ETV Bharat / business

ಬೆರಳ ತುದಿಯಲ್ಲಿ ಫಾಸ್ಟ್​ ಟ್ಯಾಗ್​ ಪಾವತಿ... ನೋಂದಣಿ, ದಂಡ, 22 ಬ್ಯಾಂಕ್​ಗಳ ಕಂಪ್ಲೀಟ್ ಮಾಹಿತಿ

ಹೆದ್ದಾರಿಗಳಲ್ಲಿ ಸಂಚರಿಸುವ ಎಲ್ಲ ವಾಹನಗಳಿಗೆ ಡಿಸೆಂಬರ್ 1 ರಿಂದ ಫಾಸ್ಟ್ ಟ್ಯಾಗ್ ಹೊಂದುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಫಾಸ್ಟ್‌ಟ್ಯಾಗ್‌ ಹೊಂದಿಲ್ಲದಿದ್ದರೆ ವಾಹನ ಮಾಲೀಕರು ಅಥವಾ ಚಾಲಕರು ಡಿಸೆಂಬರ್‌ 1ರಿಂದ ದುಪ್ಪಟ್ಟು ಟೋಲ್‌ ಶುಲ್ಕ ಪಾವತಿಸಬೇಕಾಗುತ್ತದೆ.

FASTag
ಫಾಸ್ಟ್​ ಟ್ಯಾಗ್
author img

By

Published : Nov 28, 2019, 7:00 PM IST

ನವದೆಹಲಿ: ಡಿಸೆಂಬರ್​ 1ರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಎಲ್ಲ ವಾಹನಗಳು ಫಾಸ್ಟ್​ ಟ್ಯಾಗ್ ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಏನಿದು ಫಾಸ್ಟ್​ ಟ್ಯಾಗ್​? ಇದನ್ನು ಖರೀದಿಸಲು ಏನು ಮಾಡಬೇಕು? ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಸರಣಿ ಪ್ರಶ್ನೆಗಳಿಗೆ ಇಲ್ಲಿವೆ ಉತ್ತರಗಳು.

ಏನಿದು ಫಾಸ್ಟ್ ಟ್ಯಾಗ್?
ಟೋಲ್ ಪ್ಲಾಜಾಗಳಲ್ಲಿನ ಟ್ರಾಫಿಕ್ ಸಮಸ್ಯೆ ನಿವಾರಿಸಲು ಕೇಂದ್ರ ಸರ್ಕಾರ ಫಾಸ್ಟ್ ಟ್ಯಾಗ್ ಸೌಲಭ್ಯ ಜಾರಿಗೆ ತಂದಿದೆ. ಫಾಸ್ಟ್ ಟ್ಯಾಗ್ ಪ್ರಿಪೇಯ್ಡ್ ಟ್ಯಾಗ್ ಸೌಲಭ್ಯವಾಗಿದ್ದು, ಟೋಲ್ ಶುಲ್ಕವನ್ನು ನಗದು ರಹಿತವಾಗಿ ಪಾವತಿಸಬಹುದು.

ಶುಲ್ಕ ಪಾವತಿ ಮತ್ತು ಕಾರ್ಯನಿರ್ವಹಣೆ ಹೇಗೆ?
ರೆಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಷನ್(ಆರ್​ಎಫ್‍ಐಡಿ) ಆಧಾರಿತ ಫಾಸ್ಟ್ ಟ್ಯಾಗ್ ಅನ್ನು ವಾಹನದ ಮುಂಭಾಗದ ಗ್ಲಾಸ್‍ಗೆ ಅಂಟಿಸಬೇಕು. ಇದು ರೆಡಿಯೋ ಫ್ರಿಕ್ವೆನ್ಸಿ ಮೂಲಕ ಸ್ಕ್ಯಾನ್ ಆಗಿ ಪ್ರಿಪೇಯ್ಡ್ ಅಥವಾ ಉಳಿತಾಯ ಖಾತೆಯಿಂದ ಹಣ ಕಡಿತವಾಗಲಿದೆ.

ಇದರಿಂದ ಏನು ಲಾಭ?
ನೂತನ ವ್ಯವಸ್ಥೆಯಿಂದ ಟೋಲ್ ಪ್ಲಾಜಾದಲ್ಲಿ ವಾಹನಗಳು ಸರದಿ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ. ಹೆದ್ದಾರಿಗಳಲ್ಲಿ ಸಂಭವಿಸುವ ಸಂಚಾರ ದಟ್ಟಣೆ ಇಲ್ಲವಾಗುತ್ತದೆ. ಇದರಿಂದ ಚಾಲಕರ ಸಮಯ ಉಳಿತಾಯವಾಗಲಿದೆ. ವಾಣಿಜ್ಯ ವಾಹನಗಳ ಸಂಚಾರ ಮಾಹಿತಿ ಲಭ್ಯವಾಗಿ ತೆರಿಗೆ ವಂಚನೆಗೆ ಕಡಿವಾಣ ಬೀಳಲಿದೆ.

* ಟೋಲ್ ವಹಿವಾಟಿಗೆ ಹಣ ಸಾಗಿಸುವ ಅಗತ್ಯವಿಲ್ಲ
* ಸುಲಭ ಪಾವತಿ
* ಸಮಯದ ಉಳಿತಾಯ
* ಆನ್‌ಲೈನ್ ರೀಚಾರ್ಜ್
* ಟೋಲ್ ವಹಿವಾಟು ಇಳಿಕೆ
* ಕಡಿಮೆ ಬ್ಯಾಲೆನ್ಸ್​​ಗೆ ಇಮೇಲ್, ಎಸ್​​ಎಂಎಸ್​ ಎಚ್ಚರಿಕೆ
* ಆನ್‌ಲೈನ್ ಪೋರ್ಟಲ್

ಫಾಸ್ಟ್​​ ಟ್ಯಾಗ್​ ಖರೀದಿ ಎಲ್ಲಿ?
ಫಾಸ್ಟ್​ ಟ್ಯಾಗ್ ಅನ್ನು ವಿವಿಧ ಬ್ಯಾಂಕ್​​ಗಳು, ಐಹೆಚ್‌ಎಂಸಿಎಲ್/ಎನ್‌ಹೆಚ್‌ಎಐ ಸ್ಥಾಪಿಸಿದ 28,500ಕ್ಕೂ ಹೆಚ್ಚು ಪಾಯಿಂಟ್ ಆಫ್ ಸೇಲ್​ನಂತಹ (ಪಿಒಪಿ) ಸ್ಥಳಗಳಿಂದ ಖರೀದಿಸಬಹುದು. ಎಲ್ಲ ರಾಷ್ಟ್ರೀಯ ಹೆದ್ದಾರಿಗಳ ಪ್ಲಾಜಾ, ಆರ್‌ಟಿಒ, ಸಾಮಾನ್ಯ ಸೇವಾ ಕೇಂದ್ರ, ಸಾರಿಗೆ ಕೇಂದ್ರ, ಬ್ಯಾಂಕ್ ಶಾಖೆ, ಆಯ್ದ ಪೆಟ್ರೋಲ್ ಪಂಪ್‌ಗಳಲ್ಲೂ ಲಭ್ಯವಿದೆ.

ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಹೆಚ್‌ಡಿಎಫ್‌ಸಿ ಬ್ಯಾಂಕ್ ಮುಂತಾದ ಪ್ರಮುಖ ಖಾಸಗಿ ವಲಯದ ಬ್ಯಾಂಕ್​ಗಳ 12,000ಕ್ಕೂ ಹೆಚ್ಚು ಶಾಖೆಗಳಲ್ಲಿ ದೊರೆಯುತ್ತದೆ.

ಹತ್ತಿರದ ಪಾಯಿಂಟ್-ಆಫ್-ಸೇಲ್ ಸ್ಥಳಗಳಿಗಾಗಿ ಹುಡುಕಲು 'ಮೈ ಫಾಸ್ಟ್​ಟ್ಯಾಗ್​ ಅಪ್ಲಿಕೇಷನ್' (My FASTag App) ಅನ್ನು ಡೌನ್‌ಲೋಡ್ ಮಾಡಬಹುದು ಅಥವಾ www.ihmcl.comಗೆ ಭೇಟಿ ನೀಡಿ ಅಥವಾ 1033 NH ಸಂಖ್ಯೆಗೆ ಕರೆ ಮಾಡಬಹುದು.

ಶುಲ್ಕಗಳು ಯಾವುವು?

ಫಾಸ್ಟ್‌ಟ್ಯಾಗ್ ಅನ್ನು ಡಿಸೆಂಬರ್ 01ರವರೆಗೆ ಉಚಿತವಾಗಿ ವಿತರಿಸುವಂತೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಹೆಚ್‌ಎಐ) ನಿರ್ದೇಶನ ನೀಡಿದ್ದಾರೆ.

ಇತರೆ ಶುಲ್ಕ
ವಂತಿಕೆ ಶುಲ್ಕ: ₹ 100
ಮರುಪಾವತಿಯ ಭದ್ರತಾ ಠೇವಣಿ: ₹ 200-400
ಮರುಪಾವತಿಯ ಭದ್ರತಾ ಠೇವಣಿಯು ವಾಹನದ ಗಾತ್ರ ಅವಲಂಬಿಸಿ ₹ 400 ಇರಲಿದೆ

ಫಾಸ್ಟ್​ ಟ್ಯಾಗ್ ರೀಚಾರ್ಜ್ ಮಾಡುವುದು ಹೇಗೆ?

ರೀಚಾರ್ಜ್ ಸೌಲಭ್ಯಕ್ಕಾಗಿ, ಎನ್‌ಹೆಚ್‌ಎಐ/ ಐಹೆಚ್‌ಎಂಸಿಎಲ್​ಯು ಯುಪಿಐ ರೀಚಾರ್ಜ್ ಸೌಲಭ್ಯವನ್ನು My FASTag App ಅಥವಾ ನೆಟ್ ಬ್ಯಾಂಕಿಂಗ್, ಕ್ರೆಡಿಟ್/ ಡೆಬಿಟ್ ಕಾರ್ಡ್, ಯುಪಿಐ ಮತ್ತು ಇತರೆ ಪಾವತಿ ವಿಧಾನಗಳ ಮೂಲಕ ಆಯಾ ಬ್ಯಾಂಕ್​ನ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ರೀಚಾರ್ಜ್​ ಮಾಡಬಹುದು.

ದಂಡ ಪಾವತಿ ಎಷ್ಟು?
ಡಿಸೆಂಬರ್ 1 ರಿಂದ ಫಾಸ್ಟ್‌ಟ್ಯಾಗ್ ಇರದ ವಾಹನಗಳಿಗೆ ಟೋಲ್ ಮೊತ್ತದ ಎರಡು ಪಟ್ಟು ದಂಡ ಶುಲ್ಕ ಪಾವತಿಸಬೇಕಾಗುತ್ತದೆ

ಬೇಕಾದ ದಾಖಲಾತಿಗಳು?
ವಾಹನ ನೋಂದಣಿ ದಾಖಲೆ ಪತ್ರ
ವಾಹನ ಮಾಲೀಕರ ಪಾಸ್​ ಪೋರ್ಟ್​ ಸೈಜ್ ಫೋಟೊ
ವಾಹನ ಮಾಲೀಕತ್ವಕ್ಕೆ ನೀಡಿದ ಕೆವೈಸಿ ದಾಖಲೆ

ಇತರೆ ದಾಖಲೆಗಳು:
ಭಾವಚಿತ್ರ ಹೊಂದಿರುವ ವಿಳಾಸ ದಾಖಲೆ
ವಾಹನ ಪರವಾನಿಗೆ, ಪ್ಯಾನ್​ ಕಾರ್ಡ್​, ಪಾಸ್​​ಪೋರ್ಟ್​, ಮತದಾನದ ಗುರುತಿನ ಚೀಟಿ, ಆಧಾರ್ ಕಾರ್ಡ್​

ಫಾಸ್ಟ್​ ಟ್ಯಾಗ್ ಬಣ್ಣಗಳು

ಕಾರು/ಜೀಪ್ / ವ್ಯಾನ್- ವ್ಯಾಲೆಟ್
ಟಾಟಾ ಏಸ್ ಮತ್ತು ಮಿನಿ ಲೈಟ್ ಕಮರ್ಷಿಯಲ್ ವೆಹಿಕಲ್- ವೈಲೆಟ್
ಲಘು ವಾಣಿಜ್ಯ ವಾಹನಗಳು/ ಮಿನಿ ಬಸ್- ಕಿತ್ತಳೆ
ಬಸ್- 3 ಆಕ್ಸಲ್ ಮತ್ತು ಟ್ರಕ್- 3 ಆಕ್ಸಲ್- ಹಳದಿ
ಬಸ್-2 ಆಕ್ಸಲ್/ ಟ್ರಕ್- 2 ಆಕ್ಸಲ್- ಗ್ರೀನ್
ಟ್ರೈಲರ್/ ಟ್ರ್ಯಾಕ್ಟರ್​ ಜೊತೆಗೆ ಟ್ರೈಲರ್​ 4/5/6 ಆಕ್ಸಲ್- ಪಿಂಕ್​
ಟ್ರಕ್ 7 ಆಕ್ಸಲ್​ಗಿಂತ ಮೇಲ್ಪಟ್ಟವು- ನೀಲಿ
ಅರ್ಥ್ ಮೂವಿಂಗ್ / ಹೆವಿ ಕನ್​ಸ್ಟ್ರಕ್ಷನ್​ ಮೆಷಿನರಿ- ಕಪ್ಪು

ದೂರು ದಾಖಲಿಸಲು ಟೋಲ್ ಫ್ರೀ ಸಂಖ್ಯೆ?

ಫಾಸ್ಟ್‌ಟ್ಯಾಗ್ ಮಾಹಿತಿಯನ್ನು ಎನ್‌ಎಚ್‌ಎಐನ 1033 ಟೋಲ್ ಫ್ರೀ ಸಂಖ್ಯೆಯಿಂದ ಪಡೆಯಬಹುದು. ಈ ಬಗ್ಗೆ ಸಂಬಂಧಿಸಿದ ದೂರುಗಳನ್ನು ಸಹ ಇದೇ ನಂಬರ್​ಗೆ ಸಲ್ಲಿಸಬಹುದು.

ಪ್ರಮುಖ ಬ್ಯಾಂಕ್​ಗಳ ಗ್ರಾಹಕರ ಸಹಾಯಣವಾಣಿ

1.ಆಕ್ಸಿಸ್ ಬ್ಯಾಂಕ್ 1800-419-8585
2. ಐಸಿಐಸಿಐ ಬ್ಯಾಂಕ್ 1800-2100-104
3. ಐಡಿಎಫ್‌ಸಿ ಬ್ಯಾಂಕ್ 1800-266-9970
4. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 1800-11-0018
5. ಹೆಚ್‌ಡಿಎಫ್‌ಸಿ ಬ್ಯಾಂಕ್ 1800-120-1243
6. ಕರೂರು ವೈಶ್ಯ ಬ್ಯಾಂಕ್ 1800-102-1916
7. ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 1800-419-1996
8. ಪೇಟಿಎಂ ಪಾವತಿ ಬ್ಯಾಂಕ್ ಲಿಮಿಟೆಡ್ 1800-102-6480
9. ಕೊಟ್ಯಾಕ್​ ಮಹೀಂದ್ರಾ ಬ್ಯಾಂಕ್ 1800-419-6606
10. ಸಿಂಡಿಕೇಟ್ ಬ್ಯಾಂಕ್ 1800-425-0585
11. ಫೆಡರಲ್ ಬ್ಯಾಂಕ್ 1800-266-9520
12. ಸೌಥ್​ ಇಂಡಿಯಾ ಬ್ಯಾಂಕ್ 1800-425-1809
13. ಪಂಜಾಬ್ ನ್ಯಾಷನಲ್ ಬ್ಯಾಂಕ್ 080-67295310
14. ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್​ 1800-223-993
15. ಸರಸ್ವತ್ ಬ್ಯಾಂಕ್ 1800-266-9545
16. ಫಿನೋ ಪೇಮೆಂಟ್ಸ್ ಬ್ಯಾಂಕ್ 1860-266-3466
17. ಸಿಟಿ ಯೂನಿಯನ್ ಬ್ಯಾಂಕ್ 1800-2587200
18. ಬ್ಯಾಂಕ್ ಆಫ್ ಬರೋಡಾ 1800-1034568
19. ಇಂಡಸ್ಇಂಡ್ ಬ್ಯಾಂಕ್ 1860-5005004
20. ಯೆಸ್​ ಬ್ಯಾಂಕ್ 1800-1200
21. ಯೂನಿಯನ್ ಬ್ಯಾಂಕ್ 1800-222244
22. ನಾಗ್ಪುರ ನಾಗರಿಕ್ ಸಹಕಾರಿ ಬ್ಯಾಂಕ್ ಲಿಮಿಟೆಡ್ 1800-2667183

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.