ನವದೆಹಲಿ: ಕೋವಿಡ್ -19 ಹಬ್ಬುತ್ತಿರುವ ಮಧ್ಯೆ ಪ್ಯಾರಸಿಟಮಾಲ್ನಿಂದ ತಯಾರಿಸಿದ ಫಾರ್ಮುಲೇಷನ್ಗಳ ಮೇಲಿನ ನಿರ್ಬಂಧವನ್ನು ಕೇಂದ್ರ ಸರ್ಕಾರ ಶುಕ್ರವಾರ ತೆಗೆದುಹಾಕಿದೆ.
ಆದರೂ ಪ್ಯಾರಸಿಟಮಾಲ್ ಸಕ್ರಿಯ ಔಷಧೀಯ ಪದಾರ್ಥಗಳ (ಎಪಿಐ) ರಫ್ತು ಮೇಲಿನ ನಿರ್ಬಂಧಗಳು ಮುಂದುವರಿಯಲಿವೆ ಎಂದು ವಿದೇಶಾಂಗ ವ್ಯಾಪಾರ ನಿರ್ದೇಶನಾಲಯ (ಡಿಜಿಎಫ್‌ಟಿ) ಅಧಿಸೂಚನೆಯಲ್ಲಿ ತಿಳಿಸಿದೆ.
ಪ್ಯಾರೆಸಿಟಮಾಲ್ನಿಂದ ತಯಾರಿಸಿದ ಫಾರ್ಮುಲೇಷನ್ (ಸ್ಥಿರ-ಡೋಸ್ ಸಂಯೋಜನೆಗಳ ಸಂಸ್ಕರಣೆ) ತಕ್ಷಣದ ಆದೇಶದಂತೆ ರಫ್ತಿಗೆ ಮುಕ್ತಗೊಳಿಸಲಾಗುತ್ತದೆ. ಪ್ಯಾರೆಸಿಟಮಾಲ್ ಎಪಿಐಗಳು ರಫ್ತಿಗೆ ನಿರ್ಬಂಧಿತವಾಗಿರುತ್ತವೆ ಎಂದು ಹೇಳಿದೆ.
ಪ್ಯಾರೆಸಿಟಮಾಲ್ ಸೇರಿದಂತೆ 26 ಫಾರ್ಮಾ ಪದಾರ್ಥಗಳು ಮತ್ತು ಔಷಧಗಳಿಗೆ ರಫ್ತು ನಿರ್ಬಂಧವನ್ನು ಮಾರ್ಚ್ 3ರಂದು ಕೇಂದ್ರ ಸರ್ಕಾರ ವಿಧಿಸಿತ್ತು.