ವಾಷಿಂಗ್ಟನ್: ಕೊರೊನಾ ವೈರಸ್ ಸೋಂಕು ಮತ್ತು ರಾಷ್ಟ್ರವ್ಯಾಪಿ ಲಾಕ್ಡೌನ್ ಬಳಿಕ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದ ಭಾರತವು ಗಮನಾರ್ಹ ಚೇತರಿಕೆ ಕಂಡಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.
ಆದರೆ ಭಾರತ, ಇನ್ನೂ ಬಿಕ್ಕಟ್ಟಿನಿಂದ ಸಂಪೂರ್ಣವಾಗಿ ಹೊರಬಂದಿಲ್ಲ. ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಮುಂಬರುವ ಹಣಕಾಸು ವರ್ಷದಲ್ಲಿ ಶೇ 7.5-12.5ರ ನಡುವೆ ಇರಲಿದೆ. ವರದಿಯ ಪ್ರಕಾರ, ವ್ಯಾಕ್ಸಿನೇಷನ್ ವೇಗ, ಜಾಗತಿಕ ಆರ್ಥಿಕತೆಯ ಚೇತರಿಕೆ ಮತ್ತು ಮತ್ತೊಮ್ಮೆ ಲಾಕ್ಡೌನ್ಗಳು ಭಾರತದ ಆರ್ಥಿಕತೆಯ ಹಾದಿಯನ್ನು ನಿರ್ಧರಿಸುತ್ತವೆ ಎಂದಿದೆ.
ವಿಶ್ವ ಬ್ಯಾಂಕಿನ ದಕ್ಷಿಣ ಏಷ್ಯಾ ವಿಭಾಗದ ಮುಖ್ಯ ಅರ್ಥಶಾಸ್ತ್ರಜ್ಞ ಹ್ಯಾನ್ಸ್ ಟಿಮ್ಮರ್ ಮಾತನಾಡಿ, ಕೊರೊನಾ ವೈರಸ್ ಪುನರುತ್ಥಾನ ಮತ್ತು ಎಲ್ಲರಿಗೂ ಲಸಿಕೆ ಹಾಕುವ ಅಗತ್ಯವು ಪ್ರಸ್ತುತ ಭಾರತ ಎದುರಿಸುತ್ತಿರುವ ದೊಡ್ಡ ಸವಾಲುಗಳಾಗಿವೆ ಎಂದು ಹೇಳಿದರು.
ಭಾರತೀಯ ಆರ್ಥಿಕತೆಯ ಒಟ್ಟಾರೆ ಚೇತರಿಕೆಯ ಹೊರತಾಗಿಯೂ ಕೆಲವು ಅಂಕಿಅಂಶಗಳಲ್ಲಿ ಇನ್ನೂ ಚಂಚಲತೆಯಿಂದ ಕೂಡಿವೆ. ಅವರು ಏಕೆ ಕಳಪೆಯಾಗಿ ಮಾಡುತ್ತಿದ್ದಾರೆ ಎಂಬುದಕ್ಕೆ ಬಹುಶಃ ದೇಶದ ತಲಾ ಆದಾಯ ಕುಸಿತ ಕಾರಣ ಇರಬಹುದು ಎಂದರು.
ಇದನ್ನೂ ಓದಿ: ಚೀನಾದ ಬೈಟ್ಡ್ಯಾನ್ಸ್ಗೆ ಮತ್ತೊಂದು ಆಘಾತ: ಕೋರ್ಟ್ ಕದ ತಟ್ಟಿದ ಕಂಪನಿ
ಆರ್ಥಿಕ ಪರಿಸ್ಥಿತಿಗಳು ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದಂತೆ, ಚಾಲ್ತಿ ಖಾತೆ ಕೊರತೆ ಸಾಮಾನ್ಯ ಸ್ಥಿತಿಗೆ ಬರುತ್ತದೆ ಎಂದು ವರದಿ ಮುನ್ಸೂಚನೆ ನೀಡುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಣದ ಲಭ್ಯತೆಯಂತಹ ವಿತ್ತೀಯ ನೀತಿಯಲ್ಲಿ ಸರಿಯಾದ ಬದಲಾವಣೆಗಳು ಹೂಡಿಕೆಗೆ ದಾರಿ ಮಾಡಿಕೊಡುತ್ತವೆ. 2021-22ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಹಣಕಾಸಿನ ಕೊರತೆಯು ಜಿಡಿಪಿಯ ಶೇ 10ರವರೆಗೆ ಇರುತ್ತದೆ ಎಂದು ಹೇಳಿದೆ.
ಆರ್ಥಿಕ ಬೆಳವಣಿಗೆ ಹೆಚ್ಚಾದಂತೆ ಉದ್ಯೋಗಾವಕಾಶಗಳು ಸುಧಾರಿಸುತ್ತವೆ. ಇದರಿಂದ ಆ ಬಡತನವೂ ತೋಲಗಿ ದೂರ ಸರಿಯುತ್ತದೆ ಎಂದರು.
ವರ್ಷದ ಹಿಂದೆ ಹೋಲಿಸಿದರೆ ಭಾರತ ಎಷ್ಟು ದೂರಕ್ಕೆ ಬಂದಿದೆ ಎಂಬುದು ಆಶ್ಚರ್ಯಕರವಾಗಿದೆ. ಒಂದು ವರ್ಷದ ಹಿಂದೆ ನೀವು ಯೋಚಿಸಿದರೆ, ಆರ್ಥಿಕ ಹಿಂಜರಿತ ಎಷ್ಟು ಆಳವಾಗಿತ್ತು ಎಂಬುದು ತಿಳಿಯುತ್ತದೆ. ಶೇ 30ರಿಂದ 40ರಷ್ಟು ಚಟುವಟಿಕೆಯಲ್ಲಿ ಮಹಾ ಕುಸಿತ, ಲಸಿಕೆಗಳ ಬಗ್ಗೆ ಅಸ್ಪಷ್ಟತೆ, ರೋಗದ ಬಗ್ಗೆ ದೊಡ್ಡ ಅನಿಶ್ಚಿತತೆ ಕಾಡುತ್ತಿತ್ತು. ಈಗ ಅವುಗಳಿಗೆ ಹೋಲಿಸಿದರೆ, ಭಾರತವು ಮತ್ತೆ ಪುಟಿಯುತ್ತಿದೆ. ಅನೇಕ ಚಟುವಟಿಕೆಗಳು ತೆರೆದುಕೊಂಡಿವೆ. ವ್ಯಾಕ್ಸಿನೇಷನ್ ಅಭಿಯಾನ ಪ್ರಾರಂಭವಾಗಿದೆ. ಜಾಗತಿಕ ವ್ಯಾಕ್ಸಿನೇಷನ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಹ್ಯಾನ್ಸ್ ಟಿಮ್ಮರ್ ಶ್ಲಾಘಿಸಿದ್ದಾರೆ.