ETV Bharat / business

ಮೈನಸ್​ 7.7ಕ್ಕೆ ಕುಸಿಯುವ ಭಾರತದ ಜಿಡಿಪಿ, 2022ರಲ್ಲಿ ಫಿನಿಕ್ಸ್​ ಹಕ್ಕಿಯಂತೆ ಶೇ.8.9ಕ್ಕೆ ಜಿಗಿಯುತ್ತೆ : IHS

ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ರಾಷ್ಟ್ರವ್ಯಾಪಿ ಲಾಕ್‌ಡೌನ್ ನಂತರ ಜಿಡಿಪಿ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ.23.9ರಷ್ಟು ಕುಗ್ಗಿತ್ತು. ಈ ಸಂಕೋಚನವು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ.7.5ಕ್ಕೆ ಇಳಿದಿದೆ. 2020ರ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದ ಕೈಗಾರಿಕಾ ಉತ್ಪಾದನೆ ಮತ್ತು ಬಳಕೆ ವೆಚ್ಚವು ಮರುಕಳಿಸಿದ್ದನ್ನ ತೋರಿಸಿದೆ..

Indian economy
ಭಾರತದ ಆರ್ಥಿಕತೆ
author img

By

Published : Jan 8, 2021, 9:37 PM IST

ನವದೆಹಲಿ : ಕಳೆದ ತ್ರೈಮಾಸಿಕದಲ್ಲಿ ಆರ್ಥಿಕ ಚಟುವಟಿಕೆ ಗಮನಾರ್ಹ ಸುಧಾರಣೆ ಕಂಡು ಬಂದ ನಂತರ 2021ರ ಏಪ್ರಿಲ್​ನಿಂದ ಪ್ರಾರಂಭವಾಗುವ 2022ರ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ.8.9ರಷ್ಟು ಬೆಳವಣಿಗೆಯೊಂದಿಗೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಐಹೆಚ್ಎಸ್ ಮಾರ್ಕಿಟ್ ಹೇಳಿದೆ.

ಮಾರ್ಚ್‌ನಲ್ಲಿ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕತೆಯು ಶೇ.7.7ರಷ್ಟು ಕುಗ್ಗಲಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆ (ಎನ್‌ಎಸ್‌ಒ) ಗುರುವಾರ ಅಂದಾಜಿಸಿತ್ತು. ಇದು ನಾಲ್ಕು ದಶಕಗಳಲ್ಲಿನ ಅತ್ಯಂತ ಕೆಟ್ಟ ಸಾಧನೆ ಆಗಿದೆ.

2020ರಲ್ಲಿ ಭಾರತೀಯ ಆರ್ಥಿಕತೆಯು ತೀವ್ರ ಆರ್ಥಿಕ ಹಿಂಜರಿತ ಅನುಭವಿಸಿತು. ಮಾರ್ಚ್‌ನಿಂದ ಆಗಸ್ಟ್‌ವರೆಗಿನ ಅವಧಿಯಲ್ಲಿ ಅತ್ಯಂತ ಕೆಟ್ಟ ಸಂಕೋಚನ ಕಂಡು ಬಂದಿದ್ದು, ಸೆಪ್ಟೆಂಬರ್‌ನಿಂದ ಆರ್ಥಿಕ ಚಟುವಟಿಕೆಯಲ್ಲಿ ಸದೃಢವಾದ ಮರು ಚೇತರಿಕೆ ಪ್ರದರ್ಶಿಸುತ್ತಿದೆ ಎಂದು ಐಹೆಚ್ಎಸ್ ಮಾರ್ಕಿಟ್ ಹೇಳಿದೆ.

ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ರಾಷ್ಟ್ರವ್ಯಾಪಿ ಲಾಕ್‌ಡೌನ್ ನಂತರ ಜಿಡಿಪಿ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ.23.9ರಷ್ಟು ಕುಗ್ಗಿತ್ತು. ಈ ಸಂಕೋಚನವು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ.7.5ಕ್ಕೆ ಇಳಿದಿದೆ. 2020ರ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದ ಕೈಗಾರಿಕಾ ಉತ್ಪಾದನೆ ಮತ್ತು ಬಳಕೆ ವೆಚ್ಚವು ಮರುಕಳಿಸಿದ್ದನ್ನ ತೋರಿಸಿದೆ.

ಇದನ್ನೂ ಓದಿ: ಮುಂಬೈನಲ್ಲಿ ಗೂಳಿ ಗುಟುರು : 689 ಅಂಕ ಜಿಗಿದ ಸೆನ್ಸೆಕ್ಸ್.. 50 ಸಾವಿರಕ್ಕೆ ಒಂದೆಜ್ಜೆ!

2020ರ ಅಕ್ಟೋಬರ್​​ನಲ್ಲಿ ಕೈಗಾರಿಕಾ ಉತ್ಪಾದನೆಯು ವರ್ಷಕ್ಕೆ ಶೇ.3.6ರಷ್ಟು ಏರಿಕೆಯಾಗಿದೆ. 2020ರ ಏಪ್ರಿಲ್​ನಲ್ಲಿ-55.5ರಷ್ಟು ಕಡಿದಾದ ಸಂಕೋಚನ ಹೊಂದಿತ್ತು ಎಂದು ಐಹೆಚ್ಎಸ್ ಹೇಳಿದೆ. ಉತ್ಪಾದನಾ ವಲಯದಾದ್ಯಂತ ಗಮನಾರ್ಹ ಸುಧಾರಣೆ ಕಂಡು ಬಂದಿದೆ. ಕೋವಿಡ್ -19 ನಿರ್ಬಂಧಗಳನ್ನು ಸಡಿಲ, ಬೇಡಿಕೆಯ ವೃದ್ಧಿ ಮತ್ತು ಮಾರುಕಟ್ಟೆ ಪರಿಸ್ಥಿತಿಗಳ ಸುಧಾರಿಸಿದ ಹಿನ್ನೆಲೆಯಲ್ಲಿ ಕಾರ್ಖಾನೆಯ ಆರ್ಡರ್​ಗಳು ಡಿಸೆಂಬರ್‌ನಲ್ಲಿ ಹೆಚ್ಚಾಗಿದೆ.

2020ರ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತೀಯ ಆರ್ಥಿಕತೆಯು ಈಗಾಗಲೇ ದೇಶೀಯ ಆರ್ಥಿಕ ಚಟುವಟಿಕೆಯಲ್ಲಿ ಗಮನಾರ್ಹ ಸುಧಾರಣೆ ತೋರಿಸುತ್ತಿದ್ದು, 2021-22ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆಯು ವರ್ಷದಿಂದ ವರ್ಷಕ್ಕೆ ಶೇ 8.9ರಷ್ಟು ಏರಿಕೆಯಾಗಲಿದೆ ಎಂದು ಐಹೆಚ್ಎಸ್ ಹೇಳಿದೆ.

ಇಂಡಿಯಾ ರೇಟಿಂಗ್ಸ್ & ರಿಸರ್ಚ್, 2021ರ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಎನ್‌ಎಸ್‌ಒ ನಿರೀಕ್ಷೆಯಂತೆ ಆರ್ಥಿಕತೆಯ ಗಾತ್ರವು 134.40 ಲಕ್ಷ ಕೋಟಿ ರೂ.ಗೆ ಕುಗ್ಗುವ ನಿರೀಕ್ಷೆಯಿದೆ. 2020ರ ಆರ್ಥಿಕ ವರ್ಷದಲ್ಲಿ ಇದು 145.66 ಲಕ್ಷ ಕೋಟಿ ರೂ.ಯಷ್ಟು ಇತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.