ನವದೆಹಲಿ: ರಾಜ್ಯಗಳ ಜಿಎಸ್‌ಟಿ ಆದಾಯದ ಕೊರತೆ ಎದುರಿಸಲು ಸಾಲ ಪಡೆಯುವ ಪ್ರಮಾಣವು ಅವುಗಳ ಆರ್ಥಿಕ ಪರಿಣಾಮ ಪರಿಗಣಿಸಿ ಸಮಂಜಸವಾಗಿರಬೇಕು. ಕೇಂದ್ರವು ವಿರೋಧ ಪಕ್ಷಗಳ ಆಡಳಿತದ ರಾಜ್ಯಗಳಿಗೆ ಪ್ರಸ್ತಾವಿತ ಸಾಲ ಯೋಜನೆ ಆರಿಸಿಕೊಳ್ಳುವಂತೆ ವಿನಂತಿಸುತ್ತಿದೆ ಎಂದು ಹಣಕಾಸು ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಹೇಳಿದರು.
ಸಾಲ ವಿಸ್ತರಿಸುವಾಗ ಸಂಗ್ರಹಿಸಲಾಗುತ್ತಿರುವ ಜಿಎಸ್‌ಟಿ ಪರಿಹಾರದ ಸೆಸ್‌ನಿಂದ ಮಾತ್ರ ಮರುಪಾವತಿ ಮಾಡಲಾಗುವುದು. ಮರುಪಾವತಿ ವೇಳಾಪಟ್ಟಿಯನ್ನು 2022ರ ಜೂನ್ ಸೆಸ್ನಲ್ಲಿ ಸಂಗ್ರಹಿಸುವ ಮಾದರಿಯಲ್ಲಿ ಮರುಪಾವತಿ ಮಾಡಲಾಗುವುದು. ರಾಜ್ಯಗಳಿಂದ ಕೇಂದ್ರವು ಅನುಮತಿ ಪಡೆಯುತ್ತದೆ. ಸಾಲದಿಂದ ಉಂಟಾಗುವ ಬಡ್ಡಿ ಮರುಪಾವತಿಸಿದರೆ ಸಾಕು ಎಂದರು.
ರಾಜ್ಯಗಳ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹದಲ್ಲಿ 1.83 ಲಕ್ಷ ಕೋಟಿ ರೂ. ಕೊರತೆ ಪೂರೈಸಲು ಕೇಂದ್ರವು ಪ್ರಸ್ತಾಪಿಸಿರುವ ಸಾಲ ಯೋಜನೆಯನ್ನು ಈವರೆಗೆ 21 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳು ಆರಿಸಿಕೊಂಡಿವೆ.
ಸಾಲ ಪಡೆಯುವ ಯೋಜನೆಯಡಿ ಕೇಂದ್ರವು ಮಾರುಕಟ್ಟೆಯಿಂದ 1.10 ಲಕ್ಷ ಕೋಟಿ ರೂ. ಸಾಲ ಪಡೆಯುತ್ತದೆ. ಇದು ಜಿಎಸ್‌ಟಿ ಅನುಷ್ಠಾನದ ಆದಾಯದ ಕೊರತೆಯ ನಷ್ಟ ಭರ್ತಿಯನ್ನು ನೀಡಬೇಕಿದೆ.
ಆದರೆ ಕೇರಳ, ಪಂಜಾಬ್, ಪಶ್ಚಿಮ ಬಂಗಾಳ, ರಾಜಸ್ಥಾನ, ಛತ್ತೀಸ್‌ಗಢ, ಜಾರ್ಖಂಡ್‌ನಂತಹ ರಾಜ್ಯಗಳು ಪ್ರಸ್ತಾವಿತ ಸಾಲ ಯೋಜನೆಯನ್ನು ಆರಿಸಿಕೊಂಡಿಲ್ಲ. ಕೇಂದ್ರವು ಒಟ್ಟು 1.83 ಲಕ್ಷ ಕೋಟಿ ರೂ. ಕೊರತೆಯನ್ನು ಮತ್ತು ಜಿಎಸ್‌ಟಿ ಅನುಷ್ಠಾನ ಹಾಗೂ ಕೋವಿಡ್-19 ಪ್ರಭಾವದಿಂದಾದ ಉಂಟಾದ ನಷ್ಟಕ್ಕೆ ಸಾಲ ಪಡೆಯಬೇಕು ಎಂಬುದು ಅಸಾಂವಿಧಾನಿಕ ಮತ್ತು ಕಾನೂನು ಬಾಹಿರ ಎಂದು ಹೇಳಿದವು.
ಪರಿಹಾರ ಸೆಸ್ ಅನ್ನು ಜೂನ್ 2022ರ ಆಚೆಗೆ ವಿಸ್ತರಿಸಲಾಗಿದೆ. ಎಷ್ಟು ಸಾಲ ಮಾಡಬೇಕು ಮತ್ತು ಸಾಲ ಪಡೆಯುವ ಅತ್ಯುತ್ತಮ ಮಟ್ಟ ಯಾವುದು ಎಂಬುದರ ಬಗ್ಗೆ ಆರ್ಟಿಕಲ್ 292 ಮತ್ತು 293ರ ನಿಯತಾಂಕಗಳಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಿದರು.
ಸಾಲ ಪಡೆಯಲು ಸಮಂಜಸವಾದ ಮಟ್ಟ ಇರಬೇಕು. ಏಕೆಂದರೆ ಸಮತೋಲಿತ ವಿಧಾನ ತೆಗೆದುಕೊಳ್ಳದಿದ್ದರೆ ಬಡ್ಡಿ ಹೊರೆ ಹೆಚ್ಚಾಗುತ್ತದೆ. ಅದು ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಸಾಲ ಪಡೆಯುವ ವ್ಯವಸ್ಥೆ ಸರಳೀಕರಿಸಲಾಗಿದ್ದು, ಸಾಲವನ್ನು ಮರುಪಾವತಿ ಮಾಡಲಾಗುವುದು ಎಂದು ಪಾಂಡೆ ಹೇಳಿದರು.
2022ರ ಜೂನ್ ಆಚೆಗೆ ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ. ಮರುಪಾವತಿಯ ಕಂತುಗಳನ್ನು ನಿಗದಿಪಡಿಸುವ ರೀತಿಯಲ್ಲಿ ಸಂಗ್ರಹಿಸಲಾಗುವುದು. ಸಂಗ್ರಹಿಸಿದ ಹಣವು ಕಂತು ಮತ್ತು ಬಡ್ಡಿಯನ್ನು ಮರುಪಾವತಿಸಿದರೆ ಸಾಕು ಎಂದು ತಿಳಿಸಿದರು.