ETV Bharat / business

ಜಾಗತಿಕ ಜಿಡಿಪಿ ಶ್ರೇಣಿಯಲ್ಲಿ 7ನೇ ಸ್ಥಾನಕ್ಕೆ ಕುಸಿದ ಭಾರತ..!

ಆರ್ಥಿಕತೆಯಲ್ಲಿ ನಿರೀಕ್ಷಿತ ಮಟ್ಟದ ಸುಧಾರಣೆಯಿಂದ 2017ರಲ್ಲಿ 6ನೇ ಅತಿದೊಡ್ಡ ಆರ್ಥಿಕತೆ ಹೊರಹೊಮ್ಮಿದ್ದ ಭಾರತ, 2018ನೇ ಸಾಲಿನಲ್ಲಿ 2.7 ಟ್ರಿಲಿಯನ್ ಡಾಲರ್​​ ಜಿಡಿಪಿಯಿಂದ 7ನೇ ಸ್ಥಾನಕ್ಕೆ ಕುಸಿದಿದೆ.

India slips to 7th largest economy in 2018 world bank
author img

By

Published : Aug 2, 2019, 4:49 PM IST

ನವದೆಹಲಿ: 2018ರ ಸಾಲಿನ ಜಾಗತಿಕ ಆರ್ಥಿಕ ರಾಷ್ಟ್ರಗಳ ಜಿಡಿಪಿ ಶ್ರೇಣಿಯಲ್ಲಿ ಭಾರತ 7ನೇ ಸ್ಥಾನಕ್ಕೆ ಕುಸಿದಿದ್ದು, 2017ರ ವರ್ಷಕ್ಕಿಂತ ಒಂದು ಸ್ಥಾನ ಕೆಳಗಿಳಿದಿದೆ.

ಕಳೆದ ವರ್ಷದ ಆರ್ಥಿಕತೆಯಲ್ಲಿ ನಿರೀಕ್ಷಿತ ಮಟ್ಟದ ಸುಧಾರಣೆ ಕಾಣದ ಹಿನ್ನಲೆಯಲ್ಲಿ 2.7 ಟ್ರಿಲಿಯನ್​ ಡಾಲರ್​ನ ಜಿಡಿಪಿಯಿಂದಾಗಿ 7ನೇ ಸ್ಥಾನಕ್ಕೆ ಬಂದಿದೆ. 2.8 ಟ್ರಿಲಿಯನ್​ ಡಾಲರ್​ ಹೊಂದಿರುವ ಫ್ರಾನ್ಸ್​ 6ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ ಎಂದು ವಿಶ್ವಬ್ಯಾಂಕ್ ಈಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.

ಅಮೆರಿಕ 20.5 ಟ್ರಿಲಿಯನ್ ಡಾಲರ್​ ಜಿಡಿಪಿ ಮುಖೇನ ಮೊದಲ ಸ್ಥಾನದಲ್ಲಿದ್ದು, ನೆರೆಯ ಚೀನಾ 13.6 ಟ್ರಿಲಿಯನ್ ಡಾಲರ್​ನಿಂದ 2ನೇ ಸ್ಥಾನದಲ್ಲಿದೆ. ಜಪಾನ್​- 5 ಟ್ರಿಲಿಯನ್ ಡಾಲರ್​​, ಜರ್ಮನ್​- 4.0 ಟ್ರಿಲಿಯನ್ ಡಾಲರ್​ ಹಾಗೂ ಇಂಗ್ಲೆಂಡ್​- 2.8 ಟ್ರಿಲಿಯನ್ ಡಾಲರ್​ ಜಿಡಿಪಿ ಕ್ರಮವಾಗಿ 3, 4 ಮತ್ತು 5ನೇ ಸ್ಥಾನದಲ್ಲಿವೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಡಾಲರ್​ ಎದುರು ರೂಪಾಯಿ ಏರಿಳಿತ ಮತ್ತು ಮಂದಗತಿ ಆರ್ಥಿಕ ಬೆಳವಣಿಗೆಯಿಂದ ಜಾಗತಿಕ ಜಿಡಿಪಿ ಶ್ರೇಣಿಯಲ್ಲಿ ಭಾರತ 7ನೇ ಸ್ಥಾನಕ್ಕೆ ಕುಸಿದಿದೆ ಎಂದು ಎಕನಾಮಿಸ್ಟ್​ ಇಂಡಿಯಾ ರೇಟಿಂಗ್ಸ್ ಮತ್ತು ರೀಸರ್ಚ್​ನ ಮುಖ್ಯಸ್ಥ ದೇವೇಂದ್ರ ಪಂತ್​ ವಿಶ್ಲೇಷಿಸಿದ್ದಾರೆ.

ಭಾರತ ಅಭಿವೃದ್ಧಿಶೀಲ ರಾಷ್ಟ್ರವಾಗಿದ್ದು, ಪ್ರಸಕ್ತ ಆರ್ಥಿಕತೆ ವರ್ಷದಲ್ಲಿ (ಮಾರ್ಚ್​ವರೆಗೆ) ಶೇ.7ರಷ್ಟು ಬೆಳವಣಿಗೆ ಹೊಂದುವ ಗುರಿ ಹಾಕಿಕೊಂಡಿದೆ. ಚೀನಾ-ಅಮೆರಿಕ ನಡುವೆ ಟ್ರೇಡ್ ವಾರ್ ಆರಂಭವಾಗಿದ್ದು, ಈ ವಾಣಿಜ್ಯ ಸಮರ ಭಾರತಕ್ಕೆ ಲಾಭ ತಂದುಕೊಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2025 ವೇಳೆಗೆ 5ಟ್ರಿಲಿಯನ್​ ಡಾಲರ್ ಆರ್ಥಿಕತೆ ತಲುಪುವ ಗುರಿ ಇರಿಸಿಕೊಂಡಿದ್ದಾಗಿ ಹೇಳಿದ್ದಾರೆ. ಆದರೆ, ಈ ಅಂಕಿ-ಅಂಶ ನೋಡಿದರೆ ಅಂದುಕೊಂಡ ಗುರಿ ತಲುಪಲು ಪ್ರಸ್ತುತ ಆರ್ಥಿಕ ನೀತಿಗಳಲ್ಲಿ ಬದಲಾವಣೆ ತರುವ ಅಗತ್ಯವಿದೆ ಎಂಬುದು ಕಂಡುಬರುತ್ತಿದೆ.

ಅಂಕಿ-ಅಂಶ

ದಲ್ಲಿ ವಿಶ್ವದ ಬಲಾಢ್ಯ ಜಿಡಿಪಿ ರಾಷ್ಟ್ರಗಳು

ಶ್ರೇಣಿ ದೇಶ ಜಿಡಿಪಿ (ಶೇ) ಡಾಲರ್​ಗಳಲ್ಲಿ
1 ಅಮೆರಿಕ 20.5
2 ಚೀನಾ 13.6
3 ಜಪಾನ್ 5.0
4 ಜರ್ಮನಿ 4.0
5 ಇಂಗ್ಲೆಂಡ್ 2.8
6 ಫ್ರಾನ್ಸ್ 2.8
7 ಭಾರತ 2.7
8 ಇಟಲಿ 2.1
9 ಬ್ರೆಜಿಲ್ 1.9
10 ಕೆನಡಾ 1.7
11 ರಷ್ಯಾ 1.7
12 ದಕ್ಷಿಣ​ ಕೊರಿಯಾ 1.6
13 ಆಸ್ಟ್ರೇಲಿಯಾ 1.4
14 ಸ್ಪೇನ್​ 1.4

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.