ETV Bharat / business

ಮೋದಿ ಕನಸು ಕನ್ನಡ ನೆಲದಲ್ಲಿ ನನಸು... ತಮಿಳುನಾಡು ಹಿಂದಿಕ್ಕಿ ಕರ್ನಾಟಕವೇ ನಂ.1 - ಭಾರತದಲ್ಲಿ ನವೀಕರಿಸಬಹುದಾದ ಇಂಧನ

ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳು ಭಾರತದಲ್ಲೇ ನವೀಕರಿಸಬಹುದಾದ ಇಂಧನ ಬೆಳವಣಿಗೆಯಲ್ಲಿ ಮುಂಚೂಣಿಯಲ್ಲಿದ್ದು, ಈ ಎರಡೂ ರಾಜ್ಯಗಳು ಹೊಸ ಸಾಮರ್ಥ್ಯದ ಮೂರನೇ ಒಂದು ಭಾಗದಷ್ಟು ಶುದ್ಧ ಇಂಧನ ಉತ್ಪಾದಿಸುತ್ತಿವೆ. ಕರ್ನಾಟಕವು ನವೀಕರಿಸಬಹುದಾದ ಇಂಧನ ಸಾಮರ್ಥ್ಯದಲ್ಲಿ ತಮಿಳುನಾಡು ಹಿಂದಿಕ್ಕಿ ಇದೇ ಮೊದಲ ಬಾರಿಗೆ ಪ್ರಥಮ ಸ್ಥಾನ ಪಡೆದೆ.

Karnataka
ಕರ್ನಾಟಕ
author img

By

Published : Dec 4, 2019, 1:29 PM IST

ನವದೆಹಲಿ: ಹವಾಮಾನ ವೈಪರೀತ್ಯ, ತೈಲದ ಹಾಗೂ ಸಾಂಪ್ರದಾಯಿಕ ಇಂಧನಗಳ ಮೇಲಿನ ಅವಲಂಬನೆ ತಗ್ಗಿಸಿ ನವೀಕರಿಸಬಹುದಾದ ಇಂಧನಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ಹೇಳಿಕೊಂಡು ಬರುತ್ತಿರುವ ಪ್ರಧಾನಿ ಮೋದಿ ಅವರ ಆಸೆಯವನ್ನು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ನನಸು ಮಾಡುತ್ತಿವೆ.

ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳು ಭಾರತದಲ್ಲೇ ನವೀಕರಿಸಬಹುದಾದ ಇಂಧನ ಬೆಳವಣಿಗೆಯಲ್ಲಿ ಮುಂಚೂಣಿಯಲ್ಲಿದ್ದು, ಈ ಎರಡೂ ರಾಜ್ಯಗಳು ಹೊಸ ಸಾಮರ್ಥ್ಯದ ಮೂರನೇ ಒಂದು ಭಾಗದಷ್ಟು ಶುದ್ಧ ಇಂಧನ ಉತ್ಪಾದಿಸುತ್ತಿವೆ. ಕರ್ನಾಟಕವು ನವೀಕರಿಸಬಹುದಾದ ಇಂಧನ ಸಾಮರ್ಥ್ಯದಲ್ಲಿ ತಮಿಳುನಾಡು ಹಿಂದಿಕ್ಕಿ ಇದೇ ಮೊದಲ ಬಾರಿಗೆ ಪ್ರಥಮ ಸ್ಥಾನ ಪಡೆದಿದೆ.

ದೇಶದಲ್ಲಿ 2019ರ ಏಪ್ರಿಲ್ - ಅಕ್ಟೋಬರ್​ ಅವಧಿಯಲ್ಲಿ ನವೀಕರಿಸಬಹುದಾದ ವಲಯವು ಸುಮಾರು 84,490 ಮಿಲಿಯನ್ ಯುನಿಟ್ ಇಂಧನ ಉತ್ಪಾದನೆ ಆಗಿದೆ. ಇದು ಈ ಅವಧಿಯಲ್ಲಿ ದೇಶದಲ್ಲಿ ಉತ್ಪತ್ತಿಯಾಗುವ ಒಟ್ಟು ಶಕ್ತಿಯ ಶೇ10ರಷ್ಟಿದೆ. ಈ ವೇಳೆ, ತಮಿಳುನಾಡು 14,567 ಮಿಲಿಯನ್ ಯುನಿಟ್ ಉತ್ಪಾದಿಸಿದೆ. ಕರ್ನಾಟಕ ಸಹ 14,554 ಮಿಲಿಯನ್ ಯುನಿಟ್ ಉತ್ಪಾದಿಸಿದೆ. 10,392 ಮಿಲಿಯನ್ ಯುನಿಟ್ ಉತ್ಪಾದನೆಯೊಂದಿಗೆ ಗುಜರಾತ್ ಮೂರನೇ ಸ್ಥಾನ ಪಡೆದುಕೊಂಡಿದೆ. ಮಹಾರಾಷ್ಟ್ರ ಮತ್ತು ರಾಜಸ್ಥಾನ ಕ್ರಮವಾಗಿ 8,822 ಮತ್ತು 8,296 ಮಿಲಿಯನ್ ಯುನಿಟ್​ಗಳ ಮೂಲಕ 4 ಮತ್ತು 5ನೇ ಸ್ಥಾನ ಪಡೆದಿವೆ. ಈ ಅವಧಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಕರ್ನಾಟಕ ಅಕ್ಟೋಬರ್​ 31 ಅಂತ್ಯದ ವೇಳೆ ಮುಂಚೂಣಿಗೆ ಬಂದಿದೆ.

Wind Power
ಪವನ ವಿದ್ಯುತ್​

ಅಕ್ಟೋಬರ್ 31ರ ವೇಳೆಗೆ 14,335 ಮೆಗಾವ್ಯಾಟ್​​ ನವೀಕರಿಸಬಹುದಾದ ಇಂಧನ ಉತ್ಪಾದನೆಯ ಮೂಲಕ ಕರ್ನಾಟಕವು ಪ್ರಥಮ ಸ್ಥಾನದಲ್ಲಿದೆ. ಕಳೆದ 2-3 ವರ್ಷಗಳ ಹಿಂದೆ ಅಗ್ರ ಸ್ಥಾನದಲ್ಲಿ ಇದ್ದ ತಮಿಳುನಾಡು ಈ ಅವಧಿಯಲ್ಲಿ 13,457 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ.

ಸೌರ ವಿದ್ಯುತ್ ಕ್ಷೇತ್ರದಲ್ಲಿ ಕರ್ನಾಟಕ 6,497 ಮೆಗಾವ್ಯಾಟ್ ಸಾಮರ್ಥ್ಯದೊಂದಿಗೆ ಮುಂಚೂಣಿ ಸ್ಥಾನದಲ್ಲಿದ್ದರೆ, 9,232 ಮೆಗಾವ್ಯಾಟ್ ಪವನ​​ ವಿದ್ಯುತ್ ಉತ್ಪಾದನೆ ಮುಖೇನ ತಮಿಳುನಾಡು ತನ್ನ ಮೊದಲ ಸ್ಥಾನ ಉಳಿಸಿಕೊಂಡಿದೆ. 2018-19ರ ಅವಧಿಯಲ್ಲಿ ಭಾರತದ ಒಟ್ಟು ನವೀಕರಿಸಬಹುದಾದ ವಿದ್ಯುತ್ ಉತ್ಪಾದನೆಯು 126,759 ಮಿಲಿಯನ್ ಯುನಿಟ್‌ಗಳಾಗಿದ್ದು, 2017-18ರಲ್ಲಿ 101,839 ಯುನಿಟ್‌ಗಳಿಂದ ಗಮನಾರ್ಹವಾಗಿ ಏರಿಕೆಯಾಗಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.