ನವದೆಹಲಿ : ಮುಂಬರುವ ತಿಂಗಳಲ್ಲಿ ಜಿಡಿಪಿಯ ಶೇ.1ರಷ್ಟು ಮೌಲ್ಯದ ಮತ್ತೊಂದು ಸುತ್ತಿನ ಹಣಕಾಸಿನ ಉತ್ತೇಜನ ಪ್ಯಾಕೇಜ್‌ನ ಕೇಂದ್ರ ಸರ್ಕಾರ ಘೋಷಿಸುವ ಸಾಧ್ಯತೆಯಿದೆ ಎಂದು ಫಿಚ್ ರೇಟಿಂಗ್ಸ್ ತಿಳಿಸಿದೆ.
ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆ ಕೋವಿಡ್-19 ಬಳಿಕದ ಅಂತಿಮ ಉತ್ತೇಜಕ ಆರ್ಥಿಕ ಪ್ಯಾಕೇಜ್‌ನ ಕೇಂದ್ರ ಸರ್ಕಾರ ಪ್ರಕಟಿಸುವ ಸಾಧ್ಯತೆಯಿದೆ ಎಂದು ಆರ್‌ಬಿಐ ನಿರ್ದೇಶಕ ಎಸ್ ಗುರುಮೂರ್ತಿ ಹೇಳಿದ್ದರು. ಈಗ ಫಿಚ್ ರೇಂಟಿಗ್ ಪ್ಯಾಕೇಜ್ ಘೋಷಣೆ ಆಗಲಿದೆ ಎಂದು ಸುಳಿವು ನೀಡಿದೆ. ಕಳೆದ ವಾರ ಭಾರತದ ಸಾರ್ವಭೌಮ ರೇಟಿಂಗ್ ದೃಷ್ಟಿಕೋನವನ್ನು ಸ್ಥಿರತೆಯಿಂದ ನೆಗೆಟಿವ್ಗೆ ಇಳಿಸಿದ ಫಿಚ್, ರೇಟಿಂಗ್ ಕ್ರಮವನ್ನು ಹೆಚ್ಚುವರಿ ಹಣಕಾಸಿನ ಪ್ರಚೋದನೆಯಿಂದಾಗಿ ಪರಿಷ್ಕರಿಸಲಾಗಿದೆ ಎಂದು ಹೇಳಿತ್ತು.
ಭಾರತದಲ್ಲಿ ಈಗಲೂ ಕೋವಿಡ್ -19 ಪ್ರಭಾವವಿದೆ. ಆರ್ಥಿಕತೆಯನ್ನು ಬೆಂಬಲಿಸಲು ಸರ್ಕಾರವು ಹಣಕಾಸಿನ ಉತ್ತೇಜನಕ್ಕೆ ಇನ್ನೂ ಸ್ವಲ್ಪ ಹೆಚ್ಚುವರಿ ಖರ್ಚು ಮಾಡಬೇಕಾಗುತ್ತದೆ ಎಂದು ಫಿಚ್ ನಿರ್ದೇಶಕ ಥಾಮಸ್ ರೂಕ್ಮೇಕರ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಜಿಡಿಪಿಯ ಶೇ.10ರಷ್ಟು ಉತ್ತೇಜಕ ಕ್ರಮಗಳನ್ನು ಘೋಷಿಸಿದ್ದಾರೆ. ಆದರೆ, 9 ಪ್ರತಿಶತದಷ್ಟು ಹಣಕಾಸಿನೇತರ ಸ್ವರೂಪದಲ್ಲಿದೆ. ಬಾಂಡ್ ವಿತರಣೆ, ಸರ್ಕಾರದ ಸಾಲ ಪಡೆಯುವ ಅವಶ್ಯಕತೆಗಳಂತವು ಇದರಲ್ಲಿ ಸೇರಿವೆ. ಅಗತ್ಯ ಇರುವವರಿಗೆ ಪರಿಹಾರ ಒದಗಿಸಲು ಮುಂದಿನ ತಿಂಗಳಲ್ಲಿ ಇನ್ನೂ ಶೇ.1ರಷ್ಟು ಪ್ಯಾಕೇಜ್ ಬರಬಹುದು ಎಂಬ ಸೂಚನೆಯನ್ನು ನಾವು ನೀಡುತ್ತೇವೆ ಎಂದು ಫಿಚ್ ರೇಟಿಂಗ್ನ ವೆಬ್‌ನಾರ್ ಉದ್ದೇಶಿಸಿ ಮಾತನಾಡಿದರು.