ETV Bharat / business

'ಐಟಿ' ವಲಯ: 5 ವರ್ಷಗಳಲ್ಲಿ 8.73 ಲಕ್ಷ ಉದ್ಯೋಗ ಸೃಷ್ಟಿ: ರವಿಶಂಕರ್ ಪ್ರಸಾದ್

author img

By

Published : Mar 21, 2019, 7:51 PM IST

ಕಳೆದ ಐದು ವರ್ಷಗಳ ಅವಧಿಯಲ್ಲಿ ಐಟಿ ಕ್ಷೇತ್ರ ಒಂದರಲ್ಲೇ 8.73 ಲಕ್ಷ ಉದ್ಯೋಗಗಳು ಸೃಷ್ಟಿ ಆಗಿವೆ. ಪ್ರಸ್ತುತ 41.40 ಲಕ್ಷ ಜನರು ನೇರ ಹಾಗೂ 1.2 ಕೋಟಿ ಜನರು ಪರೋಕ್ಷವಾಗಿ ಇದರ ಮೇಲೆ ಅವಲಂಬಿತರಾಗಿದ್ದಾರೆ ಎಂದು ಕೇಂದ್ರ ಸಚಿವ ರವಿಶಂಕರ್​ ಪ್ರಸಾದ್​ ತಿಳಿಸಿದ್ದಾರೆ.

IT

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಐಟಿ ವಲಯದಲ್ಲಿ ಕಳೆದ ಐದು ವರ್ಷಗಳಲ್ಲಿ 8.73 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

ಸುಳ್ಳು ಡೇಟಾ ಮುಖೇನ ಉದ್ಯೋಗ ಮಾಹಿತಿ ಬಗ್ಗೆ ಕಾಂಗ್ರೆಸ್​ ಅಪಪ್ರಚಾರ ಮಾಡುತ್ತಿದೆ. ಭಾರತೀಯ ಸಾಫ್ಟ್‌ವೇರ್‌ ವಲಯದ ಪ್ರಾತಿನಿಧಿಕ ಸಂಸ್ಥೆಯ (ನಾಸ್ಕಾಮ್) ಇತ್ತೀಚಿನ ಮಾಹಿತಿ ಪ್ರಕಾರ, 2014-15ರ ನಡುವೆ ಐಟಿ ಮತ್ತು ಬಿಪಿಒ ವಲಯದಲ್ಲಿ 2.18 ಲಕ್ಷ ಉದ್ಯೋಗ ಸೃಜಿಸಲಾಗಿತ್ತು. 2015-16ರಲ್ಲಿ 2.03 ಲಕ್ಷ, 2016-17ರಲ್ಲಿ 1.75 ಲಕ್ಷ, 2017-18ರಲ್ಲಿ 1.05 ಲಕ್ಷ ಹಾಗೂ 2018-19ರಲ್ಲಿ 1.72 ಲಕ್ಷ ಜನರಿಗೆ ಕೆಲಸ ದೊರಕಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ನಾನು ನನ್ನ ದತ್ತಾಂಶ ಬಳಸಿ ಹೇಳುತ್ತಿಲ್ಲ. ನಾಸ್ಕಾಮ್ ಡೇಟಾವನ್ನು ಉಲ್ಲೇಖಿಸಿ ಹೇಳುತ್ತಿದ್ದೇನೆ. ಆರ್ಥಿಕ ಚಟುವಟಿಕೆಗಳ ಉತ್ತೇಜನ ಹಾಗೂ ಮೂಲಭೂತ ಸೌಕರ್ಯ ಯೋಜನೆಗಳ ಹೆಚ್ಚಳದಿಂದ ಹಲವು ಉದ್ಯೋಗಗಳು ಸೃಷ್ಟಿಯಾಗಿವೆ ಎಂದರು.

ದೇಶದ ಆರ್ಥಿಕ ಬೆಳವಣಿಗೆ ಪ್ರಮಾಣ ಶೇ 7.4ರಷ್ಟಿದ್ದು, ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ, ಉತ್ಪಾದನಾ ಪ್ರಮಾಣ ಏರಿಕೆಯಿಂದಾಗಿ ಭಾರತ ಜಾಗತಿಕ ಆರ್ಥಿಕತೆಯಲ್ಲಿ ಗುರುತಿಸಿಕೊಳ್ಳುತ್ತಿದೆ. ಹೀಗಾಗಿ, ಹೆಚ್ಚೆಚ್ಚು ಉದ್ಯೋಗಗಳು ಯುವಕರಿಗೆ ಸಿಗುತ್ತಿವೆ ಎಂದು ಸಚಿವರ ರವಿಶಂಕರ್​ ಪ್ರಸಾದ್ ವಿವರಿಸಿದರು.

Intro:Body:

1 kn_dvg_200319_ethnic-day_10016_v1_2003digital_00956_42.txt  

Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.