ನವದೆಹಲಿ: ಮುಂದಿನ ಮೂರು ತಿಂಗಳಲ್ಲಿ (ಏಪ್ರಿಲ್-ಜೂನ್) ನೇಮಕಾತಿ ಚಟುವಟಕೆಗಳು ವ್ಯಾಪಕವಾಗಿ ನಡೆಯುವ ಸಾಧ್ಯತೆ ಇದೆ ಎಂದು ಮ್ಯಾನ್‌ಪವರ್ ಇಂಡಿಯಾ ಸಮೀಕ್ಷೆ ತಿಳಿಸಿದೆ.
ಸಾರ್ವಜನಿಕ ವಲಯದ ಆಡಳಿತ, ಶಿಕ್ಷಣ ಮತ್ತು ಸೇವಾ ಕ್ಷೇತ್ರಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸಿಗಲಿವೆ. ಜೂನ್ ತ್ರೈಮಾಸಿಕದಲ್ಲಿ ನಿವ್ವಳ ಉದ್ಯೋಗ ಸೃಷ್ಟಿ ಶೇ 9ರಷ್ಟಿದೆ ಎಂದು ನಿರೀಕ್ಷಿಸಲಾಗಿದೆ.
ಬಜೆಟ್ ಪ್ರಸ್ತಾಪಗಳು ಉದ್ಯೋಗ ಸೃಷ್ಟಿ ಒದಗಿಸುತ್ತವೆ. ಮೂಲಸೌಕರ್ಯ, ಆರೋಗ್ಯ ಮತ್ತು ಬಿಎಫ್‌ಎಸ್‌ಐ ಕ್ಷೇತ್ರಗಳಲ್ಲಿ ಪರಿಸ್ಥಿತಿ ಸ್ಪಷ್ಟವಾಗಿದೆ ಎಂದು ಮ್ಯಾನ್‌ಪವರ್ ಗ್ರೂಪ್ ಇಂಡಿಯಾ ಎಂಡಿ ಸಂದೀಪ್ ಗುಲೆತಿ ಹೇಳಿದ್ದಾರೆ.
ಇದನ್ನೂ ಓದಿ: ವಿಡಿಯೋ ಕಾಲಿಂಗ್ನ ಟಿಸಿಎಲ್ ಆಂಡ್ರಾಯ್ಡ್ ಟಿವಿ ಲಾಂಚ್; ರೇಟ್ ಎಷ್ಟು ಗೊತ್ತೇ?
ಸೆಪ್ಟೆಂಬರ್ ಮತ್ತು ಡಿಸೆಂಬರ್ ತ್ರೈಮಾಸಿಕಗಳಲ್ಲಿ ಉದ್ಯೋಗಕ್ಕಾಗಿ ಸರ್ಕಾರದ ಖರ್ಚಿನ ಪರಿಣಾಮ ಪ್ರತಿಫಲಿಸುವ ಸಾಧ್ಯತೆಯಿದೆ. ಸಗಟು ಮತ್ತು ಚಿಲ್ಲರೆ ವ್ಯಾಪಾರ ಕ್ಷೇತ್ರಗಳಲ್ಲಿ ನೇಮಕಾತಿ ಸೀಮಿತವಾಗುವ ಸಾಧ್ಯತೆ ಇದೆ ಎಂದು ಸಮೀಕ್ಷೆ ತಿಳಿಸಿದೆ.
ನೇಮಕಾತಿಯ ವಿಷಯದಲ್ಲಿ ಶೇ 27ರಷ್ಟು ಕಂಪನಿಗಳು 2021ರ ಜೂನ್ ವೇಳೆಗೆ ಕೋವಿಡ್ -19ರ ಪೂರ್ವ ಹಂತ ತಲುಪಬಹುದು ಎಂದಿದ್ದಾರೆ.