ETV Bharat / business

2030ಕ್ಕೆ ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕ ರಾಷ್ಟ್ರ: ಜೇಟ್ಲಿ - undefined

ದೇಶದ ಮುಂದಿನ 20 ವರ್ಷಗಳ ಬೆಳವಣಿಗೆ ಕುರಿತು ಮಾತನಾಡಿದ ಅರುಣ್ ಜೇಟ್ಲಿ, ಮೂಲಸೌಕರ್ಯ ಸೃಷ್ಟಿ, ಗ್ರಾಮೀಣಾಭಿವೃದ್ಧಿ ವಿಸ್ತರಣೆ ಮತ್ತು ಲಿಂಗ ಸಮಾನತೆಯ ಪಟ್ಟಿ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Apr 7, 2019, 11:29 AM IST

ನವದೆಹಲಿ: ಭಾರತ 2030ರ ವೇಳೆಗೆ 10 ಟ್ರಿಲಿಯನ್​ ಡಾಲರ್​ ಜಿಡಿಪಿ ತಲುಪುವ ಮೂಲಕ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಲಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್​ ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಮಾತನಾಡಿದ ಅವರು, ಪ್ರಸ್ತುತ ದೇಶದ ಆರ್ಥಿಕತೆಯ ಗಾತ್ರ ಸುಮಾರು 2.9 ಟ್ರಿಲಿಯನ್ ಡಾಲರ್​ನಷ್ಟಿದೆ. ಸದ್ಯ ಡಾಲರ್ ದರ ಆಧರಿಸಿ 5ನೇ ಮತ್ತು 6ನೇ ಅತಿದೊಡ್ಡ ಆರ್ಥಿಕ ರಾಷ್ಟ್ರಗಳ ಸಾಲಿನ ನಡುವೆ ಇರಿಸಿಕೊಂಡಿದ್ದೇವೆ. ಹಂತ ಹಂತವಾಗಿ ಜಿಡಿಪಿಯನ್ನು ವೃದ್ಧಿಗೊಳಿಸಿ 2024ರ ವೇಳೆಗೆ 5 ಟ್ರಿಲಿಯನ್ ಡಾಲರ್ ಹಾಗೂ 2030 ಅಥವಾ 2031ರ ಹೊತ್ತಿಗೆ 10 ಟ್ರಿಲಿಯನ್ ಡಾಲರ್ ಮುಟ್ಟುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ವಿಶ್ವದ ದೊಡ್ಡ ಆರ್ಥಿಕತೆ ರಾಷ್ಟ್ರಗಳು ಅಂಥ ಬಂದಾಗ ಮೊದಲು ಅಮೆರಿಕ, ಚೀನಾ ಹಾಗೂ ಮೂರನೇ ಸ್ಥಾನದಲ್ಲಿ ಭಾರತ ಇರಲಿದೆ. ಈ ಸ್ಥಾನಕ್ಕೆ ತಲುಪಲು ಹೆಚ್ಚು- ಹೆಚ್ಚು ಪ್ರಬಲವಾಗಿ ಸ್ಪರ್ಧೆಯೊಡ್ಡಲು ಬಯಸುತ್ತೇವೆ. ಇದರಿಂದ ಆರ್ಥಿಕತೆಯ ಗಾತ್ರ ಹಾಗೂ ಅವಕಾಶಗಳು ವಿಸ್ತರಿಸಲಿವೆ ಎಂದು ಜೇಟ್ಲಿ ತಿಳಿಸಿದ್ದಾರೆ.

2011ರ ಜನಗಣತಿ ಪ್ರಕಾರ ಭಾರತದ ಒಟ್ಟು ಜನಸಂಖ್ಯೆಯ ಶೇ 21.9ರಷ್ಟು ಜನರು ಬಡತನ ರೇಖೆಯ ಕೆಳಗೆ (ಬಿಪಿಎಲ್) ಜೀವನ ಸಾಗಿಸುತ್ತಿದ್ದಾರೆ. ಪ್ರಸಕ್ತ ಬೆಳವಣಿಗೆ ದರದಲ್ಲಿ ಇಂದು ಇದು ಶೇ. 17ಕ್ಕೆ ತಲುಪಿದೆ ಎಂದು ಕಾಲೇಜಿನ ಹಳೆಯ ವಿದ್ಯಾರ್ಥಿಯೂ ಆಗಿರುವ ಜೇಟ್ಲಿ ಮಾಹಿತಿ ನೀಡಿದ್ದಾರೆ.

ಬಡತನ 2021ರ ವೇಳೆಗೆ ಶೇ. 15ಕ್ಕೆ ಕುಸಿಯಬೇಕು. 2024- 25ರ ಹೊತ್ತಿಗೆ ಒಂದಂಕಿಗೆ ತಲುಪಬೇಕು. ಅದೇ ಅವಧಿಯಲ್ಲಿ ಮಧ್ಯಮ ವರ್ಗದ ಜನಸಂಖ್ಯೆ ಪ್ರಮಾಣ ಶೇ. 29 ರಿಂದ ಶೇ 44 ಏರಿಕೆ ಆಗಲಿದೆ ಎಂಬ ಅಧ್ಯಯನವೊಂದರ ವರದಿಯನ್ನು ಉಲ್ಲೇಖಿಸಿದರು. ಮುಂದೆ ಬಡತನ ಕೊನೆಯಾಗುವುದನ್ನು ಕಣ್ಣಾರೇ ನೋಡುತ್ತಿರಾ. ಮಧ್ಯಮ ವರ್ಗದವರ ಜನಸಂಖ್ಯೆ ಪ್ರಮಾಣದಲ್ಲಿ ವೇಗದ ಬೆಳವಣಿಗೆ ಆಗಲಿದೆ. 2030ರ ಹೊತ್ತಿಗೆ ಅರ್ಧದಷ್ಟು ಜನರು ಮಧ್ಯಮ ವರ್ಗದವರೇ ಇರುತ್ತಾರೆ ಎಂದು ಅಂದಾಜಿಸಿದರು.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.