ನವದೆಹಲಿ: ಕ್ಷಿಪ್ರ ಸಾಗಾಟ ಮತ್ತು ವಿತರಣೆ ಖಚಿತತೆಗೆ ಸರ್ಕಾರವು ಯಾವುದೇ ಮೌಲ್ಯದ ಮಿತಿಯಿಲ್ಲದೆ ಕೋವಿಡ್-19 ಲಸಿಕೆ ಆಮದು ಮತ್ತು ರಫ್ತು ಮಾಡಲು ಅನುಮತಿಸಿದೆ.
ಎಕ್ಸ್‌ಪ್ರೆಸ್ ಕಾರ್ಗೋ ಕ್ಲಿಯರೆನ್ಸ್ ಸಿಸ್ಟಮ್ (ಇಸಿಸಿಎಸ್) ಕಾರ್ಯನಿರ್ವಹಿಸುತ್ತಿರುವ ಸ್ಥಳಗಳಲ್ಲಿ ಕೊರಿಯರ್ ಮೂಲಕ ಕೋವಿಡ್-19 ಲಸಿಕೆಗಳನ್ನು ಆಮದು/ರಫ್ತು ಮಾಡಲು ಅನುಕೂಲವಾಗುವಂತೆ ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ನಿಯಮಗಳನ್ನು ತಿದ್ದುಪಡಿ ಮಾಡಿದೆ.
ಓದಿ: ಭಯೋತ್ಪಾದಕರ ಹಣಕಾಸಿನ ನೆರವಿಗೆ ಅಮೆರಿಕ ನಾಕಾಬಂದಿ: ಪಾಕ್ ಸೆರಗಿನ ಉಗ್ರರು ವಿಲವಿಲ!
ಲಸಿಕೆಗಳನ್ನು ನಿಯಂತ್ರಿತ ತಾಪಮಾನದಲ್ಲಿ ಸಂಗ್ರಹಿಸಿ ಸಾಗಿಸಬೇಕಾಗಿದ್ದು, ಈ ಪ್ರಕ್ರಿಯೆಯಲ್ಲಿ ಅನೇಕ ಪಾಲುದಾರರು ತೊಡಗಿಸಿಕೊಂಡಿದ್ದಾರೆ. ಇದರಿಂದಾಗಿ ಹಲವು ಸವಾಲುಗಳು ಎದುರಾಗಲಿವೆ. ಲಸಿಕೆಗಳನ್ನು ತ್ವರಿತವಾಗಿ ಸ್ಥಳಾಂತರಿಸಲು ಹಾಗೂ ಗಡಿಯಾಚೆಗಿನ ಕಾರ್ಯವಿಧಾನಗಳನ್ನು ಜಾರಿಗೆ ತರಲು ಈ ತಿದ್ದುಪಡಿ ಅಗತ್ಯವಾಗಿರುತ್ತದೆ ಸಿಬಿಐಸಿ ಹೇಳಿದೆ.
ಸಾಂಕ್ರಾಮಿಕ ರೋಗದ ವಿರುದ್ಧದ ಸಾಮೂಹಿಕ ಹೋರಾಟದಲ್ಲಿ ಲಸಿಕೆಗಳ ಸಮರ್ಥ ಸಾಗಾಟ ಮತ್ತು ವಿತರಣೆ ನಿರ್ಣಾಯಕ ಅವಶ್ಯಕತೆಯಾಗಿದೆ.