ನವದೆಹಲಿ: ಎಂಎಸ್‌ಎಂಇಗಳಿಗೆ ಮಾತ್ರವಲ್ಲದೆ ಆರ್ಥಿಕತೆಯ ಎಲ್ಲಾ ಕ್ಷೇತ್ರಗಳಿಗೂ ಸಮಗ್ರ ಹಣಕಾಸು ಪ್ಯಾಕೇಜ್ ಒದಗಿಸಲು ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಧಾನಮಂತ್ರಿಗಳ ಕಚೇರಿ ಮತ್ತು ಆರ್ಥಿಕ ವ್ಯವಹಾರಗಳ ಇಲಾಖೆ ಈಗಾಗಲೇ ಒಂದು ಪ್ಯಾಕೇಜ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಎಂಎಸ್‌ಎಂಇ ಮಾತ್ರವಲ್ಲದೆ ಇಡೀ ಉದ್ಯಮವೂ ಸೇರಿದೆ. ಆರ್ಥಿಕತೆಯ ಎಲ್ಲಾ ಕ್ಷೇತ್ರಗಳನ್ನು ಸಮಗ್ರ ಪ್ಯಾಕೇಜ್ ದೃಷ್ಟಿಯಿಂದ ನೋಡಿಕೊಳ್ಳಲಾಗುತ್ತಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಗಿರಿಧರ್ ಅರಮನೆ ಹೇಳಿದರು.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಿಯಾಮ್ (ಭಾರತೀಯ ವಾಹನ ತಯಾರಕ ಒಕ್ಕೂಟ) ಸದಸ್ಯರೊಂದಿಗೆ ಸಂವಾದದಲ್ಲಿ ಮಾತನಾಡಿದರು. ಇದೇ ಸಭೆಯಲ್ಲಿ ಭಾಗವಹಿಸಿದ್ದ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, 'ಶೀಘ್ರವೇ ಪ್ಯಾಕೇಜ್ ಘೋಷಿಸಲಾಗುವುದು' ಎಂದು ಭರವಸೆ ನೀಡಿದರು.
ಆರ್ಥಿಕತೆ ಉತ್ತೇಜಿಸಲು ಪ್ಯಾಕೇಜ್‌ನ ಬೇಡಿಕೆ ಉದ್ಯಮ ಸಂಸ್ಥೆಗಳಿಂದ ಹಿಡಿದು ವಿವಿಧ ಭಾಗಗಳ ತಜ್ಞರು ಬೇಡಿಕೆ ಇಟ್ಟಿದ್ದಾರೆ. ದೇಶದ ಬೆಳವಣಿಗೆಗೆ ಶೇ. 29ರಷ್ಟು ಮತ್ತು ರಫ್ತಿಗೆ ಶೇ. 48ರಷ್ಟು ಕೊಡುಗೆ ನೀಡುವ ಭಾರತದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇ) ಪ್ರಮುಖ ಉದ್ಯೋಗ ಉತ್ಪಾದಕವಾಗಿವೆ.
ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಈ ವಲಯವು ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ. ಲಕ್ಷಾಂತರ ಘಟಕಗಳು ನಷ್ಟ ಅನುಭವಿಸುತ್ತಿವೆ. ಬದುಕುಳಿಯಲು ಹೆಣಗಾಡುತ್ತಿರುವಾಗ ಉದ್ಯೋಗ ಕಡಿತಕ್ಕೆ ಮುಂದಾಗಿವೆ.