ETV Bharat / business

ಜಾಗತಿಕ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ರೆಡ್ ಕಾರ್ಪೆಟ್ ಹಾಸುತ್ತಿದ್ದೇವೆ: ಮೋದಿ

ಎಲ್ಲಾ ಜಾಗತಿಕ ಕಂಪನಿಗಳು ಬಂದು ಭಾರತದಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸಲು ನಾವು ನಾವು ಅನುವು ಮಾಡಿಕೊಡುತ್ತಿದ್ದೇವೆ. ಭಾರತವು ಇಂದು ನೀಡುವಂತಹ ಅವಕಾಶಗಳನ್ನು ವಿಶ್ವದಲ್ಲಿ ಕೆಲವೇ ಕೆಲವು ದೇಶಗಳು ನೀಡುತ್ತಿವೆ. ದೇಶದಲ್ಲಿ ವಿವಿಧ ಉದಯೋನ್ಮುಖ ಕ್ಷೇತ್ರಗಳಲ್ಲಿ ಅನೇಕ ಸಾಧ್ಯತೆ ಮತ್ತು ಅವಕಾಶಗಳಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

economic recovery
ಪ್ರಧಾನಿ ಮೋದಿ
author img

By

Published : Jul 9, 2020, 3:04 PM IST

ನವದೆಹಲಿ: ಇಡೀ ವಿಶ್ವವೇ ಕೋವಿಡ್​-19 ಸಾಂಕ್ರಾಮಿಕ ರೋಗದೊಂದಿಗೆ ಹೋರಾಡುತ್ತಿರುವ ಈ ಕಾಲಘಟ್ಟದಲ್ಲಿ ಆರ್ಥಿಕ ಪುನಶ್ಚೇತನದ ಬಗ್ಗೆ ಮಾತನಾಡುವುದು ಸಹಜ. ಜಾಗತಿಕ ಅರ್ಥವ್ಯವಸ್ಥೆಯ ಮರುಜನ್ಮದ ಕಥೆಯಲ್ಲಿ ಭಾರತವು ಪ್ರಮುಖ ಪಾತ್ರ ವಹಿಸುವ ವಿಶ್ವಾಸವನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದ್ದಾರೆ.

'ಇಂಡಿಯಾ ಇನ್‌ಕಾರ್ಪ್‌' ಆಯೋಜಿಸಿರುವ ಇಂಡಿಯಾ ಗ್ಲೋಬಲ್ ವೀಕ್- 2020 ಮೂರು ದಿನಗಳ ವರ್ಚುವಲ್ ಕಾನ್ಫರೆನ್ಸ್ ಉದ್ದೇಶಿಸಿ ಅವರು ಮಾತನಾಡಿದರು.

ಭಾರತದ ಪ್ರತಿಭಾ ಶಕ್ತಿಯ ಕೊಡುಗೆಯನ್ನು ಜಗತ್ತು ನೋಡಿದೆ. ದೇಶದ ತಂತ್ರಜ್ಞಾನದ ಉದ್ಯಮ ಮತ್ತು ತಂತ್ರಜ್ಞ ವೃತ್ತಿಪರರನ್ನು ಯಾರಾದರೂ ಮರೆಯಬಹುದೇ? ಅವರು ದಶಕಗಳಿಂದ ತಮ್ಮ ಸಾಮರ್ಥ್ಯ ತೋರಿಸುತ್ತಿದ್ದಾರೆ. ಭಾರತವು ಪ್ರತಿಭೆಗಳಿಂದ ತುಂಬಿದ ಶಕ್ತಿಶಾಲಿಯಾದ ಮನೆ. ದೇಶ ಜಗತ್ತಿಗೆ ಅತ್ಯುತ್ತಮ ಕೊಡುಗೆಗಳನ್ನು ನೀಡಲು ಸದಾ ಉತ್ಸುಕವಾಗಿದೆ. ಭಾರತೀಯರು ನೈಸರ್ಗಿಕ ಸುಧಾರಕರು. ಇತಿಹಾಸವು ಸಹ ಅದಕ್ಕೆ ಪುರಾವೆಯಾಗಿದೆ.

ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಭಾರತವೂ ಪ್ರಬಲವಾಗಿ ಹೋರಾಟ ನಡೆಸುತ್ತಿದೆ. ಜನರ ಆರೋಗ್ಯದ ಜೊತೆಗೆ ನಾವು ಆರ್ಥಿಕ ಆರೋಗ್ಯದ ಮೇಲೂ ಗಮನ ಕೇಂದ್ರೀಕರಿಸಿದ್ದೇವೆ ಎಂದು ಪ್ರಧಾನಿ ಹೇಳಿದರು.

ಅಸಾಧ್ಯವೆಂದು ನಂಬಿದ್ದನ್ನು ಸಾಧಿಸುವ ಮನೋಭಾವ ಭಾರತೀಯರಿಗಿದೆ. ಭಾರತದಲ್ಲಿ ಆರ್ಥಿಕತೆಯು ಚೇತರಿಕೆಗೆ ಬಂದಿದ್ದು, ನಾವು ಈಗಾಗಲೇ ಹಸಿರು ಚಿಗುರುಗಳನ್ನು ನೋಡುತ್ತಿದ್ದೇವೆ ಎಂಬುದರಲ್ಲಿ ಆಶ್ಚರ್ಯವಿಲ್ಲ ಎಂದರು.

ಎಲ್ಲಾ ಜಾಗತಿಕ ಕಂಪೆನಿಗಳು ಬಂದು ಭಾರತದಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸಲು ನಾವು ರೆಡ್ ಕಾರ್ಪೆಟ್ ಹಾಸುತ್ತಿದ್ದೇವೆ. ಭಾರತವು ಇಂದು ನೀಡುವಂತಹ ಅವಕಾಶಗಳನ್ನು ಕೆಲವೇ ದೇಶಗಳು ನೀಡುತ್ತವೆ. ಭಾರತದಲ್ಲಿ ವಿವಿಧ ಉದಯೋನ್ಮುಖ ಕ್ಷೇತ್ರಗಳಲ್ಲಿ ಅನೇಕ ಸಾಧ್ಯತೆ ಮತ್ತು ಅವಕಾಶಗಳಿವೆ. ಕೃಷಿಯಲ್ಲಿನ ನಮ್ಮ ಸುಧಾರಣೆಗಳು ಶೇಖರಣಾ ಮತ್ತು ಲಾಜಿಸ್ಟಿಕ್ಸ್​ನಲ್ಲಿ ಹೂಡಿಕೆ ಮಾಡಲು ಬಹಳ ಆಕರ್ಷಕ ಹೂಡಿಕೆ ಅವಕಾಶಗಳನ್ನು ಕಲ್ಪಿಸುತ್ತಿದ್ದೇವೆ ಎಂದು ಮೋದಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.