ನವದೆಹಲಿ: ಇಂಡಿಯಾ ರೇಟಿಂಗ್ಸ್ ಆ್ಯಂಡ್ ರಿಸರ್ಚ್ (ಇಂಡ್-ರಾ), ಭಾರತದ 2020ರ ಹಣಕಾಸು ವರ್ಷದ ಆರ್ಥಿಕ ಬೆಳವಣಿಗೆಯ ಮುನ್ಸೂಚನೆಯನ್ನು ಶೇ 1.9ಕ್ಕೆ ಇಳಿಸಿದೆ. ಕೋವಿಡ್ -19 ಮತ್ತು ಲಾಕ್ಡೌನ್ನಿಂದಾಗಿ ವೃದ್ಧಿಯ ನಿರೀಕ್ಷಣಾ ದರವನ್ನು ತಗ್ಗಿಸಲಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಇಂಡ್-ರಾ ಪ್ರಕಾರ, ಭಾರತೀಯ ಆರ್ಥಿಕತೆಯು 1991-92ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಶೇ 1.1ರಷ್ಟು ದಾಖಲಿಸಿತ್ತು. 2020ರ ಮಾರ್ಚ್ 30ರಂದು ದೇಶದ ಆರ್ಥಿಕ ಬೆಳವಣಿಗೆಯ ಅಂದಾಜು ಶೇ 3.6 ಇರಲಿದೆ ಎಂದಿತ್ತು. ಆದರೆ, ಸೋಮವಾರ ಪರಿಷ್ಕರಿಸಿದ ನೂತನ ವರದಿಯಲ್ಲಿ ಶೇ 1.9ರಷ್ಟು ಇರಲಿದೆ ಎಂದಿದೆ.
ಭಾಗಶಃ ಲಾಕ್‌ಡೌನ್ 2020ರ ಮೇ ಮಧ್ಯದವರೆಗೆ ಮುಂದುವರಿಯುತ್ತದೆ ಎಂಬ ಊಹೆಯ ಮೇಲೆ ಆರ್ಥಿಕ ಬೆಳವಣಿಗೆಯ ಅಂದಾಜನ್ನು ಆಧರಿಸಿ ಈ ರೇಟಿಂಗ್ ನೀಡಿದೆ.
ಇಂಡ್-ರಾ ಪ್ರಕಾರ, ಜಿಡಿಪಿ ಬೆಳವಣಿಗೆಯು 2019-20ರ ಹಣಕಾಸಿನ ನಾಲ್ಕನೇ ತ್ರೈಮಾಸಿಕಕ್ಕೆ ಪ್ರಸಕ್ತ 2020-21ರ ಹಣಕಾಸಿನ ಮೂರನೇ ತ್ರೈಮಾಸಿಕದಲ್ಲಿ (ಅಕ್ಟೋಬರ್-ಡಿಸೆಂಬರ್) ಮರಳಬಹುದು. ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ (ಜುಲೈ-ಸೆಪ್ಟೆಂಬರ್ ) ಮತ್ತು ಮೂರನೇ ತ್ರೈಮಾಸಿಕದಲ್ಲಿನ (ಅಕ್ಟೋಬರ್-ಡಿಸೆಂಬರ್) ಹಬ್ಬದ ಸೀಸನ್ ಬೇಡಿಕೆಯು ಬೆಳವಣಿಗೆ ವೇಗಕ್ಕೆ ಇಂಬು ನೀಡಬಹುದು ಎಂದು ವಿಶ್ಲೇಷಿಸಿದೆ.
1957-58ರಲ್ಲಿ (ಪಂಡಿತ್ ಜವಹರ್ಜಾಲ್ ನೆಹರೂ ಆಡಳಿತವಧಿ) ಭಾರತದ ಜಿಡಿಪಿ ಶೇ 0.4ರಷ್ಟು,1965-66ರಲ್ಲಿ ಅದು ಶೇ 2.6ರಷ್ಟು, 1966-67ರಲ್ಲಿ (ಇಂದಿರಾ ಗಾಂಧಿ) ಅದು ಋಣಾತ್ಮಕ ಶೇ 0.1ರಷ್ಟಿತ್ತು. 1972-73ರಲ್ಲಿ ಇದು ಋಣಾತ್ಮಕ ಶೇ 0.6ರಷ್ಟಿದ್ದರೇ 1979-80ರಲ್ಲಿ (ರಾಜೀವ್ ಗಾಂಧಿ- ಚರಣ್ ಸಿಂಗ್) ಇದು ಶೇ 5.2 ರಷ್ಟಿತ್ತು.