ETV Bharat / business

ಆರ್ಥಿಕತೆ ಪುನಶ್ಚೇತನಕ್ಕಾಗಿ ಬಂಡವಾಳ ಹೂಡಿಕೆಗೆ ಪ್ರಚೋದನೆ ನೀಡಿ: ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್​ - ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ

ಕೊರೊನಾ ತಂದೊಡ್ಡಿದ ಸಂಕಷ್ಟದಿಂದಾಗಿ ವಿವಿಧ ದೇಶಗಳ ಆರ್ಥಿಕತೆ ಪಾತಾಳ ಸೇರಿದೆ. ಆರ್ಥಿಕತೆ ಪುನಶ್ಚೇತನಗೊಳಿಸುವುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಇಂತಹ ಸಮಯದಲ್ಲಿ ಆರ್ಥಿಕತೆ ಅಭಿವೃದ್ಧಿಪಡಿಸಲು ಬಂಡವಾಳ ಹೂಡಿಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದು ಅವಶ್ಯ ಹಾಗೂ ಅನಿವಾರ್ಯವಾಗಿದೆ ಎಂದು ಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ತಿಳಿಸಿದ್ದಾರೆ.

IMF chief economist
ಗೀತಾ ಗೋಪಿನಾಥ್​
author img

By

Published : Nov 3, 2020, 1:58 PM IST

ವಾಷಿಂಗ್ಟನ್: ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಜಾಗತಿಕ ಆರ್ಥಿಕ ಮಟ್ಟ ದಿವಾಳಿಯತ್ತ ಸಾಗುತ್ತಿದ್ದು, ಆರ್ಥಿಕ ಚಟುವಟಿಕೆಗಳ ಪುನಶ್ಚೇತನಕ್ಕಾಗಿ ಹಣಕಾಸಿನ ವ್ಯವಹಾರ ಹಾಗೂ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡುವುದು ಅತ್ಯಂತ ಅವಶ್ಯವಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಹೇಳಿದ್ದಾರೆ.

ಜಾಗತಿಕ ಆರ್ಥಿಕತೆಯ ಶೇ.60 ರಲ್ಲಿ, 97 ಪ್ರತಿಶತದಷ್ಟು ಮುಂದುವರಿದ ಆರ್ಥಿಕತೆಗಳನ್ನು ಒಳಗೊಂಡಂತೆ ಕೇಂದ್ರ ಬ್ಯಾಂಕುಗಳು ನೀತಿ ಬಡ್ಡಿದರಗಳನ್ನು ಅಥವಾ ಸಾಲ ನೀಡಿರುವ ಬಡ್ಡಿದರಗಳನ್ನು ಪ್ರತಿಶತ 1ಕ್ಕಿಂತ ಕಡಿಮೆಗೊಳಿಸಿವೆ. ವಿಶ್ವದ ಐದನೇ ಒಂದು ಭಾಗದಲ್ಲಿ ಅವು ನಕಾರಾತ್ಮಕವಾಗಿವೆ ಎಂದು ಗೋಪಿನಾಥ್ ಫೈನಾನ್ಷಿಯಲ್ ಟೈಮ್ಸ್​​ ಆಪ್-ಎಡ್ ಎಂಬ ಲೇಖನದಲ್ಲಿ ಉಲ್ಲೇಖಿಸಿದ್ದಾರೆ. ಅದಲ್ಲದೇ, ಕೊರೊನಾ ಕಾರಣದಿಂದಾಗಿ ಬಡ್ಡಿದರಗಳನ್ನು ಮತ್ತಷ್ಟು ಕಡಿತಗೊಳಿಸಲು ಕೇಂದ್ರ ಬ್ಯಾಂಕುಗಳಿಗೆ ಹೆಚ್ಚಿನ ಅವಕಾಶ ದೊರೆಯಲು ಸಾಧ್ಯವಿಲ್ಲ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕೊರೊನಾ ತಂದೊಡ್ಡಿದ ಸಂಕಷ್ಟದಿಂದಾಗಿ ವ್ಯಾಪಾರ - ವ್ಯವಹಾರಗಳೆಲ್ಲವೂ ಸ್ಥಗಿತಗೊಂಡಿತ್ತು, ಅದಲ್ಲದೇ ಬಡ್ಡಿ ದರಗಳನ್ನು ಕಡಿತಗೊಳಿಸಿರುವುದು ಸೇರಿದಂತೆ ಇನ್ನಿತರ ಕಾರಣಗಳು ಆರ್ಥಿಕ ದಿವಾಳಿತನಕ್ಕೆ ಮುಖ್ಯ ಕಾರಣವಾಗಿದೆ. ಇದು ಹಣಕಾಸು ವ್ಯವಹಾರದ ಮೇಲೆ ಮಾತ್ರವಲ್ಲದೇ, ವಿತ್ತೀಯ ನೀತಿಯ ಮೇಲೆಯೂ ಸಹ ಪರಿಣಾಮ ಬೀರುತ್ತದೆ. ಆರ್ಥಿಕ ದಿವಾಳಿತನದಿಂದ ಹೊರಬರಲು ಸೂಕ್ತವಾದ ನೀತಿಗಳನ್ನು ನಾವು ಒಪ್ಪಿಕೊಳ್ಳುವುದು ಅತ್ಯವಶ್ಯವಾಗಿದೆ ಆದ್ದರಿಂದ ಹಣಕಾಸಿನ ವ್ಯವಹಾರಕ್ಕೆ ಹಾಗೂ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡುವುದು ಆರ್ಥಿಕತೆ ಪುನಶ್ಚೇತನಕ್ಕೆ ಸಹಾಯ ಮಾಡಿದಂತಾಗುತ್ತದೆ ಎಂದು ಗೀತಾ ಗೋಪಿನಾಥ್ ಹೇಳಿದ್ದಾರೆ.

ಆರ್ಥಿಕತೆಯ ಅಭಿವೃದ್ಧಿಗಾಗಿ ವೈದ್ಯಕೀಯ ಸೌಲಭ್ಯಗಳು, ಡಿಜಿಟಲ್ ಮೂಲಸೌಕರ್ಯ ಮತ್ತು ಪರಿಸರ ಸಂರಕ್ಷಣೆಯ ಬಳಕೆ ಮತ್ತು ದೊಡ್ಡ ಪ್ರಮಾಣದ ಹೂಡಿಕೆ ಬೆಂಬಲಿಸಬೇಕಿದೆ. ಹಣಕಾಸಿನ ಸಂಸ್ಥೆಗಳು ಅಥವಾ ಅಧಿಕಾರಿಗಳು ನಗದು ವರ್ಗಾವಣೆಯ ಮೂಲಕ ಬೇಡಿಕೆಯನ್ನು ಸಕ್ರಿಯವಾಗಿ ಬೆಂಬಲಿಸಬಹುದಾಗಿದೆ, ಇದರಿಂದಾಗಿ ಆರ್ಥಿಕತೆಗೆ ಉತ್ತೇಜನ ನೀಡುವಲ್ಲಿ ಸಫಲರಾದಂತಾಗುತ್ತದೆ. ಈ ವೆಚ್ಚಗಳಿಂದಾಗಿ ಉದ್ಯೋಗಗಳನ್ನು ಸೃಷ್ಟಿ ಮಾಡಲು ಹೆಚ್ಚಿನ ಅವಕಾಶ ಹಾಗೂ ಖಾಸಗಿ ಕ್ಷೇತ್ರದ ಹೂಡಿಕೆಯಲ್ಲಿಯೂ ಸಹ ಉತ್ತೇಜನ ದೊರೆತಂತಾಗುತ್ತೆ ಎಂದು ಗೀತಾ ಸಲಹೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.