಕಟಿಸಬೇಕಾಗುತ್ತದೆ. ಮುಂದಿನ ಸೂಚನೆ ಬರುವವರೆಗೂ ಸೆಕ್ಷನ್ 7, 9 ಮತ್ತು 10 ಅನ್ನು ಅಮಾನತುಗೊಳಿಸುವಂತೆ ರಾಷ್ಟ್ರಪತಿಗಳ ಅನುಮೋದನೆ ಪಡೆಯಬೇಕಾಗುತ್ತದೆ.
ಕಳೆದ ತಿಂಗಳು ಸಣ್ಣ ಉದ್ಯಮಗಳಿಗೆ ಪರಿಹಾರವಾಗಿ, ದಿವಾಳಿತನ ಪ್ರಕ್ರಿಯೆಗಳ ಮಿತಿಯನ್ನು ಅಸ್ತಿತ್ವದಲ್ಲಿರುವ 1 ಲಕ್ಷ ರೂ.ಗಳಿಂದ 1 ಕೋಟಿ ರೂ.ಗೆ ವಿಸ್ತರಿಸಲಾಗಿದೆ ಎಂದು ಹಣಕಾಸ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ್ದರು. ಏಪ್ರಿಲ್ 30ರ ನಂತರ ಕೊರೊನಾ ವೈರಸ್ ಪರಿಸ್ಥಿತಿ ಮುಂದುವರಿದರೆ, ಸಚಿವಾಲಯವು ಐಬಿಸಿಯ ಸೆಕ್ಷನ್ 7, ಸೆಕ್ಷನ್ 9 ಮತ್ತು ಸೆಕ್ಷನ್ 10 ಅನ್ನು ಅಮಾನತುಗೊಳಿಸುವ ಬಗ್ಗೆ ಪರಿಗಣಿಸುತ್ತದೆ ಎಂದಿದ್ದರು.
ಆರು ತಿಂಗಳ ಅವಧಿಯವರೆಗೆ ಕಂಪನಿಗಳನ್ನು ದಿವಾಳಿತನ ಪ್ರಕ್ರಿಯೆಗೆ ಒತ್ತಾಯಿಸುವುದನ್ನು ನಿಲ್ಲಿಸಬಹುದು.
ದಿವಾಳಿತನ ಘಟಕಗಳ ವಿರುದ್ಧ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಸಂಪರ್ಕಿಸಲು ಸಂಬಂಧಪಟ್ಟ ಸಾಲಗಾರರಿಗೆ ಅಧಿಕಾರ ನೀಡುತ್ತವೆ. ಐಬಿಸಿಯ ಸೆಕ್ಷನ್ 7 ಹಣಕಾಸಿನ ಸಾಲಗಾರರಿಂದ ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆ ಆರಂಭಿಸಲು ಅನುವು ಮಾಡಿಕೊಡುತ್ತದೆ. ಆದರೆ, ವಿಭಾಗ 9 ಕಾರ್ಯಾಚರಣಾ ಸಾಲಗಾರರಿಂದ ದಿವಾಳಿತನ ಪ್ರಕ್ರಿಯೆ ಆರಂಭಿಸಲು ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುತ್ತದೆ.