ETV Bharat / business

ಅ. 9ರ ಅಂತ್ಯಕ್ಕೆ ವಿದೇಶಿ ವಿನಿಮಯ ಸಂಗ್ರಹ ನಿಧಿಗೆ 5 ಬಿಲಿಯನ್ ಡಾಲರ್​ ಸೇರ್ಪಡೆ!

author img

By

Published : Oct 17, 2020, 4:29 PM IST

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಾಪ್ತಾಹಿಕ ಅಂಕಿಅಂಶಗಳ ಪ್ರಕಾರ, ಅಕ್ಟೋಬರ್ 2ಕ್ಕೆ ಕೊನೆಗೊಂಡ ವಾರದಲ್ಲಿ ಮೀಸಲು ನಿಧಿಯ ಮೊತ್ತೆ 545.638 ಬಿಲಿಯನ್ ಡಾಲರ್​​ನಿಂದ 551.505 ಬಿಲಿಯನ್​ ಡಾಲರ್​​ಗೆ ಏರಿದೆ.

forex reserves
ವಿದೇಶಿ ವಿನಿಮಯ

ಮುಂಬೈ: ಅಕ್ಟೋಬರ್ 9ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು 5.867 ಬಿಲಿಯನ್ ಡಾಲರ್​ಗೆ ಏರಿಕೆಯಾಗಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಾಪ್ತಾಹಿಕ ಅಂಕಿಅಂಶಗಳ ಪ್ರಕಾರ, ಅಕ್ಟೋಬರ್ 2ಕ್ಕೆ ಕೊನೆಗೊಂಡ ವಾರದಲ್ಲಿ ಮೀಸಲು ನಿಧಿಯ ಮೊತ್ತ 545.638 ಬಿಲಿಯನ್ ಡಾಲರ್​​ನಿಂದ 551.505 ಬಿಲಿಯನ್​ ಡಾಲರ್​​ಗೆ ಏರಿದೆ.

ಭಾರತದ ವಿದೇಶಿ ವಿನಿಮಯ ಸಂಗ್ರಹವು ವಿದೇಶಿ ಕರೆನ್ಸಿ ಆಸ್ತಿ (ಎಫ್‌ಸಿಎ), ಚಿನ್ನದ ಮೀಸಲು, ವಿಶೇಷ ಡ್ರಾಯಿಂಗ್ ರೈಟ್ಸ್​ (ಎಸ್‌ಡಿಆರ್) ಮತ್ತು ಅಂತರಾಷ್ಟ್ರೀಯ ಹಣಕಾಸು ನಿಧಿ ಒಳಗೊಂಡಿದೆ

ಸಾಪ್ತಾಹಿಕ ಆಧಾರದ ಮೇಲೆ ವಿದೇಶಿ ವಿನಿಮಯ ನಿಕ್ಷೇಪಗಳ ಅತಿದೊಡ್ಡ ಯೂನಿಟ್​ ಆದ ಎಫ್‌ಸಿಎ 5.737 ಬಿಲಿಯನ್‌ ಡಾಲರ್​ನಿಂದ 508.783 ಬಿಲಿಯನ್‌ಗೆ ಏರಿದೆ.

ದೇಶದ ಚಿನ್ನದ ನಿಕ್ಷೇಪಗಳ ಮೌಲ್ಯವೂ ಹೆಚ್ಚಾಗಿದ್ದು, ಇದು 113 ಮಿಲಿಯನ್ ಏರಿಕೆಯಾಗಿ 36.598 ಶತಕೋಟಿ ಡಾಲರ್​ಗೆ ತಲುಪಿದೆ. ಎಸ್‌ಡಿಆರ್ ಮೌಲ್ಯವು 4 ಮಿಲಿಯನ್‌ನಿಂದ 1.480 ಶತಕೋಟಿ ಡಾಲರ್​ಗೆ ತಲುಪಿದೆ. ಹೆಚ್ಚುವರಿಯಾಗಿ ಐಎಂಎಫ್‌ನೊಂದಿಗೆ ದೇಶದ ಮೀಸಲು ಸ್ಥಾನವು 13 ಮಿಲಿಯನ್‌ನಿಂದ 4.644 ಬಿಲಿಯನ್‌ ಡಾಲರ್​ಗೆ ಏರಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.