ETV Bharat / business

ಪಾಕ್ ಆರ್ಥಿಕತೆ, ಹಣಕಾಸು ವ್ಯವಸ್ಥೆ ಛಿದ್ರ - ಛಿದ್ರ: ಇದಕ್ಕೆಲ್ಲ ಮೋದಿಯೇ ಕಾರಣ ಎಂದ ಇಮ್ರಾನ್​ - ಭಾರತ ಪಾಕಿಸ್ತಾನ

ಭಾರತದೊಂದಿಗಿನ ಪಾಕಿಸ್ತಾನದ ಈ ಗೀಳು ಗುಣಪಡಿಸಲಾಗದು ಎಂಬುವಂತಿದೆ. ಖಾದ್ಯ ವಸ್ತುಗಳ ಬೆಲೆ ಏರಿಕೆಯ ಬಗ್ಗೆ ನಿನ್ನೆ ನಡೆದ ಫೆಡರಲ್ ಕ್ಯಾಬಿನೆಟ್ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿರುವಾಗ, ಮಾಹಿತಿ ಮತ್ತು ಪ್ರಸಾರ ಸಚಿವ ಶಿಬ್ಲಿ ಫರಾಜ್ ಅವರು ಪಾಕಿಸ್ತಾನವು ಇದೀಗ ಕಂಡುಕೊಂಡಿರುವ ಅವ್ಯವಸ್ಥೆಗೆ ಭಾರತವೇ ಕಾರಣ ಎಂದು ಆರೋಪಿಸಿದರು.

Imran
ಇಮ್ರಾನ್
author img

By

Published : Oct 8, 2020, 3:55 PM IST

ಇಸ್ಲಾಮಾಬಾದ್​: ಪಾಕಿಸ್ತಾನದ ಆರ್ಥಿಕತೆಯನ್ನು ಛಿದ್ರಗೊಳಿಸಿದ ಹಣದುಬ್ಬರ, ಇಮ್ರಾನ್​ ಖಾನ್ ಸರ್ಕಾರ ತೀವ್ರ ಹಣಕಾಸಿನ ಬಿಕ್ಕಟ್ಟು ಎದುರಿಸುತ್ತಿದೆ. ಈ ಸಂಕಷ್ಟದ ನಡುವೆ ಉಗ್ರರಿಗೆ ಹಣಕಾಸು ನೆರವು ನೀಡುವುದರ ಮೇಲೆ ನಿಗಾ ಇಡುವ ಜಾಗತಿಕ ಮಟ್ಟದ ಸಂಸ್ಥೆ ಹಣಕಾಸು ಕಾರ್ಯಪಡೆಯು (ಎಫ್‌ಎಟಿಎಫ್‌) ಯಾವ ಗಳಿಗೆಯಲ್ಲೇ ಆದರೂ ಕಪ್ಪುಪಟ್ಟಿ ಸೇರಿಸಬಹುದು ಎಂಬ ಆತಂಕ ಎದುರಾಗಿದೆ.

ಪಾಕಿಸ್ತಾನದ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ (ಪಿಬಿಎಸ್) ಕಳೆದ ವಾರ ಬಿಡುಗಡೆ ಮಾಡಿದ ಅಂಕಿ- ಅಂಶಗಳ ಅನ್ವಯ, ಆಗಸ್ಟ್‌ನಲ್ಲಿನ ಹಣದುಬ್ಬರವು ಶೇ 8.2ರಿಂದ ಸೆಪ್ಟೆಂಬರ್‌ನಲ್ಲಿ ಶೇ 9ಕ್ಕೆ ಏರಿಕೆಯಾಗಿದೆ ಎಂದು ದೃಢಪಡಿಸಿದೆ. ವಿದ್ಯುತ್ ವಲಯದ ಸಾಲವು 2.1 ಟ್ರಿಲಿಯನ್ ರೂ.ಗೆ ಏರಿಕೆ ಕಂಡಿದೆ. ಕೋವಿಡ್ -19 ಸಾಂಕ್ರಾಮಿಕ ಕಾಲದಲ್ಲಿಯೂ ಪ್ರಮುಖ ಜೀವ ರಕ್ಷಕ 94 ಔಷಧಗಳ ಬೆಲೆಯನ್ನು ಹೆಚ್ಚಿಸಲಾಗಿದೆ. ಚಳಿಗಾಲದಲ್ಲಿ ಅನಿಲದ ತೀವ್ರ ಕೊರತೆಯೂ ನಿಶ್ಚಿತ ಎಂದು ಎಚ್ಚರಿಸಿದೆ.

ಹಣದುಬ್ಬರ, ಖರೀದಿ ಕುಸಿತ, ಗೋಧಿ ಮತ್ತು ಸಕ್ಕರೆ ಸಂಗ್ರಹಣೆ ಕೊರತೆ, ಔಷಧಗಳ ಬೆಲೆ ಏರಿಕೆಯಂತಹ ಸಂಕಷ್ಟಗಳಿಂದ ದೇಶವಾಸಿಗರಿಗೆ ಪರಿಹಾರ ನೀಡುವ ಬದಲು, ಆಡಳಿತಾರೂಢ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸರ್ಕಾರವು ಭಾರತವನ್ನು ಗುರಿಯಾಗಿಸಿಕೊಂಡು ನಿರತವಾಗಿ ಟೀಕೆ ಮಾಡಿಕೊಂಡು ಬರುತ್ತಿದೆ. ಅಧಿಕಾರಕ್ಕೆ ಬಂದ ದಿನದಿಂದ ತನ್ನ ಎಲ್ಲ ತಪ್ಪುಗಳಿಗೆ ಪದೇ ಪದೆ ಭಾರತ ಸರ್ಕಾರವನ್ನು ದೂಷಿಸುತ್ತಿದೆ.

ಭಾರತದೊಂದಿಗಿನ ಪಾಕಿಸ್ತಾನದ ಈ ಗೀಳು ಗುಣಪಡಿಸಲಾಗದು ಎಂಬುವಂತಿದೆ. ಖಾದ್ಯ ವಸ್ತುಗಳ ಬೆಲೆ ಏರಿಕೆಯ ಬಗ್ಗೆ ನಿನ್ನೆ ನಡೆದ ಫೆಡರಲ್ ಕ್ಯಾಬಿನೆಟ್ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿರುವಾಗ, ಮಾಹಿತಿ ಮತ್ತು ಪ್ರಸಾರ ಸಚಿವ ಶಿಬ್ಲಿ ಫರಾಜ್ ಅವರು ಪಾಕಿಸ್ತಾನವು ಇದೀಗ ಕಂಡುಕೊಂಡಿರುವ ಅವ್ಯವಸ್ಥೆಗೆ ಭಾರತವೇ ಕಾರಣ ಎಂದು ಆರೋಪಿಸಿದ್ದಾರೆ.

ಪಾಕಿಸ್ತಾನವನ್ನು ಹಣಕಾಸು ಕ್ರಿಯಾ ಕಾರ್ಯಪಡೆಯ ಕಪ್ಪು ಪಟ್ಟಿಗೆ ತಳ್ಳಲು ಭಾರತ ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದೆ ಎಂದು ಮೋದಿ ಸರ್ಕಾರದತ್ತ ಬೆರಳು ತೋರಿದರು. ಲಿಬಿಯಾ, ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯನ್ನು ಸೃಷ್ಟಿಸಲು ಪಾಕಿಸ್ತಾನದ ವಿರೋಧಿಗಳು ನಮ್ಮ ಸಂಸ್ಥೆಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.

ಪಾಕಿಸ್ತಾನದಲ್ಲಿ ಅವ್ಯವಸ್ಥೆ, ರಾಜಕೀಯ ಅಸ್ಥಿರತೆ ಮತ್ತು ಆರ್ಥಿಕ ಅಶಾಂತಿ ಸೃಷ್ಟಿಸಲಾಗುತ್ತಿದೆ ಎಂದು ಪಾಕಿಸ್ತಾನಿಯರ ಗಮನವನ್ನು ಬೇರೆಡೆ ಸೆಳೆಯುವ ಯತ್ನವನ್ನ ಸಚಿವರು ಮಾಡಿದ್ದಾರೆ.

ಕ್ಯಾಬಿನೆಟ್​ನಲ್ಲಿ ಫರಾಜ್ ಅವರ ಇತರ ಸಹೋದ್ಯೋಗಿಗಳು ಅವರಿಗಿಂತ ಭಿನ್ನವಾಗಿಲ್ಲ. ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಅವರು ನಿತ್ಯ ವಿವಿಧ ವೇದಿಕೆಗಳಲ್ಲಿ 'ಭಾರತದ ಯುದ್ಧ' ಕುರಿತು ಚರ್ಚಿಸುತ್ತಿದ್ದರೆ. ರೈಲ್ವೆ ಸಚಿವ ಶೇಖ್ ರಶೀದ್ ಅಹ್ಮದ್ ಅವರು ಪಟ್ಟುಬಿಡದೇ, ಅರ್ಥಹೀನವಾಗಿ ಭಾರತ ವಿರೋಧಿ ಕೋಪವನ್ನು ಕೆಣಕುವ ಹಾಸ್ಯಗಳ ಹೇಳಿಕೆ ಮುಂದುವರೆಸಿದ್ದಾರೆ. ಪ್ರಧಾನಿ ಇಮ್ರಾನ್ ಖಾನ್, ಈ ಮಧ್ಯೆ ದೇಶದ ಯುವಕರನ್ನು ಇಸ್ಲಾಂಗೆ ಹತ್ತಿರ ತರುವ ಸಲುವಾಗಿ ಕವಿ ಎಲಿಫ್ ಶಫಕ್ ಅವರ 'ಪ್ರೀತಿಯ ನಲವತ್ತು ನಿಯಮ' ಓದುವಂತೆ ಶಿಫಾರಸು ಮಾಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.