ETV Bharat / business

ಯುಪಿಎ ಸರ್ಕಾರದಲ್ಲಿದ್ದ 'ಟ್ಯಾಕ್ಸ್​​ ಟೆರರಿಸಂ'ಗೆ ಅಂತ್ಯವಾಡಿ ತೆರಿಗೆ ಪಾರದರ್ಶಕತೆ ತಂದಿದ್ದೇವೆ: ಪ್ರಧಾನಿ ಮೋದಿ - pm modi tax reform

ಹಿಂದಿನ ಸರ್ಕಾರಗಳ ಅವಧಿಯಲ್ಲಿ ತೆರಿಗೆ ಭಯೋತ್ಪಾದನೆ ಎಂಬುದು ಸಾಮಾನ್ಯ ಪಲ್ಲವಿ ಆಗಿತ್ತು. ಈಗ ದೇಶವು ಅದನ್ನು ಬಿಟ್ಟು ತೆರಿಗೆ ಪಾರದರ್ಶಕತೆಯತ್ತ ಸಾಗಿದೆ. ತೆರಿಗೆ ಭಯೋತ್ಪಾದನೆಯಿಂದ ತೆರಿಗೆ ಪಾರದರ್ಶಕತೆಗೆ ಬದಲಾವಣೆ ಸಂಭವಿಸಿದೆ. ಏಕೆಂದರೆ ನಾವು ಸುಧಾರಣೆ, ತೆರಿಗ ಪ್ರಗತಿ ಮತ್ತು ಬದಲಾವಣೆಯ ಪರಿಕಲ್ಪನೆಯನ್ನು ಪ್ರಚಾರ ಮಾಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ
PM Modi
author img

By

Published : Nov 11, 2020, 7:08 PM IST

ನವದೆಹಲಿ: ಕಳೆದ ಆರು ವರ್ಷಗಳಲ್ಲಿ ತೆರಿಗೆ ಸುಧಾರಣೆ ಸಂಬಂಧಿತ ತೆಗೆದುಕೊಂಡ ಕ್ರಮಗಳಿಂದಾಗಿ ಭಾರತವು ತೆರಿಗೆ ಭಯೋತ್ಪಾದನೆಯಿಂದ ತೆರಿಗೆ ಪಾರದರ್ಶಕತೆಗೆ ಸಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಒತ್ತಿಹೇಳಿದ್ದಾರೆ.

ಕಟಕ್‌ನಲ್ಲಿನ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದ ಕಚೇರಿ ಕಮ್ ರೆಸಿಡೆನ್ಶಿಯಲ್ ಕಾಂಪ್ಲೆಕ್ಸ್‌ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮೋದಿ, ಕಾರ್ಪೊರೇಟ್ ತೆರಿಗೆ ದರ ಕಡಿತ, ವೈಯಕ್ತಿಕ ತೆರಿಗೆದಾರರಿಗೆ ಸರಳೀಕೃತ ದರ ರಚನೆ, ಮುಖರಹಿತ ಮೇಲ್ಮನವಿ ಮತ್ತು ತ್ವರಿತ ಮರುಪಾವತಿಯಂತಹ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.

ಹಿಂದಿನ ಸರ್ಕಾರಗಳ ಅವಧಿಯಲ್ಲಿ ತೆರಿಗೆ ಭಯೋತ್ಪಾದನೆ ಎಂಬುದು ಸಾಮಾನ್ಯ ಪಲ್ಲವಿ ಆಗಿತ್ತು. ಈಗ ದೇಶವು ಅದನ್ನು ಬಿಟ್ಟು ತೆರಿಗೆ ಪಾರದರ್ಶಕತೆಯತ್ತ ಸಾಗಿದೆ. ತೆರಿಗೆ ಭಯೋತ್ಪಾದನೆಯಿಂದ ತೆರಿಗೆ ಪಾರದರ್ಶಕತೆಗೆ ಬದಲಾವಣೆ ಸಂಭವಿಸಿದೆ. ಏಕೆಂದರೆ ನಾವು ಸುಧಾರಣೆ, ತೆರಿಗ ಪ್ರಗತಿ ಮತ್ತು ಬದಲಾವಣೆಯ ಪರಿಕಲ್ಪನೆಯನ್ನು ಪ್ರಚಾರ ಮಾಡಿದ್ದೇವೆ ಎಂದು ಹೇಳಿದರು.

ಸ್ವಾತಂತ್ರ್ಯದ ಬಳಿಕ ತೆರಿಗೆ ಪಾವತಿದಾರ ಮತ್ತು ತೆರಿಗೆ ಸಂಗ್ರಹಕಾರರ ನಡುವಿನ ಶೋಷಿತ ಸಂಬಂಧಗಳ ಬದಲಾವಣೆ ಹೆಚ್ಚಾಗಿ ಸಂಭವಿಸಿಲ್ಲ. ಆದರೆ ಈಗ ಬದಲಾವಣೆ ಆಗುತ್ತಿದೆ. ಮುಖರಹಿತ ಮೇಲ್ಮನವಿ, ತ್ವರಿತ ಮರುಪಾವತಿ ಮತ್ತು ವಿವಾದ ಪರಿಹಾರದ ಕಾರ್ಯವಿಧಾನದಂತಹ ಕ್ರಮಗಳನ್ನು ಉಲ್ಲೇಖಿಸಿದರು.

ನಾವು ನಿಯಮ ಮತ್ತು ಕಾರ್ಯವಿಧಾನಗಳನ್ನು ಸುಧಾರಿಸುತ್ತಿದ್ದೇವೆ. ಇದಕ್ಕಾಗಿ ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ. ತೆರಿಗೆ ಆಡಳಿತವನ್ನು ಪರಿವರ್ತಿಸಲಾಗುತ್ತಿದೆ. ತೆರಿಗೆದಾರರ ಹಕ್ಕು ಮತ್ತು ಜವಾಬ್ದಾರಿಗಳನ್ನು ಕ್ರೋಡೀಕರಿಸಿದ ಆಯ್ದ ಕೆಲವೇ ರಾಷ್ಟ್ರಗಳಲ್ಲಿ ಭಾರತವೂ ಸೇರಿದೆ. ತೆರಿಗೆದಾರ ಮತ್ತು ತೆರಿಗೆ ಸಂಗ್ರಹಕಾರರ ನಡುವೆ ವಿಶ್ವಾಸ ಮತ್ತು ಪಾರದರ್ಶಕತೆ ಮರುಸ್ಥಾಪಿಸಲಾಗಿದೆ. ಇದೊಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಮೋದಿ ಹೇಳಿದರು.

ಸಂಪತ್ತು ಸೃಷ್ಟಿಕರ್ತರನ್ನು ಗೌರವಿಸಬೇಕು. ಅವರ ಸಮಸ್ಯೆಗಳನ್ನು ಸರಾಗಗೊಳಿಸುವಿಕೆಯು ಆರ್ಥಿಕತೆಯ ಬೆಳವಣಿಗೆಗೆ ನೆರವಾಗುತ್ತದೆ. ಶೇ 99.75ರಷ್ಟು ತೆರಿಗೆ ರಿಟರ್ನ್ಸ್ ಅನ್ನು ನಿಸ್ಸಂದೇಹವಾಗಿ ಸ್ವೀಕರಿಸುವುದು ತೆರಿಗೆದಾರರನ್ನು ನಂಬುವ ಮಹತ್ವದ ಹೆಜ್ಜೆಯಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.