ನವದೆಹಲಿ: 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಫೆಬ್ರವರಿ 1ರಂದು ಮಂಡಿಸಲಿರುವ 2021-22ರ ಬಜೆಟ್‌ನಲ್ಲಿ ಸರ್ಕಾರವು ಕೃಷಿ ಸಾಲ ಗುರಿಯನ್ನು ಸುಮಾರು 19 ಲಕ್ಷ ಕೋಟಿ ರೂ.ಗೆ ಏರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಸರ್ಕಾರವು 15 ಲಕ್ಷ ಕೋಟಿ ರೂ. ಕೃಷಿ ಸಾಲ ಗುರಿ ನಿಗದಿಪಡಿಸಿದೆ. ಸರ್ಕಾರವು ಪ್ರತಿವರ್ಷ ಕೃಷಿ ಕ್ಷೇತ್ರದ ಸಾಲ ಗುರಿಯನ್ನು ಹೆಚ್ಚಿಸುತ್ತಿದೆ. ಈ ಬಾರಿಯೂ 2021-22ರ ಅವಧಿಯಲ್ಲಿ ಈ ಗುರಿಯನ್ನು ಸುಮಾರು 19 ಲಕ್ಷ ಕೋಟಿ ರೂ.ಗೆ ಹೆಚ್ಚಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.
ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ) ಮತ್ತು ಸಹಕಾರ ಸಂಸ್ಥೆಗಳು ಕೃಷಿ ಸಾಲ ಜಾಗದಲ್ಲಿ ಸಕ್ರಿಯವಾಗಿವೆ. ನಬಾರ್ಡ್ ಮರು ಹಣಕಾಸು ಯೋಜನೆಯನ್ನು ಮತ್ತಷ್ಟು ವಿಸ್ತರಿಸಲಾಗುವುದು. 2020-21ನೇ ಸಾಲಿನ ಕೃಷಿ ಸಾಲ ಗುರಿಯನ್ನು 15 ಲಕ್ಷ ಕೋಟಿ ರೂ.ಗೆ ನಿಗದಿಪಡಿಸಲಾಗಿದೆ ಎಂದು 2020-21ರ ಬಜೆಟ್ ಪ್ರಕಟಿಸುವಾಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.
ಕೃಷಿ ಸಾಲದ ಹರಿವು ವರ್ಷಗಳಲ್ಲಿ ಸ್ಥಿರವಾಗಿ ಹೆಚ್ಚಾಗಿದ್ದು, ಇದು ಪ್ರತಿ ಹಣಕಾಸಿನ ನಿಗದಿತ ಗುರಿ ಮೀರಿದೆ. ಉದಾಹರಣೆಗೆ, 2017-18ರಲ್ಲಿ 11.68 ಲಕ್ಷ ಕೋಟಿ ರೂ. ಸಾಲವನ್ನು ರೈತರಿಗೆ ನೀಡಲಾಗಿದ್ದು, ಆ ವರ್ಷ ನಿಗದಿಪಡಿಸಿದ 10 ಲಕ್ಷ ಕೋಟಿ ರೂ. ಗುರಿಗಿಂತ ಹೆಚ್ಚಿನದಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಭಾರತದ ಆರ್ಥಿಕತೆ ವೇಗವಾಗಿ ಚೇತರಿಸಿಕೊಳ್ಳುತ್ತಿದೆ: ರಾಷ್ಟ್ರಪತಿ ರಾಮನಾಥ್ ಕೋವಿಂದ್
2016-17ರ ಹಣಕಾಸು ವರ್ಷದಲ್ಲಿ 10.66 ಲಕ್ಷ ಕೋಟಿ ರೂ. ಬೆಳೆ ಸಾಲ ವಿತರಿಸಲಾಗಿದ್ದು, ಇದು 9 ಲಕ್ಷ ಕೋಟಿ ರೂ. ಸಾಲ ಗುರಿಗಿಂತ ಹೆಚ್ಚಾಗಿದೆ. ಹೆಚ್ಚಿನ ಕೃಷಿ ಉತ್ಪಾದನೆಯನ್ನು ಸಾಧಿಸುವಲ್ಲಿ ಸಾಲ ಒಂದು ನಿರ್ಣಾಯಕ ಹಂಚಿಕೆಯಾಗಿದೆ. ಸಾಂಸ್ಥಿಕವಲ್ಲದ ಮೂಲಗಳಿಂದ ವಂಚನೆಗೆ ಒಳಗಾಗು ರೈತರನ್ನು ತಪ್ಪಿಸಲು ಸಾಂಸ್ಥಿಕ ಸಾಲವು ಸಹಾಯ ಮಾಡುತ್ತದೆ. ಅಲ್ಲಿ ಅವರು ಹೆಚ್ಚು ಬಡ್ಡಿ ದರದಲ್ಲಿ ಸಾಲ ಪಡೆಯಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸಾಮಾನ್ಯವಾಗಿ ಕೃಷಿ ಸಾಲಗಳು ಶೇ 9ರಷ್ಟು ಬಡ್ಡಿದರ ಆಕರ್ಷಿಸುತ್ತವೆ. ಅಲ್ಪಾವಧಿಯ ಕೃಷಿ ಸಾಲ ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಮಾಡಲು ಮತ್ತು ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರವು ಬಡ್ಡಿ ಸಬ್‌ವೆನ್ಷನ್ ನೀಡುತ್ತಿದೆ. ರೈತರು ವಾರ್ಷಿಕ ಶೇ 7ರಷ್ಟು ಪರಿಣಾಮಕಾರಿ ದರದಲ್ಲಿ 3 ಲಕ್ಷ ರೂ. ಅಲ್ಪಾವಧಿಯ ಕೃಷಿ ಸಾಲ ಪಡೆಯುವುದನ್ನು ಭರವಸೆ ನೀಡಲು ಸರ್ಕಾರವು ಶೇ 2ರಷ್ಟು ಬಡ್ಡಿಯ ಸಹಾಯಧನ ನೀಡುತ್ತಿದೆ. ನಿಗದಿತ ದಿನಾಂಕದೊಳಗೆ ಸಾಲವನ್ನು ತ್ವರಿತವಾಗಿ ಮರುಪಾವತಿಸಲು ರೈತರಿಗೆ ಶೇ 3ರಷ್ಟು ಹೆಚ್ಚುವರಿ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು. ಪರಿಣಾಮಕಾರಿ ಬಡ್ಡಿದರ ಶೇ 4ರಷ್ಟಿದೆ.
ಸಾರ್ವಜನಿಕ ವಲಯದ ಬ್ಯಾಂಕ್ಗಳು (ಪಿಎಸ್‌ಬಿ), ಖಾಸಗಿ ಸಾಲದಾತರು, ಸಹಕಾರಿ ಬ್ಯಾಂಕ್ಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳಿಗೆ (ಆರ್‌ಆರ್‌ಬಿ) ಸ್ವಂತ ನಿಧಿಯ ಬಳಕೆಯ ಮೇಲೆ ಮತ್ತು ಆರ್‌ಆರ್‌ಬಿ ಹಾಗೂ ಸಹಕಾರಿ ಬ್ಯಾಂಕ್ಗಳಿಗೆ ಮರುಹಣಕಾಸು ನೀಡಲು ನಬಾರ್ಡ್‌ಗೆ ಬಡ್ಡಿ ಸಬ್‌ವೆನ್ಷನ್ ನೀಡಲಾಗುತ್ತದೆ.