ETV Bharat / business

ಏಪ್ರಿಲ್​ನಲ್ಲಿ ನಿರುದ್ಯೋಗದ ಭೀಭತ್ಸ: ನೇಮಕಾತಿ ಶೇ 62ರಷ್ಟು ಕಡಿಮೆ - ನೌಕರಿ.ಕಾಮ್

ಹೋಟೆಲ್ / ರೆಸ್ಟೋರೆಂಟ್ / ಟ್ರಾವೆಲ್ / ಏರ್‌ಲೈನ್ಸ್ ಉದ್ಯಮಗಳಲ್ಲಿ ಶೇ -90ಕ್ಕೂ ಕಡಿಮೆ ನೇಮಕಾತಿ ಚಟುವಟಿಕೆಗಳು ಕಂಡುಬಂದಿದೆ. ವಾಯುಯಾನ ಮತ್ತು ಆತಿಥ್ಯ ಉದ್ಯಮಗಳ ನಂತರ ಆಟೋ / ಪೂರಕ (ಶೇ -82ರಷ್ಟು), ಚಿಲ್ಲರೆ ವ್ಯಾಪಾರ (ಶೇ -77ರಷ್ಟು) ಮತ್ತು ಲೆಕ್ಕಪತ್ರ / ಹಣಕಾಸು (ಶೇ -70ರಷ್ಟು) ಕಡಿಮೆ ಆಗಿದೆ ಎಂದು ನೌಕ್ರಿ ಜಾಬ್‌ಸ್ಪೀಕ್ ಸೂಚ್ಯಂಕ ಹೇಳಿದೆ.

Hiring activity
ನೇಮಕಾತಿ
author img

By

Published : May 6, 2020, 4:28 PM IST

ನವದೆಹಲಿ: ಕೋವಿಡ್​ ಲಾಕ್‌ಡೌನ್‌ನ ಹೊಡೆತದಿಂದ ಭಾರತದಲ್ಲಿ ಏಪ್ರಿಲ್ ವೇಳೆ ಉದ್ಯೋಗ ನೇಮಕಾತಿಯಲ್ಲಿ ಶೇ 62ರಷ್ಟು ಕುಸಿತ ಕಂಡಿದೆ ಎಂದು ನೌಕರಿ ಡಾಟ್​ ಕಾಮ್​ ವರದಿ ತಿಳಿಸಿದೆ.

ನಗರಗಳಲ್ಲಿನ ಉದ್ಯೋಗ ಮಾರುಕಟ್ಟೆ ನೇಮಕಾತಿಯಲ್ಲಿ ಎರಡು ಅಂಕಿಯ ಕುಸಿತ ದಾಖಲಿಸಿದೆ. ದೆಹಲಿಯಲ್ಲಿ ಶೇ 70ರಷ್ಟು ಕುಸಿದಿದೆ. ಈ ಬಳಿಕ ಚೆನ್ನೈ ಶೇ -62ರಷ್ಟು, ಕೋಲ್ಕತಾ ಶೇ -60ರಷ್ಟು ಮತ್ತು ಮುಂಬೈ ಶೇ -60ರಷ್ಟು ಕುಸಿದಿದೆ.

ಪ್ರವೇಶಾತಿ ಹಂತದ ಎಕ್ಸ್‌ಪೀರಿಯೆನ್ಸ್ ಬ್ಯಾಂಡ್‌ಗಳ ಜತೆ (0 ರಿಂದ 3 ವರ್ಷ) ಅನುಭವಿಗಳ ನೇಮಕದಲ್ಲಿ ಅಡ್ಡಾದಿಡ್ಡಿ ಕುಸಿತ ಕಂಡುಬಂದಿದ್ದು, ಶೇ 67ರಷ್ಟು ತೀವ್ರ ಇಳಿಕೆ ದಾಖಲಾಗಿದೆ.

ಏಪ್ರಿಲ್‌ನಲ್ಲಿ ಇತರ ಕೈಗಾರಿಕೆಗಳಿಗೆ ಹೋಲಿಸಿದರೆ ಫಾರ್ಮಾ / ಬಯೋಟೆಕ್ / ಕ್ಲಿನಿಕಲ್ ರಿಸರ್ಚ್ ಶೇ -54ರಷ್ಟು, ಐಟಿ-ಸಾಫ್ಟ್‌ವೇರ್/ಸಾಫ್ಟ್‌ವೇರ್ ಸೇವೆಗಳು ಶೇ -49ರಷ್ಟು ಮತ್ತು ವಿಮೆ ಶೇ -42 ರಷ್ಟಿದ್ದು, ನೇಮಕಾತಿಯಲ್ಲಿ ಕಡಿಮೆ ಪರಿಣಾಮ ಬೀರಿದೆ.

ಟಿಕೆಟಿಂಗ್ / ಟ್ರಾವೆಲ್ / ಏರ್​ಲೈನ್ಸ್​, ಹೋಟೆಲ್ / ರೆಸ್ಟೋರೆಂಟ್ ಮತ್ತು ಮಾನವ ಸಂಪನ್ಮೂಲ / ಆಡಳಿತ ಕ್ಷೇತ್ರಗಳಲ್ಲಿನ ವೃತ್ತಿಪರರಿಗೆ ಹೊಸ ಉದ್ಯೋಗಗಳು ಕ್ರಮವಾಗಿ ಶೇಕಡಾ 95, 89 ಮತ್ತು 78ರಷ್ಟು ಕುಸಿದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.