ETV Bharat / business

ಗಡಿಯಾಚೆಗಿನ ವ್ಯಾಪಾರ ಮುಂದುವರಿಕೆಯಲ್ಲಿ ನೇಪಾಳಕ್ಕೆ ಭಾರತ ಆರ್ಥಿಕ ಕಾರ್ಯಸಾಧು: ತಜ್ಞರ ಅಭಿಮತ - former diplomat JK Tripathi

ಈಗ ಉಭಯ ದೇಶಗಳ ನಡುವೆ ನಡೆಯುತ್ತಿರುವ ಗಡಿ ವಿವಾದವನ್ನು ಕೊನೆಗೊಳಿಸಲು ಅಥವಾ ಎರಡೂ ದೇಶಗಳ ನಡುವಿನ ವ್ಯಾಪಾರ ಸಂಬಂಧವನ್ನು ಸುಧಾರಿಸಲು ಮತ್ತು ನೇಪಾಳದ ಆರ್ಥಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಭಾರತದ ಸ್ಥಾನವನ್ನು ಬದಲಿಸುವ ಚೀನಾ ಪ್ರಯತ್ನವನ್ನು ನಿರ್ಬಂಧಿಸಲು ಎರಡೂ ದೇಶಗಳು ಮುಕ್ತವಾಗಿವೆಯೇ ಅಥವಾ ಇಲ್ಲವೇ ಎಂಬುದು ಈಗಿ ಪ್ರಶ್ನೆಯಾಗಿದೆ.

Heading in English: India economically viable for Nepal to continue cross border trade:   Expert
ವಿಶೇಷ ಅಂಕಣ: ಗಡಿಯಾಚೆಗಿನ ವ್ಯಾಪಾರ ಮುಂದುವರಿಕೆಯಲ್ಲಿ ನೇಪಾಳಕ್ಕೆ ಭಾರತ ಆರ್ಥಿಕ ಕಾರ್ಯಸಾಧು: ತಜ್ಞರ ಅಭಿಮತ
author img

By

Published : Aug 20, 2020, 1:50 PM IST

ನವದೆಹಲಿ: ನೇಪಾಳ ಮತ್ತು ಭಾರತ ವ್ಯಾಪಾರ ಮತ್ತು ವಾಣಿಜ್ಯದಲ್ಲಿ ಹಿಂದಿನಿಂದಲೂ ಸಂಬಂಧ ಹೊಂದಿರುವ ಇತಿಹಾಸ ಇದೆ. ಭಾರತವು ನೇಪಾಳದ ಅತಿದೊಡ್ಡ ವ್ಯಾಪಾರ ಪಾಲುದಾರ ಮತ್ತು ವಿದೇಶಿ ಹೂಡಿಕೆಯ ಮೂಲವೂ ಆಗಿದೆ.

ಆದರೆ ಇಡೀ ಜಗತ್ತು ಮಹಾಮಾರಿ ಮಹಾಮಾರಿ ಕೊರೊನಾ ವೈರಸ್ ದಾಳಿಗೆ ಸಿಲುಕಿದ್ದ ಸಮಯದಲ್ಲಿ, ಪ್ರಾದೇಶಿಕ ವಿವಾದದ ವಿಚಾರವಾಗಿ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡು ಉಭಯ ದೇಶಗಳ ನಡುವಿನ ಸಂಬಂಧವು ನಿಧಾನವಾಗಿ ಕುಸಿದಿದೆ.

ಭಾರತ ಮತ್ತು ನೇಪಾಳ ತಮ್ಮ ರಾಜಕೀಯ ಭೂಪಟದಲ್ಲಿ ಒಂದೇ ಭೂಪ್ರದೇಶವನ್ನು ತಮ್ಮದೆಂದು ಹೇಳಿಕೊಳ್ಳುತ್ತವೆ. ನೇಪಾಳವು ಕಾಲಾಪಾನಿ, ಲಿಪುಲೇಖ್ ಮತ್ತು ಲಿಂಪಿಯಾಡುರಾದಲ್ಲಿ 400 ಚದರ್​ ಕಿ.ಮೀ ಭಾರತೀಯ ಭೂಮಿಯನ್ನು ನೇಪಾಳ ಪ್ರದೇಶದ ಭಾಗವಾಗಿ ಘೋಷಿಸಿದೆ. ಇದು ಎರಡು ದೇಶಗಳ ದ್ವಿಪಕ್ಷೀಯ ಸಂಬಂಧದ ಅಸ್ಥಿರತೆಗೆ ಪ್ರಮುಖ ಕಾರಣವಾಗಿದೆ.

ಉಭಯ ದೇಶಗಳ ನಡುವಿನ ಈ ಎಲ್ಲ ರೀತಿಯ ಅಸಮಾನತೆಗಳ ಮಧ್ಯೆ, ಭಾರತ ಮತ್ತು ನೇಪಾಳ ಮಧ್ಯೆ ನಡೆಯುತ್ತಿದ್ದ ಆಳವಾದ ವ್ಯಾಪಾರ ಸಂಬಂಧಗಳ ಮೇಲೆ ಅತಿ ಹೆಚ್ಚಾಗಿ ಪರಿಣಾಮ ಬೀರಿದೆ.

ಈ ಮಧ್ಯೆ, ಹೆಚ್ಚುತ್ತಿರುವ ಸಾಂಕ್ರಾಮಿಕ ರೋಗ ಕೊರೊನಾ ವೈರಸ್ ಹಾವಳಿ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ಚೀನಾದ ಪ್ರಾಬಲ್ಯದ ತಂತ್ರ ಸೇರಿದಂತೆ ಪ್ರಾಬಲ್ಯದ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನೇಪಾಳ ಮತ್ತು ಭಾರತ ಎರಡೂ ಒಪ್ಪಂದಗಳಿಗೆ ಬರಲು ನಿರ್ಧರಿಸಿದವು. ಈ ಮೂಲಕ ಭಾರತ ಮತ್ತು ನೇಪಾಳ ತಮ್ಮ ಸಮಸ್ಯೆಗಳ ಕುರಿತಂತೆ ಪರಿಹಾರ ಕಂಡುಕೊಳ್ಳಲು ಚರ್ಚೆಗಳನ್ನು ಮುಂದುವರಿಸಲು ಒಪ್ಪಿಕೊಂಡಿವೆ.

ಭವಿಷ್ಯದಲ್ಲಿ ದ್ವಿಪಕ್ಷೀಯ ವಿಷಯಗಳ ಬಗ್ಗೆ ಮತ್ತು ಗಡಿ ಮೂಲಸೌಕರ್ಯ ಯೋಜನೆಗಳು ಮತ್ತು ಇತರ ಅಭಿವೃದ್ಧಿ ಯೋಜನೆಗಳ ಮೇಲೆ ಹೆಚ್ಚು ಗಮನ ಹರಿಸಲಾಗಿದೆ.

ಈಗ ಉಭಯ ದೇಶಗಳ ನಡುವೆ ನಡೆಯುತ್ತಿರುವ ಗಡಿ ವಿವಾದವನ್ನು ಕೊನೆಗೊಳಿಸಲು ಅಥವಾ ಎರಡೂ ದೇಶಗಳ ನಡುವಿನ ವ್ಯಾಪಾರ ಸಂಬಂಧವನ್ನು ಸುಧಾರಿಸಲು ಮತ್ತು ನೇಪಾಳದ ಆರ್ಥಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಭಾರತದ ಸ್ಥಾನವನ್ನು ಬದಲಿಸುವ ಚೀನಾ ಪ್ರಯತ್ನವನ್ನು ನಿರ್ಬಂಧಿಸಲು ಎರಡೂ ದೇಶಗಳು ಮುಕ್ತವಾಗಿವೆಯೇ ಅಥವಾ ಇಲ್ಲವೇ ಎಂಬುದು ಈಗ ಪ್ರಶ್ನೆಯಾಗಿದೆ.

ಈ ಕುರಿತಂತೆ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಮಾಜಿ ರಾಜತಾಂತ್ರಿಕ ಅಧಿಕಾರಿ ಜೆ.ಕೆ. ತ್ರಿಪಾಠಿ, “ಮಹಾಮಾರಿ ಕೊರೊನಾ ವೈರಸ್ ಹಾವಳಿಯಿಂದಾಗಿ ಖಂಡಿತವಾಗಿಯೂ ಗಡಿ ಸಮಸ್ಯೆ ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಸಂಬಂಧದ ಮೇಲೆ ಪರಿಣಾಮ ಬೀರಿದೆ. ನೇಪಾಳ ದೇಶದ ಜೊತೆ ಗಡಿ ಉದ್ವಿಗ್ನತೆ, ಗಡಿಯ ಬಯಲು ಪ್ರದೇಶಗಳಲ್ಲಿ ನೇಪಾಳದಿಂದ ಗಡಿಯುದ್ದಕ್ಕೂ ಚೆಕ್ ಪೋಸ್ಟ್ ನಿರ್ಮಾಣ ಮತ್ತು ಸ್ತಂಭಗಳ ಸ್ಥಾಪನೆ ಆಗಿದೆ. ಆದರೆ, ನೇಪಾಳವು ಈಗಾಗಲೇ ಎರಡು-ಮೂರು ಚೆಕ್ ಪೋಸ್ಟ್​​ಗಳನ್ನು ತೆಗೆದು ಹಾಕಲು ಒಪ್ಪಿಕೊಂಡಿದೆ. ಜೊತೆಗೆ ವ್ಯಾಪಾರಕ್ಕಾಗಿ ಹೆಚ್ಚು ಮುಕ್ತವಾಗಿ ಗಡಿಯನ್ನು ತೆರೆಯಲು ಉತ್ಸುಕವಾಗಿದೆ ".

"ಇನ್ನೂ ಹೇಗಿದ್ದರೂ ಚೀನಾ ನೇಪಾಳದಲ್ಲಿ ತನ್ನ ಪಾತ್ರವನ್ನು ವಹಿಸುತ್ತದೆ ಅಥವಾ ನೇಪಾಳವು ಚೀನಾದಿಂದ ಪ್ರಭಾವಿತವಾಗಿರುತ್ತದೆ ಅಥವಾ ಚೀನಾದಿಂದ ತಪ್ಪಿಸಿಕೊಳ್ಳಲ್ಪಡುತ್ತದೆ, ಆದರೆ ಚೀನಾವು ನೇಪಾಳ ರಾಷ್ಟ್ರಕ್ಕೆ ರಸ್ತೆಯ ಮೂಲಸೌಕರ್ಯ, ಲಾಸಾದಿಂದ ಕಠ್ಮಂಡುವಿಗೆ ಮತ್ತು ಭಾರತದ ಗಡಿಯವರೆಗೆ ರೈಲು ಮೂಲಸೌಕರ್ಯ ಸೇರಿದಂತೆ ಚೀನಾವು ಎಲ್ಲವೂ ಸಿದ್ಧಪಡಿಸುವವರೆಗೂ, ನೇಪಾಳವು ವ್ಯಾಪಾರ ಅಥವಾ ಭಾರತದ ಮೂಲಕ ಸಮುದ್ರ ಮಾರ್ಗಕ್ಕಾಗಿ ಭಾರತವನ್ನು ಅವಲಂಬಿಸಬೇಕಾಗಿದೆ, ಆದ್ದರಿಂದ ಖಂಡಿತವಾಗಿಯೂ ನೇಪಾಳ ದೇಶಕ್ಕೆ ಇಷ್ಟವಿಲ್ಲದಿದ್ದರೂ ಸಹ ಅದು ಭಾರತ ದೇಶವನ್ನು ವಿಧಿ ಇಲ್ಲದೆ ಅವಲಂಬಿಸಬೇಕಾಗಿದೆ. ಇಲ್ಲವಾದರೆ ನೇಪಾಳದ ವ್ಯಾಪಾರದ ಮೇಲೆಯೂ ಸಹ ಭಾರೀ ಕೆಟ್ಟ ಪರಿಣಾಮ ಬೀರುತ್ತದೆ " ಎನ್ನುತ್ತಾರೆ ಜೆ.ಕೆ. ತ್ರಿಪಾಠಿ.

ಇದನ್ನು ಹೇಳುತ್ತಾ, "ನೇಪಾಳದ ಜನರು ಮತ್ತು ಸರ್ಕಾರದ ಹಿತದೃಷ್ಟಿಯಿಂದ ಭಾರತದ ಮೇಲಿನ ಅವಲಂಬನೆ ಪ್ರಮುಖವಾಗಿದೆ ಎಂಬುದು ನೇಪಾಳ ಸರ್ಕಾರಕ್ಕೆ ಚೆನ್ನಾಗಿ ತಿಳಿದಿದೆ" ಎಂದು ಅವರು ಹೇಳುತ್ತಾರೆ.

ಭಾರತ ಸರ್ಕಾರದಿಂದ ಅಂತರ ಕಾಯ್ದುಕೊಳ್ಳುವ ಕುರಿತಂತೆ ನೇಪಾಳ ಎಷ್ಟೇ ಪ್ರಯತ್ನಿಸಿದ್ದರೂ ಸಹ ಭಾರತದ ಮೇಲಿನ ಅವರ ಅವಲಂಬನೆಯಿಂದಾಗಿ ಖಂಡಿತವಾಗಿಯೂ ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಮತ್ತು ಜನರು, ಸರ್ಕಾರದ ವಿಶ್ವಾಸ ಹೆಚ್ಚಳವಾಗುತ್ತದೆ ಎನ್ನುತ್ತಾರೆ ತ್ರಿಪಾಠಿ.

ನೇಪಾಳದಲ್ಲಿಯೂ ಜನರಿಂದ ಅಲ್ಲಿನ ಸರ್ಕಾರದ ವಿರುದ್ಧ ಪ್ರತಿಭಟನೆಗಳು, ಧರಣಿಗಳು ನಡೆದಿದ್ದು, ಸರ್ಕಾರದ ಕಾರ್ಯಚಟುವಟಿಕೆ ಬಗ್ಗೆ ಅಲ್ಲಿನ ಜನರು ಸಹ ಅಸಮಾಧಾನಗೊಂಡಿದ್ದಾರೆ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ. ಆದ್ದರಿಂದ ಅಂತಹ ಸಂದರ್ಭದಲ್ಲಿ, ನಾವು ಅಭಿವೃದ್ಧಿಗಾಗಿ ನೇಪಾಳದ ಜೊತೆ ಉತ್ತಮ ಸಂಬಂಧ ಹೊಂದಲು ಬಯಸುತ್ತಿದ್ದೇವೆ ಎಂಬ ಸಂದೇಶವನ್ನು ಭಾರತದ ಕಡೆಯಿಂದ ಅವರಿಗೆ ಕಳುಹಿಸಲಾಗುವುದು.

"ನೇಪಾಳ ಮತ್ತು ಭಾರತದ ಹಿತದೃಷ್ಟಿಯಿಂದ ನೇಪಾಳವು ಸಂತಸಗೊಂಡಿದೆಯೇ ಹೊರತು ಭಾರತವು ಸಹ ದೊಡ್ಡ ಮೊತ್ತದ ಹಣವನ್ನು ಸಾಲದ ರೂಪದಲ್ಲಿ ನೇಪಾಳಕ್ಕೆ ಕೊಟ್ಟಿರುವ ವಿಷಯದಿಂದಲ್ಲ. ಪ್ರಸ್ತುತ ಇರುವ ಮತ್ತು ಕಾಮಗಾರಿ ಹಂತದಲ್ಲಿರುವ ಯಾವುದೇ ಯೋಜನೆಗಳು ಉಭಯ ರಾಷ್ಟ್ರಗಳ ನಡುವೆ ಉದ್ಭವಿಸಿರುವ ಯಾವುದೇ ರಾಜಕೀಯ ಭಿನ್ನಾಭಿಪ್ರಾಯಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಉಭಯ ರಾಷ್ಟ್ರಗಳು ಮನಗಂಡಿವೆ ”ಎಂದು ತ್ರಿಪಾಠಿ ಗಮನ ಸೆಳೆದಿದ್ದಾರೆ.

ನೇಪಾಳ ದೇಶವು ಸುತ್ತಲೂ ಭೂಪ್ರದೇಶದಿಂದ ಆವೃತವಾಗಿದೆ. ಅದಕ್ಕೆ ಯಾವುದೇ ಸಮುದ್ರ ಮಾರ್ಗವಿಲ್ಲ. ಹೀಗಾಗಿ, ಆ ದೇಶಕ್ಕೆ, ಆಮದು ಮತ್ತು ರಫ್ತಿಗೆ ವ್ಯಾಪಾರ ಮಾರ್ಗ ಇದುವರೆಗೆ ಭಾರತ ದೇಶ ಮಾತ್ರವಾಗಿದೆ. ವಿಶ್ವದ ಯಾವುದೇ ಭಾಗದಿಂದ ನೇಪಾಳಕ್ಕೆ ಬರುವ ಎಲ್ಲ ಸರಕುಗಳನ್ನು ಭಾರತದ ಮೂಲಕವೇ ಕಳುಹಿಸಬೇಕು, ಬೇರೆಡೆಯಿಂದ ಬರುವ ಸರಕುಗಳು ಭಾರತೀಯ ಬಂದರುಗಳಲ್ಲಿ ಇಳಿಯುತ್ತವೆ ಮತ್ತು ಅಂತಿಮವಾಗಿ ನೇಪಾಳಕ್ಕೆ ಸಾಗಿಸಲ್ಪಡುತ್ತವೆ ಎಂದು ತ್ರಿಪಾಠಿ ವಿವರಿಸುತ್ತಾರೆ.

ಭಾರತ ಮತ್ತು ನೇಪಾಳದ ನಡುವೆ ಯಾವುದೇ ನಿರ್ಬಂಧವಿಲ್ಲದೆ ಸರಕುಗಳು ಸುಲಭವಾಗಿ ಗಡಿಯನ್ನು ದಾಟಬಲ್ಲವು, ಏಕೆಂದರೆ, ಈ ಎರಡೂ ದೇಶಗಳ ಗಡಿಯಲ್ಲಿ ಕೆಲವೇ ಕೆಲವು ಚೆಕ್ ಪೋಸ್ಟ್ ಮಾತ್ರ ಇವೆ. ಬಂದರುಗಳಲ್ಲಿ ಸರಕುಗಳನ್ನು ತೆರವುಗೊಳಿಸಲು ಮತ್ತು ಸಾರಿಗೆಗೆ ಭಾರತವು ವಿಶೇಷ ಸೌಲಭ್ಯಗಳನ್ನು ಹೊಂದಿರುವುದರಿಂದ ಇದು ನೇಪಾಳಕ್ಕೆ ಹೆಚ್ಚು ಅಗ್ಗವಾಗಿದೆ.

ಒಂದೊಮ್ಮೆ, ಚೀನಾವು ನೇರ ರೈಲ್ವೆ ಮಾರ್ಗದ ಮೂಲಕ ನೇಪಾಳವನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರೆ ಅದು ಅತ್ಯಂತ ಕಷ್ಟಕರವಾಗಿರುತ್ತದೆ.

"ನೇಪಾಳಿ ಸರಕುಗಳಿಗಾಗಿ ಚೀನಾ ಗೊತ್ತುಪಡಿಸಿದ ನಾಲ್ಕು ಬಂದರುಗಳಿವೆ. ನೇಪಾಳದಿಂದ ಚೀನಾಕ್ಕೆ ಸಾಗಿಸುವ ಸರಕುಗಳು, ಬಾಂಗ್ಲಾದೇಶ, ಮ್ಯಾನ್ಮಾರ್ ಮತ್ತು ಫಿಲಿಪೈನ್ಸ್​ ದಾಟಿ ನಂತರ ಚೀನಾವನ್ನು ಸಮುದ್ರದ ಮೂಲಕ ತಲುಪಬೇಕು, ಅದು ಸುಮಾರು 20 ದಿನಗಳನ್ನು ತೆಗೆದುಕೊಳ್ಳುತ್ತದೆ" ಎಂದು ಅವರು ಹೇಳುತ್ತಾರೆ.

ಈಗ, ಕಠ್ಮಂಡುವಿಗೆ ಸಂಪರ್ಕ ಕಲ್ಪಿಸಲು ಚೀನಾ ಮಾಡಲು ಉದ್ದೇಶಿಸಿರುವ ರೈಲು ಮಾರ್ಗದ ಮೂಲಕ ಬಂದರುಗಳಿಂದ ಯಾವುದೇ ಸರಕುಗಳನ್ನು ಸಾಗಿಸಿದರೆ ಅದು 40-45 ದಿನಗಳನ್ನು ತೆಗೆದುಕೊಳ್ಳುತ್ತದೆ. ಈ ಸರಕು ಸಾಗಣೆ ಯಾವುದೇ ಭಾರತೀಯ ಬಂದರುಗಳಿಂದ ಕೇವಲ 15 ದಿನಗಳನ್ನು ತೆಗೆದುಕೊಳ್ಳುತ್ತದೆ. ತ್ವರಿತವಾಗಿ ಸರಬರಾಜು ಎಂದರೆ ಕಡಿಮೆ ಸಾರಿಗೆ ವೆಚ್ಚ, ಸರಕುಗಳ ಸಾಗಣೆಗೆ ಹೆಚ್ಚಿನ ಸಾಧ್ಯತೆ ಎಂದು ಅವರು ಒತ್ತಿ ಹೇಳುತ್ತಾರೆ.

"ಟಿಬೆಟ್​​​​​ನ ರಾಜಧಾನಿ ಲಾಸಾದಿಂದ ನೇಪಾಳದ ಕಠ್ಮಂಡುವಿಗೆ ಮತ್ತು ಭಾರತ-ನೇಪಾಳ ಗಡಿಯವರೆಗೆ ಚೀನಾ ರೈಲ್ವೆ ಮಾರ್ಗವನ್ನು ಯೋಜಿಸಿದೆ ಎಂದು ತಿಳಿದು ಬಂದಿದೆ. ವೆಚ್ಚದ ಹಣವನ್ನು ಸಾಲವಾಗಿ ನೀಡಲು ಚೀನಾ ಸಿದ್ಧವಾಗಿದೆ ಮತ್ತು ಇದು 6.2 ಬಿಲಿಯನ್ ಡಾಲರ್ ಮೌಲ್ಯದ ಬೃಹತ್ ಮೆಗಾ ಪ್ರೊಜೆಕ್ಟ್ ಆಗಿದೆ. ಇದು ನೇಪಾಳಕ್ಕೆ ಅತ್ಯಂತ ದುಬಾರಿ ವ್ಯವಹಾರವಾಗಲಿದೆ ಏಕೆಂದರೆ ಲಾಸಾದಿಂದ ಕಠ್ಮಂಡುವಿನವರೆಗಿನ ಹೆಚ್ಚಿನ ಪ್ರದೇಶವು ಕಲ್ಲಿನಿಂದ ಕೂಡಿದ್ದು, 74-75 ಸುರಂಗಗಳು ಮತ್ತು ಕೆಲವು ಸೇತುವೆಗಳು ಬೇಕಾಗುತ್ತವೆ, ಇವುಗಳ ನಿರ್ಮಾಣವು ಹೆಚ್ಚು ವೆಚ್ಚದಾಯಕವಾಗಿರುತ್ತದೆ.

ಇದಲ್ಲದೆ, ಚೀನಾದಿಂದ ನೇಪಾಳಕ್ಕೆ ಪ್ರವೇಶಿಸುವ ಆರಂಭಿಕ ಪ್ರದೇಶಗಳು ಹೆಚ್ಚು ಭೂಕಂಪನ ಪ್ರದೇಶಗಳಾಗಿವೆ. ಇದು ಆರ್ಥಿಕವಾಗಿ ಲಾಭದಾಯಕವಲ್ಲ ಎಂಬುದು ತಜ್ಞರ ಅಭಿಪ್ರಾಯ. ಹಾಗಿದ್ದರೂ ಚೀನಾ ಮಾತ್ರ ಈ ಯೋಜನೆ ಮುಂದುವರೆಸಲು ನಿರ್ಧರಿಸಿದೆ.

ಸದ್ಯ, ನೇಪಾಳಕ್ಕೆ 2 ಬಿಲಿಯನ್ ಯುಎಸ್​ ಡಾಲರ್ ಚೀನಾದಿಂದ ಪಡೆದ ಸಾಲದ ಭಾರವಿದೆ. ನೇಪಾಳ ಈ ಸಾಲ ತೀರಿಸಿದರೆ, ಈ ಯೋಜನೆಯ ಶೇ. 50ರಷ್ಟು ವೆಚ್ಚದ ಹಣವನ್ನು ಚೀನಾ ಮತ್ತೆ ಸಾಲವಾಗಿ ನೇಪಾಳಕ್ಕೆ ನೀಡುತ್ತದೆ. ಇದರ ಪ್ರಮಾಣ 29 ಬಿಲಿಯನ್ ಡಾಲರ್ ಜಿಡಿಪಿ ಹೊಂದಿರುವ ದೇಶಕ್ಕೆ ಸುಮಾರು 6 ಬಿಲಿಯನ್ ಯುಎಸ್​ ಡಾಲರ್ ಅಷ್ಟಾಗುತ್ತದೆ. ಅಲ್ಲದೆ, ನೇಪಾಳವು ಇತರ ಐಎಂಎಫ್, ವಿಶ್ವಬ್ಯಾಂಕ್, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್​​​​ನಿಂದ ಸಾಲವನ್ನು ಹೊಂದಿದೆ. ಇವುಗಳನ್ನು ಒಳಗೊಂಡಂತೆ ಒಟ್ಟು ಸಾಲವು ಅವರ ಆರ್ಥಿಕತೆಯ ಮೂರನೇ ಒಂದು ಭಾಗದಷ್ಟು ಬರುತ್ತದೆ.

ಇದು ನೇಪಾಳಿ ಆರ್ಥಿಕತೆಯನ್ನು ತೀವ್ರ ಸಂಕಷ್ಟಕ್ಕೆ ಒಳಪಡಿಸುತ್ತದೆ. ಆದರೆ, ಈ ಕಟು ಸತ್ಯವನ್ನು ನೇಪಾಳ ಅರ್ಥಮಾಡಿಕೊಳ್ಳಲು ಹಿಂಜರಿಯುತ್ತದೆ. ಆದರೆ ನೇಪಾಳದ ಕೆಲವರು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಆದ್ದರಿಂದ ಅವರು ಈ ಯೋಜನೆಗೆ ಖಂಡಿತ ಆಕ್ಷೇಪ ಎತ್ತುತ್ತಾರೆ " ಎಂದು ಈ ಕುರಿತಂತೆ ಮಾಜಿ ರಾಜತಾಂತ್ರಿಕ ಅಧಿಕಾರಿ ತ್ರಿಪಾಠಿ ಮತ್ತಷ್ಟು ವಿವರಣೆ ನೀಡಿದ್ದಾರೆ.

ಸರಕುಗಳ ಆಮದು ಮತ್ತು ರಫ್ತಿಗಾಗಿ ಆರ್ಥಿಕವಾಗಿ ಕಾರ್ಯಸಾಧ್ಯವಾದ ಮಾರ್ಗಗಳನ್ನು ಹುಡುಕಿಕೊಳ್ಳುವವರೆಗೂ ನೇಪಾಳಕ್ಕೆ ಕಾರ್ಯಸಾಧ್ಯವಾದ ಮತ್ತು ಏಕೈಕ ಆರ್ಥಿಕ ಮಾರ್ಗ ಅದು ಭಾರತ ಮಾತ್ರವಾಗಿದೆ ಎಂದು ನೇಪಾಳ ತಿಳಿದಿದೆ.

ಭಾರತ-ನೇಪಾಳ ನಡುವಿನ ಸಂಬಂಧ ಕ್ರಮೇಣ ಪುನರುಜ್ಜೀವನಗೊಳ್ಳುತ್ತಿದೆ. ಏಕೆಂದರೆ, ನೇಪಾಳಕ್ಕೆ ಅಥವಾ ಭಾರತಕ್ಕೆ ಪರಸ್ಪರ ಹಂಚಿಕೆಯ ಬಾಂಧವ್ಯ ಮುಂದುವರಿಸುವುದನ್ನು ಬಿಟ್ಟರೆ ಬೇರೆ ಮಾರ್ಗವಿಲ್ಲ. ಈ ಮೂಲಕವೂ ಭಾರತ, ಚೀನಾವನ್ನು ಗಡಿಯಲ್ಲಿ ನಿರ್ಬಂಧಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳುತ್ತಾರೆ.

ನೇಪಾಳ ಭಾರತಕ್ಕೆ ಕಾಫು ದೇಶವಾಗಿ ಕಾರ್ಯನಿರ್ವಹಿಸಲಿದೆ, ಇದು ಬಹುಶಃ ಭಾರತ ಮತ್ತು ಚೀನಾ ನಡುವಿನ ಕುಶನ್ ಆಗಿರಬಹುದು, ಆದರೆ ಭಾರತವು ದೊಡ್ಡ ದೇಶವಾದ ಕಾರಣ ನೇಪಾಳವನ್ನು ನಿರ್ಲಕ್ಷಿಸಲು ಪ್ರಯತ್ನಿಸಿದರೆ, ಚೀನಾ ಆರ್ಥಿಕ ಮತ್ತು ರಾಜಕೀಯವಾಗಿ ನೇಪಾಳವನ್ನು ವಶಪಡಿಸಿಕೊಳ್ಳುತ್ತದೆ.

ಭಾರತವು ನೇಪಾಳದ ಪ್ರಾಥಮಿಕ ವ್ಯಾಪಾರ ಪಾಲುದಾರ ದೇಶವಾಗಿದ್ದು, ನೇಪಾಳದ ಶೇ. 65ಕ್ಕಿಂತ ಹೆಚ್ಚು ವ್ಯಾಪಾರ-ವ್ಯವಹಾರಗಳು ಭಾರತೀಯ ಬಂದರುಗಳ ಮೂಲಕ ಸಾಧ್ಯವಿದೆ. ಆದ್ದರಿಂದ ನೇಪಾಳ ಆಮದು ಮತ್ತು ರಫ್ತು ಕ್ಷೇತ್ರಗಳಲ್ಲಿ ಭಾರತವು ದೊಡ್ಡ ಪ್ರಮಾಣದಲ್ಲಿ ಪ್ರಾಬಲ್ಯ ಸಾಧಿಸಿದೆ. ಈ ಮಧ್ಯೆ, ನೇಪಾಳದ ಆರ್ಥಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಭಾರತದ ಸ್ಥಾನವನ್ನು ಬದಲಿಸಲು ಚೀನಾ ಪ್ರಯತ್ನಿಸುತ್ತಿದೆ.

ಚೀನಾ ಮುಖ್ಯವಾಗಿ ಭಾರತ ಮತ್ತು ನೇಪಾಳದ ವಿವಾದಗಳಲ್ಲಿ ಮಧ್ಯ ಪ್ರವೇಶಿಸಿ ಭಾರತವನ್ನು ನಿರ್ಬಂಧಿಸಲು ನೇಪಾಳದ ಬೆಂಬಲವನ್ನು ಪಡೆಯುತ್ತದೆ. ತಜ್ಞರ ಪ್ರಕಾರ, ಚೀನಾದ ಹಸ್ತಕ್ಷೇಪದಿಂದಾಗಿ ಭಾರತ ಮತ್ತು ನೇಪಾಳ ನಡುವಿನ ಸಂಬಂಧಗಳು ಹಾಳಾದವು. ಇದರ ಜೊತೆಗೆ, ನೇಪಾಳದ ಆಂತರಿಕ ಸಮಾಜದಲ್ಲಿ ಭಾರತ ವಿರೋಧಿ ಅಲೆಯನ್ನು ಹುಟ್ಟು ಹಾಕುವಲ್ಲಿ ಚೀನಾ ಪ್ರಮುಖ ಪಾತ್ರ ವಹಿಸಿದೆ.

ಲೇಖಕರು: ಚಂದ್ರಕಲಾ ಚೌಧರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.