ETV Bharat / business

ನಮಗೆ ಭಾರತ-ಇಂಗ್ಲೆಂಡ್​ ನಡುವಿನ ಆರ್ಥಿಕ ಸಂಬಂಧವೇ ಮುಖ್ಯ: ನಿರ್ಮಲಾ ಸೀತಾರಾಮನ್ - ಭಾರತ ಯುಕೆ ಕಾರ್ಯತಂತ್ರ ಪಾಲುದಾರಿಕೆ

ಭಾರತ-ಯುಕೆ ನಡುವಿನ ಆರ್ಥಿಕ ಸಂಬಂಧಗಳು ಮುಖ್ಯವಾಗಿದೆ ಎಂದ ಸೀತಾರಾಮನ್, ಒಟ್ಟಾರೆಯಾಗಿ 5 ಟ್ರಿಲಿಯನ್​ಗಿಂತ ಹೆಚ್ಚಿನ ಜಿಡಿಪಿ ಹೊಂದಿರುವ ವಿಶ್ವದ ಅಗ್ರ ಏಳು ಆರ್ಥಿಕತೆಗಳಲ್ಲಿ ಈ ಎರಡು ರಾಷ್ಟ್ರಗಳಿವೆ. 2007ರಲ್ಲಿ ಮೊದಲ ಇಎಫ್‌ಡಿಯ ನಂತರ ಭಾರತ-ಯುಕೆ ವ್ಯಾಪಾರವು ದ್ವಿಗುಣಗೊಂಡಿದೆ. ದ್ವಿಪಕ್ಷೀಯ ಹೂಡಿಕೆಯು ಎರಡೂ ದೇಶಗಳಲ್ಲಿ ಅರ್ಧ ಮಿಲಿಯನ್ ಉದ್ಯೋಗಗಳಿಗೆ ಬೆಂಬಲವಾಗಿ ನಿಂತಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

Nirmala Sitharaman
ನಿರ್ಮಲಾ ಸೀತಾರಾಮನ್
author img

By

Published : Oct 28, 2020, 6:11 PM IST

ನವದೆಹಲಿ: ಭಾರತದ ಬಂಡವಾಳ ಮಾರುಕಟ್ಟೆಗಳಿಗೆ ಒಳಹರಿವು ಆಕರ್ಷಿಸಲು ಇಂಡಿಯಾ- ಯುಕೆ ಫೈನಾನ್ಷಿಯಲ್ ಪಾರ್ಟ್‌ನರ್‌ಶಿಪ್ (ಐಯುಕೆಎಫ್‌ಪಿ) ಸಹಭಾಗಿತ್ವದಲ್ಲಿ ಸಿಟಿ ಆಫ್ ಲಂಡನ್ ಕಾರ್ಪೊರೇಷನ್ ನೇತೃತ್ವದ ಯುಕೆ-ಇಂಡಿಯಾ ಕ್ಯಾಪಿಟಲ್ ಮಾರ್ಕೆಟ್ಸ್ ವರ್ಕಿಂಗ್ ಗ್ರೂಪ್‌ನ ಕಾರ್ಯವು ಭಾರತದ ಆರ್ಥಿಕತೆಗೆ ನೆರವಾಗುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

10ನೇ ಭಾರತ-ಇಂಗ್ಲೆಂಡ್​ ಆರ್ಥಿಕ ಮತ್ತು ಹಣಕಾಸು ಸಂವಾದ (ಇಎಫ್‌ಡಿ) ಕಾರ್ಯಕ್ರಮ ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಭಾರತ-ಯುಕೆ ಕಾರ್ಯತಂತ್ರ ಸಹಯೋಗವು 2020ರಲ್ಲಿ ಗಿಫ್ಟ್ ಸಿಟಿಯಲ್ಲಿ ಸ್ಟ್ಯಾಂಡರ್ಡ್ ಚಾರ್ಟರ್ಡ್ ಮತ್ತು ಎಚ್‌ಎಸ್‌ಬಿಸಿ ಆರಂಭಿಕ ಕಚೇರಿಗಳ ಜೊತೆಗೆ ಗಿಫ್ಟ ನಗರದ ಅಭಿವೃದ್ಧಿಯನ್ನು ವೇಗಗೊಳಿಸಲು ಸಹಾಯ ಮಾಡಿತು. ಇದು ಅಂತಾರಾಷ್ಟ್ರೀಯ ಬ್ಯಾಂಕಿಂಗ್ ಘಟಕ ನಿರ್ವಹಿಸಲು ಪರವಾನಗಿ ಪಡೆದ ಮೊದಲ ವಿದೇಶಿ ಬ್ಯಾಂಕ್​ ಎಂದರು.

ಭಾರತ-ಯುಕೆ ನಡುವಿನ ಆರ್ಥಿಕ ಸಂಬಂಧಗಳು ಮುಖ್ಯವಾಗಿದೆ ಎಂದ ಸೀತಾರಾಮನ್, ಒಟ್ಟಾರೆಯಾಗಿ 5 ಟ್ರಿಲಿಯನ್​ಗಿಂತ ಹೆಚ್ಚಿನ ಜಿಡಿಪಿ ಹೊಂದಿರುವ ವಿಶ್ವದ ಅಗ್ರ ಏಳು ಆರ್ಥಿಕತೆಗಳಲ್ಲಿ ಈ ಎರಡು ರಾಷ್ಟ್ರಗಳಿವೆ. 2007ರಲ್ಲಿ ಮೊದಲ ಇಎಫ್‌ಡಿಯ ನಂತರ ಭಾರತ-ಯುಕೆ ವ್ಯಾಪಾರವು ದ್ವಿಗುಣಗೊಂಡಿದೆ. ದ್ವಿಪಕ್ಷೀಯ ಹೂಡಿಕೆಯು ಎರಡೂ ದೇಶಗಳಲ್ಲಿ ಅರ್ಧ ಮಿಲಿಯನ್ ಉದ್ಯೋಗಗಳಿಗೆ ಬೆಂಬಲವಾಗಿ ನಿಂತಿವೆ ಎಂದು ಹೇಳಿದರು.

ಕೊರೊನಾ ವೈರಸ್ ತೀವ್ರತೆಗೆ ಕಾರಣವಾಗುವ ಅಂಶಗಳ ಸಂಶೋಧನೆಗಾಗಿ ಭಾರತ ಮತ್ತು ಯುಕೆ ತಮ್ಮ ಜೈವಿಕ ತಂತ್ರಜ್ಞಾನ ವಿಭಾಗಗಳಲ್ಲಿ 8 ಮಿಲಿಯನ್ ಪೌಂಡ್‌ಗಳ ಜಂಟಿ ಹೂಡಿಕೆ ಹೊಂದಿವೆ ಎಂದು ಸೀತಾರಾಮನ್ ತಿಳಿಸಿದರು.

ಭಾರತವು ವಿಶ್ವದ ಎರಡನೇ ಅತಿದೊಡ್ಡ ಪಿಪಿಇ ಉತ್ಪಾದಕನಾಗಿರುವುದು ಶ್ಲಾಘನೀಯ ಎಂದು ಯುಕೆ ಚಾನ್ಸೆಲರ್ ರಿಷಿ ಸುನಕ್ ಅವರು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರಿಗೆ ತಿಳಿಸಿದರು.

ಯುಕೆ-ಇಂಡಿಯಾ ಫಿನ್‌ಟೆಕ್ ಜಂಟಿ ಕಾರ್ಯನಿರತ ಗುಂಪು 2020ರ ಮಾರ್ಚ್​ನಲ್ಲಿ ಸಭೆ ಸೇರಿ ಯುಕೆನಲ್ಲಿ ರುಪೇ ಕಾರ್ಡ್‌ಗಳ ಹೆಚ್ಚಿನ ಸ್ವೀಕಾರಕ್ಕೆ ಮನವಿ ಮಾಡಿದೆ. ಎಸ್‌ಐಡಿಬಿಐ ಮತ್ತು ಯುಕೆ ಸರ್ಕಾರದ ಬೆಂಬಲದೊಂದಿಗೆ ಯುಕೆ-ಇಂಡಿಯಾ ಫಾಸ್ಟ್-ಟ್ರ್ಯಾಕ್ ಸ್ಟಾರ್ಟ್-ಅಪ್ ಫಂಡ್ ಆರಂಭಿಕ ಹಂತದ ಟೆಕ್ ಸ್ಟಾರ್ಟ್-ಅಪ್‌ಗಳಿಗೆ ತಾಂತ್ರಿಕ ನೆರವಿನ ಜೊತೆಗೆ ಸಾಮರ್ಥ್ಯ ವೃದ್ಧಿ, ನೀತಿಗಳ ವಕಾಲತ್ತು ಮತ್ತು ಉದ್ಯಮಶೀಲತೆಯ ಸಂಪರ್ಕಗಳತ್ತ ಕೇಂದ್ರೀಕರಿಸಿದೆ ಎಂದು ಸೀತಾರಾಮನ್ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.