ETV Bharat / business

ರೈಲ್ವೆಯ 10,500 ಹುದ್ದೆಗಳಿಗೆ 82 ಲಕ್ಷ ಅರ್ಜಿ! ನಿರುದ್ಯೋಗ ಸಮಸ್ಯೆಗೆ ಕೈಗನ್ನಡಿ

ವಿವಿಧ ವೃಂದದ ವಿಭಾಗದಲ್ಲಿ ಮುಖ್ಯವಾಗಿ ಕಾನ್​ಸ್ಟೆಬಲ್​ ವಿಭಾಗದಲ್ಲಿ ಮಾತ್ರ ಶೇ 50ರಷ್ಟು ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿರಿಸಲಾಗಿತ್ತು. ಒಟ್ಟು 10,537 ಜವಾನ ಹುದ್ದೆಗಳಲ್ಲಿ 1,120 ಸಬ್​ ಇನ್​ಸ್ಪೆಕ್ಟರ್​, 8,619 ಕಾನ್​ಸ್ಟೆಬಲ್​ ಮತ್ತು 798 ಸ್ಟಾಫ್‌​ ನೌಕರರನ್ನು ನೇಮಿಸಿಕೊಳ್ಳಲಾಗಿದೆ ಎಂದು ಭಾರತೀಯ ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Sep 22, 2019, 5:57 PM IST

ನವದೆಹಲಿ: ಭಾರತೀಯ ರೈಲ್ವೆಯ ರೈಲ್ವೆಯ ರಕ್ಷಣಾ ಪಡೆಯಲ್ಲಿ (ಆರ್​ಪಿಎಫ್​) ಖಾಲಿಯಿದ್ದ 10,537 ಹುದ್ದೆಗಳಿಗೆ ದಾಖಲೆಯ 82 ಲಕ್ಷ ಅರ್ಜಿಗಳು ಬಂದಿದ್ದವು. ಇದು ದೇಶದಲ್ಲಿ ನಿರುದ್ಯೋಗ ಸಮಸ್ಯೆಗೆ ಹಿಡಿದ ಕೈಗನ್ನಡಿಯಂತಿದೆ.

ಕಳೆದ ಮೇ ತಿಂಗಳಲ್ಲಿ ಆರಂಭಗೊಂಡಿದ್ದ ಆರ್​ಪಿಎಫ್ ವೃಂದದ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ. ಕಾನ್​​ಸ್ಟೆಬಲ್ ವೃಂದದ ವಿಭಾಗದಲ್ಲಿ ಶೇ 50ರಷ್ಟು ಮಹಿಳೆಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಒಟ್ಟು 10,537 ಜವಾನ್‌ ಹುದ್ದೆಗಳಲ್ಲಿ 1,120 ಸಬ್​ ಇನ್​ಸ್ಪೆಕ್ಟರ್​, 8,619 ಕಾನ್​ಸ್ಟೆಬಲ್​ ಮತ್ತು 798 ಸ್ಟಾಪ್​ ನೌಕರರನ್ನು ನೇಮಿಸಿಕೊಳ್ಳಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಆರ್​ಪಿಎಫ್​ನ ವೃಂದದಲ್ಲಿ ಶೇ 2.25ರಷ್ಟು ಮಾತ್ರವೇ ಮಹಿಳಾ ಕಾನ್​ಸ್ಟೆಬಲ್​ ಇದ್ದರು. ಮಹಿಳೆಯರ ಸಂಖ್ಯೆಯನ್ನು ಹಂತ- ಹಂತವಾಗಿ ಹೆಚ್ಚಿಸಿ ಸ್ತ್ರೀಯರಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಅಧಿಕಾರಿಗಳು ಈ ಹಿಂದೆ ತಿಳಿಸಿದ್ದರು. ಅದರಂತೆಯೇ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಿಕೊಳ್ಳಲಾಗಿದೆ ಎಂದರು.

ಅತಿದೊಡ್ಡ ಆರ್​ಪಿಎಫ್​ ನೇಮಕಾತಿಯ ರ್ಯಾಲಿಯ 10,537 ಹುದ್ದೆಗಳಿಗೆ ಆಕಾಂಕ್ಷಿಗಳಿಂದ 82 ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. 1,120 ಸಬ್​ ಇನ್​ಸ್ಪೆಕ್ಟರ್​ ಪೋಸ್ಟ್​ಗೆ 14.25 ಲಕ್ಷ, ಕಾನ್​ಸ್ಟೆಬಲ್​ ಹುದ್ದೆಗೆ 59 ಲಕ್ಷ ಅರ್ಜಿ ಬಂದಿದ್ದವು. 8,619 ಕಾನ್​ಸ್ಟೆಬಲ್ ಹುದ್ದೆಗಳಲ್ಲಿ 4,216 ಮಹಿಳೆಯರು ಹಾಗೂ 4,403 ಪುರುಷರು ನೇಮಕವಾಗಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.