ETV Bharat / business

ಭಾರತದ ಜಿಡಿಪಿ ಕುಸಿತ : ಫಿಚ್ ರೇಟಿಂಗ್ ಕೊಟ್ಟ ಕಾರಣವೇನು?​ - undefined

ಅಮೆರಿಕದ ರೇಟಿಂಗ್ ಸಂಸ್ಥೆಯಾದ ಫಿಚ್​, ಈ ಹಿಂದಿನ ವರ್ಷ ಅಂದಾಜಿಸಲಾದ ಶೇ. 7ರ ಬೆಳವಣಿಗೆಯ ಜಿಡಿಪಿ ದರ ದುರ್ಬಲವಾಗುತ್ತಿದೆ. ಆರ್​ಬಿಐ 2019ರ ವಿತ್ತೀಯ ನೀತಿಯ ಬಡ್ಡಿ ದರದಲ್ಲಿ 0.25 ಅಂಕಗಳ ಕಡಿತಗೊಳಿಸುವ ಕುರಿತು ಪರಿಶೀಲನೆ ನಡೆಸುತ್ತಿದೆ.

ಫಿಚ್ ರೇಟಿಂಗ್​ ಸಂಸ್ಥೆ
author img

By

Published : Mar 22, 2019, 11:36 PM IST

ಮುಂಬೈ: ದುರ್ಬಲವಾದ ಆರ್ಥಿಕ ನೀತಿಯಿಂದ ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರವು ಶೇ 6.8ಕ್ಕೆ ಇಳಿಕೆಯಾಗಲಿದೆ ಎಂದು ಫಿಚ್ ರೇಟಿಂಗ್ ತಿಳಿಸಿದೆ.

ಮುಂದಿನ ಆರ್ಥಿಕ ವರ್ಷದ ಬೆಳವಣಿಗೆಯ ಮುನ್ಸೂಚನೆಯನ್ನು ಗಮನದಲ್ಲಿ ಇರಿಸಿಕೊಂಡು ಹಾಗೂ ನಿರೀಕ್ಷಿತ ವೇಗದಲ್ಲಿನ ದುರ್ಬಲತೆಯಿಂದಾಗಿ ಜಿಡಿಪಿ ದರ ಶೇ. 6.8ಕ್ಕೆ ನೀಡಲು ನಿರ್ಧರಿಸಿದ್ದೇವೆ. 2021ರ ಆರ್ಥಿಕ ವರ್ಷದಲ್ಲಿ ಮತ್ತೆ ಶೇ 7.1ಕ್ಕೆ ತಲುಪಲಿದೆ ಎಂದು ತಿಳಿಸಿದೆ.

ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ (ಎನ್​ಬಿಎಫ್​ಸಿ) ಬಡ್ಡಿ ದರದ ಮೇಲೆ ಬಿಗಿಯಾದ ನಿಲುವುಗಳಿಂದ ವಾಹನ ಮತ್ತು ದ್ವಿಚಕ್ರ ವಾಹನಗಳ ಮಾರಾಟ ಕ್ಷೀಣಿಸುತ್ತಿದೆ. ಎನ್​ಬಿಎಫ್​ಸಿ ಹಣದುಬ್ಬರ ಸಮಸ್ಯೆಯನ್ನು ಎದುರಿಸುತ್ತಿದ್ದು, ಅದರ ಕೊಡುಗೆ ಶೂನ್ಯವಾಗಿದೆ. ಖಾಸಗಿ ಬ್ಯಾಂಕ್​ಗಳ ಸಾಲ ಪ್ರಮಾಣ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ ಎಂದು ಫಿಚ್ ಉಲ್ಲೇಖಿಸಿದೆ.

ಆರ್​ಬಿಐನ ಸಹವರ್ತಿ ಬ್ಯಾಂಕ್​ಗಳಿಗೆ ಬಂಡವಾಳದ ಕೊಡುಗೆ ಹಾಗೂ ಕಠಿಣ ನಿರ್ಬಂಧನೆಗಳಿಂದ ಮುಕ್ತಗೊಳಿಸಿದ್ದರೂ ಬ್ಯಾಂಕ್​ಗಳು ರೈತರು ಪಡೆಯುವ ಮೇಲಾಧಾರ ಸಾಲದ ಮಿತಿಯನ್ನು ಹೆಚ್ಚಿಸಿವೆ. ಫೆಬ್ರವರಿಯಲ್ಲಿ ಆರ್​ಬಿಐ ಆಯೋಜಿಸಿದ ಸಭೆಯಲ್ಲಿ ಬಡ್ಡಿ ದರವನ್ನು 25 ಬೇಸಿಕ್​ ಪಾಯಿಂಟ್ಸ್​ ಕಡಿತಗೊಳಿಸಿದೆ. 2019-20ರ ಮಧ್ಯಂತರ ಬಜೆಟ್​ನಲ್ಲಿ ಕೇಂದ್ರ ರೈತರ ನಗದು ವರ್ಗಾವಣೆ ಪ್ರಮಾಣವನ್ನು ಏರಿಕೆ ಮಾಡಿದೆ. ಹೀಗಾಗಿ, ಜಿಡಿಪಿ ಮೇಲೆ ಪರಿಣಾಮ ಬೀರಲಿದ್ದು, ಬೆಳವಣಿಗೆ ದರ ಕಡಿತಗೊಳುತ್ತದೆ ಎಂದು ವಿಶ್ಲೇಷಣಾತ್ಮಕವಾಗಿ ವಿವರಿಸಿದೆ.

Intro:Body:

1 GDP.gif   

close

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.