ನವದೆಹಲಿ : ಕೊರೊನಾ ವೈರಸ್ ಸಾಂಕ್ರಾಮಿಕ ರೋಗವು 2020ರಲ್ಲಿ ಭಾರತದ ಮಧ್ಯಮ ವರ್ಗದ ಜನಸಂಖ್ಯೆಯನ್ನು 32 ದಶಲಕ್ಷದಷ್ಟು ಕುಗ್ಗಿಸಿರಬಹುದು. 7.5 ಕೋಟಿ ಜನರನ್ನು ಬಡತನ ರೇಖೆಗಿಂತ ಕೆಳಕ್ಕೆ ತಳ್ಳಿರಬಹುದು ಎಂದು ಪ್ಯೂ ರಿಸರ್ಚ್ ಸೆಂಟರ್ ವರದಿ ತಿಳಿಸಿದೆ.
ವಿಶ್ವಬ್ಯಾಂಕ್ ಮಾಹಿತಿಯ ವಿಶ್ಲೇಷಣೆ ಆಧರಿಸಿದ ವರದಿಯು ಚೀನಾವು ಹೆಚ್ಚು ಉತ್ತಮವಾಗಿದೆ. ಮಧ್ಯಮ-ಆದಾಯದ ಶ್ರೇಣಿಯಲ್ಲಿನ ಜನರ ಸಂಖ್ಯೆ ಕೇವಲ 10 ಮಿಲಿಯನ್ ಕಡಿಮೆಯಾಗಿದೆ. ಆದರೆ, ಬಡತನ ಮಟ್ಟವು 2020ರಲ್ಲಿ ಬದಲಾಗದೆ ಉಳಿದಿದೆ.
ಭಾರತದಲ್ಲಿ ಮಧ್ಯಮ ವರ್ಗದ ಜನಸಂಖ್ಯೆಯು 2020ರಲ್ಲಿ 3.2 ಕೋಟಿಗಳಷ್ಟು ಕಡಿಮೆಯಾಗಿರಲಿದೆ. 7.5 ಕೋಟಿ ಜನರನ್ನು ಬಡತನ ರೇಖೆಗಿಂತ ಕೆಳಗೆ ತಳ್ಳಲಾಗಿದೆ. ಈ ವಿಷಯದಲ್ಲಿ ಚೀನಾ ಉತ್ತಮ ಸ್ಥಾನದಲ್ಲಿದೆ. ಆ ದೇಶದ ಮಧ್ಯಮ ವರ್ಗದ ಜನಸಂಖ್ಯೆಯು ಕೇವಲ ಒಂದು ಕೋಟಿಯಿಂದ ಕುಗ್ಗಿದೆ.
ಸಾಂಕ್ರಾಮಿಕ ರೋಗ ಬೆಳಕಿಗೆ ಬರುವ ಮೊದಲು 2020ರ ವೇಳೆಗೆ ಭಾರತದಲ್ಲಿ 9.9 ಕೋಟಿ ಮಧ್ಯಮ ವರ್ಗದ ಜನರಿದ್ದರು ಎಂದು ಅಂದಾಜಿಸಲಾಗಿದೆ. ಆದರೆ, ಆ ಅಂಕಿ-ಅಂಶವು ಒಂದು ವರ್ಷದ ನಂತರ 6.6 ಕೋಟಿಗೆ ತಲುಪಿರಬಹುದು ಎಂಬ ನಿರೀಕ್ಷೆಯಿದೆ.
ಭಾರತದಲ್ಲಿ 13.4 ಕೋಟಿಯಷ್ಟು ಹೆಚ್ಚಾಗಿದೆ. ಇತ್ತೀಚಿನ ಅಂದಾಜಿನ ಪ್ರಕಾರ 2020ರಲ್ಲಿ ಬಡತನದ ಪ್ರಮಾಣವು ಶೇ 9.7 ರಷ್ಟಾಗುತ್ತದೆ. 2020ರ ಜನವರಿಯಲ್ಲಿ ಅದು ಶೇ 4.3ರಷ್ಟಿತ್ತು.
ಪ್ಯೂ ಏಜೆನ್ಸಿ ಭಾರತದ ಜನಸಂಖ್ಯೆಯನ್ನು ಐದು ವಿಭಾಗಗಳಾಗಿ ವಿಂಗಡಿಸುತ್ತದೆ. ದಿನಕ್ಕೆ ಎರಡು ಡಾಲರ್ ಅಥವಾ ಅದಕ್ಕಿಂತ ಕಡಿಮೆ ಆದಾಯದಲ್ಲಿ ವಾಸಿಸುವವರನ್ನು ಬಡವರು ಎಂದು ವರ್ಗೀಕರಿಸುತ್ತದೆ.
2.01-10 ಡಾಲರ್ ಆದಾಯ ಹೊಂದಿರುವವರನ್ನು ಕಡಿಮೆ ಆದಾಯದವರು, 10.01-20 ಡಾಲರ್ ಗಳಿಸುವವರನ್ನು ಮಧ್ಯಮ ವರ್ಗದವರು, 20.01-50 ಡಾಲರ್ ಗಳಿಕೆ ಇರುವವರನ್ನು ಮೇಲ್ಮಧ್ಯಮ ವರ್ಗದವರು ಮತ್ತು 50 ಡಾಲರ್ಕ್ಕಿಂತ ಹೆಚ್ಚು ಆದಾಯ ಗಳಿಸುವವರು ಅತ್ಯಧಿಕ ಗಳಿಕೆಯವರು ಎಂದು ವರ್ಗೀಕರಿಸಲಾಗಿದೆ.