ETV Bharat / business

ಕೊರೊನಾ ದುಃಖ ಸಾಗರದಲ್ಲಿ ಜಾಗತಿಕ ಆರ್ಥಿಕತೆ: ಆಗಸದ ಎತ್ತರಕ್ಕೆ ಜಿಗಿದ ಚೀನಾ GDP... ಭಾರತದ್ದು? - ಜಾಗತಿಕ ಆರ್ಥಿಕತೆ

ಚೀನಾ ಹೊರತುಪಡಿಸಿ ಉದಯೋನ್ಮುಖ ಆರ್ಥಿಕತೆಗಳ ವಿಚಾರದಲ್ಲಿ ಭಾರತ ಸೇರಿದಂತೆ ಏಳು ಪ್ರಮುಖ ಉದಯೋನ್ಮುಖ ಆರ್ಥಿಕತೆಗಳು ತೀವ್ರ ಋಣಾತ್ಮಕ ಬೆಳವಣಿಗೆ ದಾಖಲಿಸಿವೆ. ಮೊದಲ ತ್ರೈಮಾಸಿಕದಲ್ಲಿ ಭಾರತವು ಜಿಡಿಪಿಯಲ್ಲಿ ಅತಿದೊಡ್ಡ ಕುಸಿತವನ್ನು ಅನುಭವಿಸಿದರೆ, ನಂತರದ ಸ್ಥಾನದಲ್ಲಿ ಮೆಕ್ಸಿಕೊ ಮೈನಸ್ ಶೇ 18.7ರಷ್ಟು, ದಕ್ಷಿಣ ಆಫ್ರಿಕಾ ಮೈನಸ್ ಶೇ 17.5ರಷ್ಟು, ಬ್ರೆಜಿಲ್ ಮೈನಸ್ ಶೇ 10.9ರಷ್ಟು, ಟರ್ಕಿ ಮೈನಸ್ ಶೇ 8.7ರಷ್ಟು, ಇಂಡೋನೇಷ್ಯಾ ಮೈನಸ್ ಶೇ 5.4ರಷ್ಟು, ಮತ್ತು ರಷ್ಯಾ ಮೈನಸ್ ಶೇ 4.6ರಷ್ಟು ಇವೆ.

China GDP
China GDP
author img

By

Published : Jun 11, 2021, 4:08 PM IST

ನವದೆಹಲಿ: ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ರೋಗವು ವಿಶ್ವ ಆರ್ಥಿಕತೆಯನ್ನು ಧ್ವಂಸಗೊಳಿಸಿದೆ. ಜಿ-20ಯ 16 ಪ್ರಮುಖ ಆರ್ಥಿಕತೆಗಳಲ್ಲಿ ಚೀನಾವನ್ನು ಹೊರತುಪಡಿಸಿ ಮೊದಲ ತ್ರೈಮಾಸಿಕದಲ್ಲಿ ಇವೆಲ್ಲವೂ ಋಣಾತ್ಮಕ ಬೆಳವಣಿಗೆ ಕಂಡಿವೆ. ಇದು ವುಹಾನ್ ಪ್ರದೇಶದಲ್ಲಿ ಆರಂಭಿಕ ಲಾಕ್‌ಡೌನ್ ಹೊರತಾಗಿಯೂ ಮೊದಲ ತ್ರೈಮಾಸಿಕದಲ್ಲಿ ಶೇ 3.2ರಷ್ಟು ಬೆಳವಣಿಗೆ ದಾಖಲಿಸಿದೆ. ಈ ವರ್ಷ ಒಂದು ಒಟ್ಟಾರೆ ಶೇ 8.25ರಷ್ಟು ಬೆಳವಣಿಗೆ ಕಂಡಿದೆ. ಚೀನಾ ನಾಲ್ಕನೇ ತ್ರೈಮಾಸಿಕದಲ್ಲಿ ಶೇ 18.3ರಷ್ಟು ಬೆಳವಣಿಗೆ ಸಾಧಿಸಿದೆ.

ಜಿ -20 ರಾಷ್ಟ್ರಗಳ ಪೈಕಿ ಸ್ಪೇನ್ ಮತ್ತು ಇಂಗ್ಲೆಂಡ್​ ಮೊದಲ ತ್ರೈಮಾಸಿಕದಲ್ಲಿ ಶೇ 21ಕ್ಕಿಂತ ಅಧಿಕ ಋಣಾತ್ಮಕ ಬೆಳವಣಿಗೆ ದಾಖಲಿಸಿದ್ದರಿಂದ ಕೆಟ್ಟ ಪ್ರದರ್ಶನ ನೀಡಿದವು. ವರ್ಷವಿಡೀ ಋಣಾತ್ಮಕ ಬೆಳವಣಿಗೆಯ ಪ್ರವೃತ್ತಿ ಮುಂದುವರಿಸಿವೆ. ಏಕೆಂದರೆ ಈ ಎರಡೂ ರಾಷ್ಟ್ರಗಳು ವರ್ಷದಲ್ಲಿ ಶೇ 10ಕ್ಕಿಂತ ಹೆಚ್ಚು ಋಣಾತ್ಮಕವಾಗಿ ಬೆಳವಣಿಗೆಯನ್ನು ಕೊನೆಗೊಳಿಸಿದವು.

ಜಿ-20ಯ ಎಂಟು ಸುಧಾರಿತ ಆರ್ಥಿಕತೆಗಳಲ್ಲಿ ಏಳು ದೇಶಗಳು ಮೊದಲ ತ್ರೈಮಾಸಿಕದಲ್ಲಿ ಎರಡು ಅಂಕೆಗಳಲ್ಲಿ ನಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ. ಇಂಗ್ಲೆಂಡ್​ ಮೈನಸ್ ಶೇ 21.4ರಷ್ಟು, ಸ್ಪೇನ್ ಮೈನಸ್ ಶೇ 21.6ರಷ್ಟು, ಫ್ರಾನ್ಸ್ ಮೈನಸ್ ಶೇ 18.4ರಷ್ಟು, ಇಟಲಿ ಮೈನಸ್ ಶೇ 18.1ರಷ್ಟು, ಕೆನಡಾ ಮೈನಸ್ ಶೇ 12.7ರಷ್ಟು, ಜರ್ಮನಿ ಮೈನಸ್ ಶೇ 11.2ರಷ್ಟು ಮತ್ತು ಜಪಾನ್ ಮೈನಸ್ ಶೇ 10.2ರಷ್ಟು ನಕಾರಾತ್ಮಕ ಬೆಳವಣಿಗೆ ದಾಖಲಿಸಿದೆ. ಅಮೆರಿಕ ಮಾತ್ರ ಜಿಡಿಪಿ ಕುಸಿತವು ಒಂದೇ ಅಂಕಿಯಲ್ಲಿದ್ದು, ಮೊದಲ ತ್ರೈಮಾಸಿಕದಲ್ಲಿ ಮೈನಸ್ ಶೇ 9ರಷ್ಟಿದೆ.

ಎಲ್ಲ ಎಂಟು ಶ್ರೀಮಂತ ರಾಷ್ಟ್ರಗಳು ವರ್ಷದ ಮೊದಲ ಮೂರು ತ್ರೈಮಾಸಿಕಗಳಲ್ಲಿ ತಮ್ಮ ಜಿಡಿಪಿಯಲ್ಲಿ ಕುಸಿತವನ್ನು ವರದಿ ಮಾಡಿದ್ದು, ಯುಕೆ, ಸ್ಪೇನ್ ಮತ್ತು ಇಟಲಿ ಅತಿದೊಡ್ಡ ಕುಸಿತದ ವರದಿ ಮಾಡಿವೆ. ನಾಲ್ಕನೇ ತ್ರೈಮಾಸಿಕದಲ್ಲಿ ಶೇ 6.1ರಷ್ಟು ಋಣಾತ್ಮಕ ಬೆಳವಣಿಗೆಯೊಂದಿಗೆ ವರ್ಷವನ್ನು ಕೊನೆಗೊಳಿಸಿದ್ದರಿಂದ ಯುಕೆ ಅತ್ಯಂತ ಕೆಟ್ಟ ಪ್ರದರ್ಶನ ನೀಡಿದೆ.

ಓದಿ: ವಿಪ್ರೋ ಮುಖ್ಯ ಮಾಹಿತಿ ಅಧಿಕಾರಿಯಾಗಿ ಅನುಪ್ ನೇಮಕ: ಯಾರು ಈ ಪುರೋಹಿತ್?

ನಾಲ್ಕನೇ ತ್ರೈಮಾಸಿಕದಲ್ಲಿ ಫ್ರಾನ್ಸ್ ಶೇ 1.2ರಷ್ಟು ಸಕಾರಾತ್ಮಕ ಬೆಳವಣಿಗೆ ದಾಖಲಿಸಿದ್ದರಿಂದ ಈ ಎಂಟು ಶ್ರೀಮಂತ ರಾಷ್ಟ್ರಗಳಲ್ಲಿ ಕೇವಲ ಮೂರು ಮಾತ್ರ ವರ್ಷಾಂತ್ಯಕ್ಕೆ ಸಕರಾತ್ಮಕತೆ ತಿರುಗಿಸಲು ಸಾಧ್ಯವಾಯಿತು. ಈ ನಂತರ ಯುಎಸ್ಎ ಶೇ 0.4ರಷ್ಟು ಮತ್ತು ಕೆನಡಾ ಶೇ 0.3ರಷ್ಟಿವೆ.

ಜಗತ್ತಿಗೆ ಕೊರೊನಾ ಹಂಚಿದ ಚೀನಾ GDP ಬೆಳವಣಿಗೆ ಬಲಾಢ್ಯ ರಾಷ್ಟ್ರಗಳ ನಿದ್ದೆ ಕೆಡಿಸುವಂತಿದೆ

ಚೀನಾ ಹೊರತುಪಡಿಸಿ ಉದಯೋನ್ಮುಖ ಆರ್ಥಿಕತೆಗಳ ವಿಚಾರದಲ್ಲಿ ಭಾರತ ಸೇರಿದಂತೆ ಏಳು ಪ್ರಮುಖ ಉದಯೋನ್ಮುಖ ಆರ್ಥಿಕತೆಗಳು ತೀವ್ರ ಋಣಾತ್ಮಕ ಬೆಳವಣಿಗೆ ದಾಖಲಿಸಿವೆ. ಮೊದಲ ತ್ರೈಮಾಸಿಕದಲ್ಲಿ ಭಾರತವು ಜಿಡಿಪಿಯಲ್ಲಿ ಅತಿದೊಡ್ಡ ಕುಸಿತವನ್ನು ಅನುಭವಿಸಿದರೆ, ನಂತರದ ಸ್ಥಾನದಲ್ಲಿ ಮೆಕ್ಸಿಕೊ ಮೈನಸ್ ಶೇ 18.7ರಷ್ಟು, ದಕ್ಷಿಣ ಆಫ್ರಿಕಾ ಮೈನಸ್ ಶೇ 17.5ರಷ್ಟು, ಬ್ರೆಜಿಲ್ ಮೈನಸ್ ಶೇ 10.9ರಷ್ಟು, ಟರ್ಕಿ ಮೈನಸ್ ಶೇ 8.7ರಷ್ಟು, ಇಂಡೋನೇಷ್ಯಾ ಮೈನಸ್ ಶೇ 5.4ರಷ್ಟು, ಮತ್ತು ರಷ್ಯಾ ಮೈನಸ್ ಶೇ 4.6ರಷ್ಟು ಇವೆ.

ಸಾಂಕ್ರಾಮಿಕ ಸಮಯದಲ್ಲಿ ಚೀನಾದ ಆರ್ಥಿಕ ಬೆಳವಣಿಗೆಯು ಯಾವುದೇ ಗಜಕಡ್ಡಿ ಅಲುಗಾಡದೆ ಅಪ್ರತಿಮವಾಗಿ ನಿಂತಿದೆ. ದೇಶವು ನಾಲ್ಕನೇ ತ್ರೈಮಾಸಿಕದಲ್ಲಿ ಶೇ 18.6ರಷ್ಟು ದ್ವಿ-ಅಂಕಿಯ ಬೆಳವಣಿಗೆ ಹೊಂದಿದೆ. ಆರ್ಥಿಕತೆಯ ಎಲ್ಲಾ ತ್ರೈಮಾಸಿಕಗಳಲ್ಲಿಯೂ ಸಕಾರಾತ್ಮಕ ಬೆಳವಣಿಗೆ ದಾಖಲಿಸಿದೆ. ಇದು ಕ್ಯೂ1 ರಲ್ಲಿ ಶೇ 3.2ರಷ್ಟು, ಕ್ಯೂ 2ನಲ್ಲಿ ಶೇ 4.9ರಷ್ಟು ಮತ್ತು ಮೂರನೇ ತ್ರೈಮಾಸಿಕದಲ್ಲಿ ಶೇ 6.5ರಷ್ಟು ಮತ್ತು ಕ್ಯೂ 4ರಲ್ಲಿ ಶೇ 18.3ರಷ್ಟು ಬೆಳವಣಿಗೆ ದಾಖಲಿಸಿದೆ. ಈ ವರ್ಷವನ್ನು ಶೇ 8.22ರಷ್ಟು ಜಿಡಿಪಿ ಬೆಳವಣಿಗೆಯೊಂದಿಗೆ ಕೊನೆಗೊಳಿಸಿದೆ.

ಈ ಗುಂಪಿನ ನಡುವೆ ಎದ್ದು ಕಾಣುವ ಮತ್ತೊಂದು ದೇಶವೆಂದರೆ ಟರ್ಕಿ. ಇದು ಕ್ಯೂ 4ರಲ್ಲಿ ಶೇ 6.7ರಷ್ಟು ಹೆಚ್ಚಿನ ಬೆಳವಣಿಗೆಯ ದರವನ್ನು ಸಾಧಿಸಿದೆ. ಆದರೆ ನಾಲ್ಕು ತ್ರೈಮಾಸಿಕಗಳಲ್ಲಿ ಮೂರರಲ್ಲಿ ಸಕಾರಾತ್ಮಕ ಬೆಳವಣಿಗೆಯ ದರವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಕಳೆದ ಎರಡು ತ್ರೈಮಾಸಿಕಗಳಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿದ ಜಿ20ಯ 16 ಪ್ರಮುಖ ಆರ್ಥಿಕತೆಗಳಲ್ಲಿ ಭಾರತವು ಮೂರನೇ ರಾಷ್ಟ್ರವಾಗಿದೆ. ಇದು ಮೊದಲ ಎರಡು ತ್ರೈಮಾಸಿಕಗಳಲ್ಲಿ ಮೈನಸ್​ ಶೇ 24.4ರಷ್ಟು, ಮೈನಸ್ ಶೇ 7.3ರಷ್ಟು ಬೆಳವಣಿಗೆಯಿಂದ ತೀಕ್ಷ್ಣವಾದ ಬದಲಾವಣೆ ತೋರಿಸಿದೆ. ಈ ನಂತರ ಮತ್ತೆ ಪುಟಿದು ಮೂರನೇ ತ್ರೈಮಾಸಿಕದಲ್ಲಿ ಶೇ 0.5ರಷ್ಟು ಬೆಳವಣಿಗೆ ಹೊಂದಿತ್ತು. ಹಿಂದಿನ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಶೇ 1.6ರಷ್ಟು ಬೆಳವಣಿಗೆ ದಾಖಲಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.