ETV Bharat / business

ಪ್ರಯಾಣಿಕರಿಗೆ ಬೆಲೆ ಏರಿಕೆ ಶಾಕ್.. ನ.24ರ ಬಳಿಕ ವಿಮಾನ ದರ ಮಿತಿ ಹೆಚ್ಚಳ ಸಾಧ್ಯತೆ!

ಸರ್ಕಾರವು ವಿಮಾನಯಾನ ದರ ವಿಸ್ತರಿಸಬಾರದು. ಮತ್ತೊಂದೆಡೆ ಕೆಲವು ವಿಮಾನಯಾನ ಸಂಸ್ಥೆಗಳು ಶುಲ್ಕ ದರ ಮಿತಿಯನ್ನು ತೆಗೆದುಹಾಕಬೇಕು ಮತ್ತು ಕೆಲವು ಈಗಿನ ಶುಲ್ಕ ದರ ಮಿತಿ ಬಗ್ಗೆ ತೃಪ್ತಿ ಹೊಂದಿವೆ ಎಂದು ಆನ್‌ಲೈನ್ ಪ್ರಯಾಣ ಟಿಕೆಟಿಂಗ್ ಪ್ಲಾಟ್‌ಫಾರ್ಮ್ ಈಸ್‌ಮೈಟ್ರಿಪ್‌ನ ಮುಖ್ಯ ಕಾರ್ಯನಿರ್ವಾಹಕ ಹೇಳಿದ್ದಾರೆ..

airfare
ವಿಮಾನ
author img

By

Published : Oct 28, 2020, 8:05 PM IST

ನವದೆಹಲಿ : ದೇಶೀಯ ವಾಯು ಸಂಚಾರದ ಮಂದಗತಿಯ ಮಧ್ಯೆಯೂ ವಿಮಾನ ದರಗಳ ಮಿತಿಯನ್ನು ಸರ್ಕಾರವು ನವೆಂಬರ್ 24ರ ಬಳಿಕ ವಿಸ್ತರಿಸಬಹುದು ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಮೂಲಗಳು ತಿಳಿಸಿವೆ.

ಕೊರೊನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆ ಹಾರಾಟದ ಅವಧಿಯನ್ನು ಅವಲಂಬಿಸಿ ಕೇಂದ್ರವು ಕಡಿಮೆ ಮತ್ತು ಮೇಲಿನ ಮಿತಿಗಳಲ್ಲಿ ವಿಮಾನ ದರ ಇರಿಸಿದೆ.

ಆನ್‌ಲೈನ್ ಪ್ರಯಾಣ ಟಿಕೆಟಿಂಗ್ ಪ್ಲಾಟ್‌ಫಾರ್ಮ್ ಈಸಿ ‌ಮೈಟ್ರಿಪ್‌ನ ಮುಖ್ಯ ಕಾರ್ಯನಿರ್ವಾಹಕ ನಿಶಾಂತ್ ಪಿಟ್ಟಿ ಮಾತನಾಡಿ, ಸರ್ಕಾರವು ವಿಮಾನಯಾನ ದರ ವಿಸ್ತರಿಸಬಾರದು. ಮತ್ತೊಂದೆಡೆ ಕೆಲವು ವಿಮಾನಯಾನ ಸಂಸ್ಥೆಗಳು ಶುಲ್ಕ ದರ ಮಿತಿಯನ್ನು ತೆಗೆದು ಹಾಕಬೇಕು ಮತ್ತು ಕೆಲವು ಈಗಿನ ಶುಲ್ಕ ದರ ಮಿತಿ ಬಗ್ಗೆ ತೃಪ್ತಿ ಹೊಂದಿವೆ ಎಂದರು.

ಜುಲೈ 24 ರಂದು ವಿಮಾನ ನಿಯಂತ್ರಕ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​(ಡಿಜಿಸಿಎ) ದೇಶೀಯ ವಿಮಾನಗಳ ವೈಮಾನಿಕ ದರಗಳ ಮೇಲಿನ ಮಿತಿಯನ್ನು ಆಗಸ್ಟ್ 24ರಿಂದ ನವೆಂಬರ್ 24ರವರೆಗೆ ವಿಸ್ತರಿಸಿತ್ತು. ಮೇ ಕೊನೆಯ ವಾರದಲ್ಲಿ ಎರಡು ತಿಂಗಳ ಅಂತರದ ನಂತರ ಭಾರತ ದೇಶೀಯ ವಿಮಾನಯಾನಗಳು ಪ್ರಾರಂಭವಾದವು.

ನಾಗರಿಕ ವಿಮಾನಯಾನ ಸಚಿವಾಲಯದ ಪ್ರಕಾರ, ಅಕ್ಟೋಬರ್ 27ರ ಹೊತ್ತಿಗೆ ದೇಶಾದ್ಯಂತ 3,058 ವಿಮಾನಗಳಲ್ಲಿ 1,48,344 ಪ್ರಯಾಣಿಕರು ಹಾರಾಟ ನಡೆಸಿದ್ದಾರೆ. ಪ್ರಸ್ತುತ, ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಶೇ. 60ರಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಸರ್ಕಾರ ಅವಕಾಶ ನೀಡಿದೆ. ದೇಶದಲ್ಲಿ ದೇಶೀಯ ವಿಮಾನಗಳು ಮೇ 25ರಿಂದ ಕ್ರಮೇಣ ಕಾರ್ಯಾಚರಣೆಯನ್ನು ಪುನರಾರಂಭಿಸಿದವು.

2020ರ ಮಾರ್ಚ್ ಕೊನೆಯ ವಾರದಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ವಿಧಿಸಿದಾಗಿನಿಂದ ದೇಶದಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನಗಳು ಸ್ಥಗಿತಗೊಂಡಿವೆ. ಆದರೂ ವಂದೇ ಭಾರತ್ ಮಿಷನ್ ಮತ್ತು ದ್ವಿಪಕ್ಷೀಯ ವಾಯು ಬಬಲ್ ಒಪ್ಪಂದ ಮೂಲಕ ಸರ್ಕಾರವು ಅಂತಾರಾಷ್ಟ್ರೀಯ ವಿಮಾನಯಾನ ಸೇವೆಗಳನ್ನು ನಡೆಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.