ನವದೆಹಲಿ: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಜನರ ಸಾಮಾಜಿಕ ಅಂತರ ಉತ್ತೇಜಿಸಲು ತಮ್ಮ ಸಿಬ್ಬಂದಿಗೆ 'ವರ್ಕ್ ಫ್ರಮ್ ಹೋಮ್' ನೀತಿಯನ್ನು ಜಾರಿಗೆ ತರಲು ಸರ್ಕಾರ ಕಂಪನಿಗಳಿಗೆ ಸೂಚಿಸಿದೆ.
ಅನುಸರಣೆಯಲ್ಲಿ ಅಗತ್ಯತೆಗಳ ಸಡಿಲಿಸುವಿಕೆಯ ಭಾಗವಾಗಿ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಕಂಪನಿಗಳಿಗೆ ವಿಡಿಯೋ ಸಭೆಗಳ ಮೂಲಕ ಮಂಡಳಿಯ ಸಭೆಗಳನ್ನು ನಡೆಸಲು ಅವಕಾಶ ನೀಡಲಿದೆ. ಜೂನ್ 30ರವರೆಗೆ ಕಾನ್ಫರೆನ್ಸ್ ಮತ್ತು ಇತರ ಆಡಿಯೊ ದೃಶ್ಯ ಸಾಧನಗಳನ್ನು ಬಳಸಿಕೊಳ್ಳುವಂತೆಯೂ ಸೂಚಿಸಿದೆ.
ಕೋವಿಡ್-19 ಏಕಾಏಕಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಗತಗೊಳಿಸಬಹುದಾದ ಕಂಪನಿಗಳ ಕಾನೂನಿನ ಅಡಿ ಸಡಿಲಗೊಳಿಸುವಿಕೆಯನ್ನು ಸಚಿವಾಲಯ ಪರಿಶೀಲಿಸುತ್ತಿದೆ ಎಂದು ಕಾರ್ಪೊರೇಟ್ ವ್ಯವಹಾರಗಳ ಕಾರ್ಯದರ್ಶಿ ಇಂಜೆಟಿ ಶ್ರೀನಿವಾಸ್ ಅವರು ಗುರುವಾರ ನಡೆದ ಸಲಹಾ ಸಭೆಯಲ್ಲಿ ಕೈಗೊಂಡ ಕ್ರಮಗಳನ್ನು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಂಪನಿಗಳು/ ಸೀಮಿತ ಹೊಣೆಗಾರಿಕೆ ಪಾಲುದಾರರು (ಎಲ್‌ಎಲ್‌ಪಿ) ತಮ್ಮ ಸಿದ್ಧತೆಯನ್ನು ದೃಢೀಕರಿಸಿ ವೆಬ್ ಫಾರ್ಮ್ ಅಳವಡಿಸಿಕೊಂಡು ಕೊರೊನಾ ವೈರಸ್ ಎದುರಿಸಲು ಸನ್ನದ್ಧಾರಗಬೇಕು. 'ವರ್ಕ್ ಫ್ರಮ್ ಹೋಮ್' ನೀತಿಯನ್ನು ಅಳವಡಿಸಿಕೊಳ್ಳುವ ಕಂಪನಿಗಳ ಮತ್ತು ಎಲ್‌ಎಲ್‌ಪಿಗಳ ವಿವರಗಳನ್ನು ಸಂಗ್ರಹಿಸುವ ಗುರಿಯನ್ನು ಇದು ಹೊಂದಿದೆ.
ಕಂಪನಿಗಳು/ ಎಲ್‌ಎಲ್‌ಪಿದಾರರು, ಉದ್ಯೋಗದಾತರು, ವಿಶೇಷವಾಗಿ ನಗರ ಪ್ರದೇಶಗಳಲ್ಲಿ ರೋಗದ ಹರಡುವಿಕೆ ಹೆಚ್ಚಾಗಿದೆ. ಕಾಯಿಲೆ ಮತ್ತು ಮರಣ ಪ್ರಮಾಣವನ್ನು ತಗ್ಗಿಸಲು ಸಾಮಾಜಿಕ ಅಂತರದ ಉದ್ದೇಶವನ್ನು ಅರಿತುಕೊಳ್ಳಲು ಕಂಪನಿಗಳ ಸಹಕಾರ ಅತ್ಯಗತ್ಯ ಎಂದು ತಿಳಿಸಿದ್ದಾರೆ.
ಮಾರ್ಚ್ 31ರವರೆಗೆ ತಾತ್ಕಾಲಿಕ ಕ್ರಮವಾಗಿ 'ಮನೆಯಿಂದ ಕೆಲಸ' ನೀತಿಯನ್ನು ತಕ್ಷಣದಿಂದ ಜಾರಿಗೆ ತರಲು ಯೋಜನೆಯನ್ನು ಸೂಚಿಸಲಾಗಿದೆ.
ಎಲ್ಲ ಕಂಪನಿಗಳು / ಎಲ್‌ಎಲ್‌ಪಿಗಳು ತಮ್ಮ ಪ್ರಧಾನ ಕಚೇರಿ ಮತ್ತು ಪ್ರದೇಶದ ಕಚೇರಿಗಳಲ್ಲಿ 'ವರ್ಕ್ ಫ್ರಮ್ ಹೋಮ್' ನೀತಿಯನ್ನು ಸಾಧ್ಯವಾದಷ್ಟು ಮಟ್ಟಿಗೆ ಜಾರಿಗೆ ತರಲು ಸೂಚಿಸಲಾಗಿದೆ. ಇದರಲ್ಲಿ ವೀಡಿಯೊ ಕಾನ್ಫರೆನ್ಸ್ ಅಥವಾ ಇತರ ಎಲೆಕ್ಟ್ರಾನಿಕ್ / ಟೆಲಿಫೋನ್ / ಗಣಕೀಕೃತ ವಿಧಾನಗಳ ಮೂಲಕ ಸಭೆಗಳನ್ನು ನಡೆಸಬಹುದು. ಕರ್ತವ್ಯದಲ್ಲಿರುವ ಅಗತ್ಯ ಸಿಬ್ಬಂದಿಯ ಪರಸ್ಪರ ಸಂವಹನವನ್ನು ಕಡಿಮೆ ಮಾಡುವ ನಿಯಮವನ್ನು ಸಹ ಅನುಸರಿಸಬಹುದು ಎಂದು ಶ್ರೀನಿವಾಸ್ ಹೇಳಿದ್ದಾರೆ.
ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರ ಕಚೇರಿ, ಸಲಹಾ ಮತ್ತು ಮಂಡಳಿಯ ಸಭೆಯ ಮಾನದಂಡಗಳಲ್ಲಿ ವಿನಾಯಿತಿ ಪಡೆಯುವ ಅಧಿಸೂಚನೆಯನ್ನು ಟ್ವೀಟ್ ಮಾಡಿದೆ.
ಕೋವಿಡ್- 19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ನಿರ್ದೇಶಕರ ಉಪಸ್ಥಿತಿಯೊಂದಿಗೆ ಮಂಡಳಿಯ ಸಭೆಗಳನ್ನು ನಡೆಸುವ ಅಗತ್ಯವನ್ನು ಸಡಿಲಿಸಲು ಸರ್ಕಾರ ನಿರ್ಧರಿಸಿದೆ ಎಂದು ಹಣಕಾಸು ಸಚಿವರ ಕಚೇರಿಯು ತನ್ನ ಟ್ವೀಟ್‌ನಲ್ಲಿ ತಿಳಿಸಿದೆ.