ಮುಂಬೈ: ಕೋವಿಡ್-19 ಪ್ರೇರೇಪಿತ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದಾಗಿ ಮಾರ್ಚ್ ಕೊನೆಯ ವಾರದಲ್ಲಿ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದರಿಂದ ದೇಶದ ಜಿಡಿಪಿ, ಪ್ರಸಕ್ತ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಶೇ 1.2ರಷ್ಟು ಏರಿಕೆಯಾಗಿದೆ ಎಂದು ಅಂದಾಜಿಸಲಾಗಿದೆ.
ಎಸ್‌ಬಿಐನ ಸಂಶೋಧನಾ ವರದಿಯ ಪ್ರಕಾರ ಇಕೋವ್ರಾಪ್, ಒಟ್ಟು ದೇಶಿಯ ಉತ್ಪನ್ನ (ಜಿಡಿಪಿ) ಬೆಳವಣಿಗೆಯು 2020ರ ಹಣಕಾಸು ವರ್ಷಕ್ಕೆ ಶೇ 4.2ರಷ್ಟಿದೆ ಮತ್ತು 2021ರ ವಿತ್ತೀಯ ವರ್ಷಕ್ಕೆ ಶೇ -6.8ರಷ್ಟಿರಲಿದೆ ಎಂದು ಭವಿಷ್ಯ ನುಡಿದಿದೆ.
2020ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕ ಜಿಡಿಪಿ ಬೆಳವಣಿಗೆಯ ಸಂಖ್ಯೆಯನ್ನು ಮೇ 29ರಂದು ರಾಷ್ಟ್ರೀಯ ಸಾಂಖಿಕ್ಯ ಕಚೇರಿ (ಎನ್‌ಎಸ್‌ಒ) ಪ್ರಕಟಿಸಲಿದೆ.
2020ರ ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯು ಸುಮಾರು ಏಳು ವರ್ಷಗಳ ಕನಿಷ್ಠ ಶೇ 4.7ಕ್ಕೆ ಇಳಿದಿದೆ. 2020ರ ಹಣಕಾಸು ವರ್ಷದ ಕ್ಯೂ-1 ಮತ್ತು ಕ್ಯೂ- 2 ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ಕ್ರಮವಾಗಿ ಶೇ 5.1 ಮತ್ತು ಶೇ 5.6 ರಷ್ಟಿತ್ತು. ಮಾರ್ಚ್ ತಿಂಗಳ ಕೊನೆಯ ಏಳು ದಿನಗಳಲ್ಲಿ ಆರ್ಥಿಕ ಚಟುವಟಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದರಿಂದ ಕ್ಯೂ- 4 (ಎಫ್‌ವೈ 20) ಜಿಡಿಪಿ ಬೆಳವಣಿಗೆಯು ಶೇ 1.2 ರಷ್ಟು ಇರುತ್ತದೆ ಎಂದು ನಾವು ನಂಬುತ್ತೇವೆ ಸಂಶೋಧನಾ ವರದಿಯಲ್ಲಿ ತಿಳಿಸಲಾಗಿದೆ.
ಲಾಕ್ಡೌನ್ ವಿಧಿಸಿದ ಮಾರ್ಚ್ನ ಕೊನೆಯ ಏಳು ದಿನಗಳಲ್ಲಿ ಕನಿಷ್ಠ 1.4 ಲಕ್ಷ ಕೋಟಿ ರೂ. ನಷ್ಟ ಆಗಿರಬಹುದು ಎಂದು ಅಂದಾಜಿಸಿದ್ದಾರೆ.
2020ರ ಹಣಕಾಸು ವರ್ಷದ ವಾರ್ಷಿಕ ಜಿಡಿಪಿ ಬೆಳವಣಿಗೆಯು ಶೇ 5ಕ್ಕೆ ಹೋಲಿಸಿದರೆ, ಶೇ 4.2ರಷ್ಟಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದು 2021ರ ಎಫ್ಇ ಜಿಡಿಪಿ ಬೆಳವಣಿಗೆಯನ್ನು ಶೇ -6.8ರಷ್ಟು ಇರಬಹುದು ಎಂದು ಅಂದಾಜಿಸಿದೆ. ಒಟ್ಟು ಮೌಲ್ಯವರ್ಧಿತ (ಜಿವಿಎ) ಬೆಳವಣಿಗೆ ಸುಮಾರು ಶೇ -3.1ರಷ್ಟು ಇರುತ್ತದೆ ಎಂದಿದೆ.