ETV Bharat / business

ಈರುಳ್ಳಿ ರಫ್ತು ನಿಷೇಧದ ಬಳಿಕ ಆನಿಯನ್ ಸೀಡ್ಸ್ ಮೇಲೂ ನಿರ್ಬಂಧ! - ಭಾರತದ ಈರುಳ್ಳಿ ರಫ್ತು ನೀತಿ

ಈರುಳ್ಳಿ ಬೆಲೆಯನ್ನು ಒಳಗೊಂಡಿರುವಂತೆ ಈರುಳ್ಳಿ ರಫ್ತು ಮಾಡುವುದನ್ನು ಡಿಜಿಎಫ್‌ಟಿ ಈಗಾಗಲೇ ನಿಷೇಧಿಸಿದೆ. ಸರಕುಗಳ ದೇಶೀಯ ಲಭ್ಯತೆ ಸುಧಾರಿಸಲು ಮತ್ತು ಗ್ರಾಹಕರಿಗೆ ಪರಿಹಾರ ನೀಡಲು ಕೇಂದ್ರವು ಡಿಸೆಂಬರ್ 31ರವರೆಗೆ ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳಿಗೆ ಸ್ಟಾಕ್ ಹೋಲ್ಡಿಂಗ್ ಮಿತಿ ವಿಧಿಸಿದೆ.

Onion
ಈರುಳ್ಳಿ
author img

By

Published : Oct 29, 2020, 8:28 PM IST

ನವದೆಹಲಿ: ದೇಶೀಯ ಮಾರುಕಟ್ಟೆಗಳಲ್ಲಿ ಬೆಲೆ ಏರಿಕೆಯ ಮಧ್ಯೆ ತಕ್ಷಣ ಜಾರಿಗೆ ಬರುವಂತೆ ಈರುಳ್ಳಿ ಸೀಡ್ಸ್​ ರಫ್ತುಗೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ.

ಈ ಮೊದಲು ಈರುಳ್ಳಿ ಸೀಡ್ಸ್​ ರಫ್ತು ನಿರ್ಬಂಧಿತ ವಿಭಾಗದಲ್ಲಿತ್ತು. ರಫ್ತುದಾರರು ಸರ್ಕಾರದಿಂದ ಪರವಾನಗಿ ಅಥವಾ ಅನುಮತಿ ಪಡೆಯುವ ಅಗತ್ಯವಿತ್ತು. 'ಈರುಳ್ಳಿ ಬೀಜಗಳನ್ನು ರಫ್ತು ಮಾಡುವುದನ್ನು ನಿಷೇಧಿಸಲಾಗಿದ್ದು, ಇದು ತಕ್ಷಣದಿಂದ ಜಾರಿಗೆ ಬರಲಿದೆ' ಎಂದು ವಿದೇಶಾಂಗ ವ್ಯಾಪಾರ ನಿರ್ದೇಶನಾಲಯ (ಡಿಜಿಎಫ್​​ಟಿ) ಅಧಿಸೂಚನೆಯಲ್ಲಿ ತಿಳಿಸಿದೆ.

ಪರಿವರ್ತನೆಯ ವ್ಯವಸ್ಥೆಯಲ್ಲಿನ ನಿಬಂಧನೆಗಳು ಅನ್ವಯವಾಗುವುದಿಲ್ಲ ಎಂದು ಅದು ಹೇಳಿದೆ. ಈ ಹಣಕಾಸು ವರ್ಷದ ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ಈರುಳ್ಳಿ ಸೀಡ್ಸ್​ ರಫ್ತು 0.57 ಮಿಲಿಯನ್ ಡಾಲರ್ ಆಗಿದ್ದು, 2019-20ರ ಆರ್ಥಿಕ ವರ್ಷದಲ್ಲಿ 3.5 ಮಿಲಿಯನ್ ಡಾಲರ್​ಗಳಷ್ಟಿತ್ತು.

ಈರುಳ್ಳಿ ಬೆಲೆಯನ್ನು ಒಳಗೊಂಡಿರುವಂತೆ ಈರುಳ್ಳಿ ರಫ್ತು ಮಾಡುವುದನ್ನು ಡಿಜಿಎಫ್‌ಟಿ ಈಗಾಗಲೇ ನಿಷೇಧಿಸಿದೆ. ಸರಕುಗಳ ದೇಶೀಯ ಲಭ್ಯತೆ ಸುಧಾರಿಸಲು ಮತ್ತು ಗ್ರಾಹಕರಿಗೆ ಪರಿಹಾರ ನೀಡಲು ಕೇಂದ್ರವು ಡಿಸೆಂಬರ್ 31ರವರೆಗೆ ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳಿಗೆ ಸ್ಟಾಕ್ ಹೋಲ್ಡಿಂಗ್ ಮಿತಿ ವಿಧಿಸಿತ್ತು.

ಚಿಲ್ಲರೆ ವ್ಯಾಪಾರಿಗಳು ಈರುಳ್ಳಿಯನ್ನು ಕೇವಲ 2 ಟನ್​​ವರೆಗೆ ಸಂಗ್ರಹಿಸಬಹುದು. ಆದರೆ, ಸಗಟು ವ್ಯಾಪಾರಿಗಳು 25 ಟನ್ ವರೆಗೆ ದಾಸ್ತಾನು ಮಾಡಿಕೊಳ್ಳುವ ಅವಕಾಶವಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಲೀನಾ ನಂದನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಳೆದ ಕೆಲವು ವಾರಗಳಲ್ಲಿ ಈರುಳ್ಳಿ ಬೆಲೆಗಳು ಪ್ರತಿ ಕೆ.ಜಿ.ಗೆ ಸುಮಾರು 70 ರೂ.ಗಳಷ್ಟು ಹೆಚ್ಚಾಗಿದೆ. ಭಾರೀ ಮಳೆಯಿಂದಾಗಿ ಉತ್ಪಾದನಾ ಪ್ರದೇಶಗಳಲ್ಲಿ ಖಾರಿಫ್ ಬೆಳೆಗೆ ಹಾನಿಯಾದ ಹಿನ್ನೆಲೆಯಲ್ಲಿ ಈ ದರ ಏರಿಕೆ ಸಂಭವಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.