ETV Bharat / business

ಫೇಸ್​ಲೆಸ್ ಅಸೆಸ್​ಮೆಂಟ್​ ಜಾರಿ​: ತೆರಿಗೆ ನೌಕರರಿಗೆ ಉದ್ಯೋಗ ಕಡಿತದ ಭೀತಿ - ಸಿಬಿಡಿಟಿ ಹೇಳುವುದೇನು?

ಸಿಬಿಡಿಟಿ ಅಧ್ಯಕ್ಷ ಪಿ ಸಿ ಮೋಡಿ ಮತ್ತು ಮಂಡಳಿಯ ಉನ್ನತ ಸದಸ್ಯರು, ತೆರಿಗೆ ಕ್ಷೇತ್ರ ರಚನೆಯ ಅಧಿಕಾರಿಗಳೊಂದಿಗೆ ವರ್ಚ್ಯುವಲ್​ ಸಭೆ ನಡೆಸಿದ್ದಾರೆ. ಇಲಾಖೆಯಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಮಾನವ ಸಂಪನ್ಮೂಲ ಮರುಹಂಚಿಕೆ ಮತ್ತು ಮರುಸಂಘಟನೆಯ ಬಗ್ಗೆ ಅವರಲ್ಲಿ ಇದ್ದ ಆತಂಕ ಮತ್ತು ಅನುಮಾನಗಳಿಗೆ ತೆರೆ ಎಳೆದಿದ್ದಾರೆ.

CBDT Chief
ಸಿಬಿಡಿಟಿ ಮುಖ್ಯಸ್ಥ ಪಿಸಿ ಮೋಡಿ
author img

By

Published : Aug 19, 2020, 3:33 PM IST

ನವದೆಹಲಿ: ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಫೇಸ್​​ಲೆಸ್​ ಮೌಲ್ಯಮಾಪನ ಮತ್ತು ಫೇಸ್​ಲೆಸ್​ ಕೋರಿಕೆಯನ್ನು ರಾಷ್ಟ್ರವ್ಯಾಪಿ ಅನುಷ್ಠಾನಗೊಳಿಸುವುದರಿಂದ ದೊಡ್ಡ ಪ್ರಮಾಣದ ವರ್ಗಾವಣೆ ಅಥವಾ ಮಾನವಸಂಪನ್ಮೂಲ ಕಡಿಮೆ ಆಗುವುದಿಲ್ಲ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿಯ ಉನ್ನತ ಅಧಿಕಾರಿಗಳು ಮಂಗಳವಾರ ಆದಾಯ ತೆರಿಗೆ ಅಧಿಕಾರಿಗಳಿಗೆ ಭರವಸೆ ನೀಡಿರುವ ಮಾಹಿತಿ 'ಈಟಿವಿ ಭಾರತ'ಕ್ಕೆ ದೊರೆತಿದೆ.

ತೆರಿಗೆ ವ್ಯವಸ್ಥೆಯಲ್ಲಿ ಸಾಕಷ್ಟು ಪಾರದರ್ಶಕತೆ ತರುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್​ 13ರಂದು 'ಪಾರದರ್ಶಕ ತೆರಿಗೆ ಮತ್ತು ಪ್ರಾಮಾಣಿಕತೆಗೆ ಗೌರವ' ವೇದಿಕೆಗೆ ಚಾಲನೆ ನೀಡಿದರು.

ಸಿಬಿಡಿಟಿ ಅಧ್ಯಕ್ಷ ಪಿ ಸಿ ಮೋಡಿ ಮತ್ತು ಮಂಡಳಿಯ ಉನ್ನತ ಸದಸ್ಯರು, ತೆರಿಗೆ ಕ್ಷೇತ್ರ ರಚನೆಯ ಅಧಿಕಾರಿಗಳೊಂದಿಗೆ ವರ್ಚ್ಯುವಲ್​ ಸಭೆ ನಡೆಸಿದ್ದಾರೆ. ಇಲಾಖೆಯಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಮಾನವ ಸಂಪನ್ಮೂಲ ಮರುಹಂಚಿಕೆ ಮತ್ತು ಮರುಸಂಘಟನೆಯ ಬಗ್ಗೆ ಅವರಲ್ಲಿ ಇದ್ದ ಆತಂಕ ಮತ್ತು ಅನುಮಾನಗಳಿಗೆ ತೆರೆ ಎಳೆದಿದ್ದಾರೆ.

ಫೇಸ್​ಲೆಸ್​ ಮೌಲ್ಯಮಾಪನ ಯೋಜನೆಯ ರಾಷ್ಟ್ರವ್ಯಾಪಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ತೆರಿಗೆ ಅಧಿಕಾರಿಗಳಲ್ಲಿದ್ದ ತಪ್ಪುಗ್ರಹಿಕೆಯನ್ನು ಹೋಗಲಾಡಿಸಿದ್ದಾರೆ. ಪ್ರಸ್ತುತ ಅಸ್ತಿತ್ವದಲ್ಲಿರುವ ಮಾನವ ಸಂಪನ್ಮೂಲ ಬಳಸಿಕೊಂಡು ಅನುಷ್ಠಾನ ಮಾಡಲಾಗುವುದು ಎಂದು ಸಿಬಿಡಿಟಿ ಅಧ್ಯಕ್ಷರು ತೆರಿಗೆ ಅಧಿಕಾರಿಗಳಿಗೆ ಭರವಸೆ ನೀಡಿದ್ದಾರೆ ಎಂಬುದರ ಬಗ್ಗೆ ಬಲ್ಲ ಮೂಲಗಳು ಈಟಿವಿ ಭಾರತಗೆ ತಿಳಿಸಿವೆ.

ಫೇಸ್​​ಲೆಸ್​ ಕೋರಿಕೆ ವ್ಯವಸ್ಥೆಯಡಿ ದೇಶದ ಯಾವುದೇ ಅಧಿಕಾರಿಗೆ ತೆರಿಗೆದಾರರು ತಮ್ಮ ಮನವಿಯನ್ನು ಕಳುಹಿಸಬಹುದು. ಮೇಲ್ಮನವಿ ನಿರ್ಧರಿಸುವ ಅಧಿಕಾರಿ ಯಾರೆಂಬುದರ ಬಗ್ಗೆ ಗುರುತು ಸಹ ತಿಳಿಯುವುದಿಲ್ಲ. ಫೇಸ್‌ಲೆಸ್‌ ಮೌಲ್ಯಮಾಪನವನ್ನು ತೆರಿಗೆ ಪಾವತಿದಾರ ಮತ್ತು ಆದಾಯ ತೆರಿಗೆ ಇಲಾಖೆಯ ನಡುವಿನ ಅಂತರವನ್ನು ತೆಗೆದುಹಾಕುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗುತ್ತದೆ.

ನೂತನ ವ್ಯವಸ್ಥೆಯನ್ನು ತೆರಿಗೆದಾರರ ಆಯ್ಕೆ ವಿಶ್ಲೇಷಣೆ ಮತ್ತು ಎಐ ಬಳಕೆಯ ಮೂಲಕ ಕಾರ್ಯಗತಗೊಳಿಸಲಾಗುತ್ತದೆ. ಈ ವ್ಯವಸ್ಥೆಯು ಪ್ರಾದೇಶಿಕ ನ್ಯಾಯವ್ಯಾಪ್ತಿಯನ್ನು ರದ್ದುಗೊಳಿಸುತ್ತದೆ. ಓರ್ವ ತೆರಿಗೆದಾರ ಒಂದು ನಿರ್ದಿಷ್ಟ ನಗರಕ್ಕೆ ಸೇರಿರಬಹುದು. ಆದರೆ ಮೌಲ್ಯಮಾಪನ ಪರಿಶೀಲನೆ ಮತ್ತು ಅಂತಿಮ ನಿರ್ಣಯ ವಿವಿಧ ನಗರಗಳಲ್ಲಿ ನಡೆಯುತ್ತದೆ. ಪ್ರಕರಣಗಳನ್ನು ಕಟ್ಟಲೆಯಿಲ್ಲದಂತಹ ಆಧಾರದ ಮೇಲೆ ಸ್ವಯಂಚಾಲಿತವಾಗಿ ಹಂಚಿಕೆ ಮಾಡಲಾಗುತ್ತದೆ. ತೆರಿಗೆದಾರರು ಆದಾಯ ತೆರಿಗೆ ಕಚೇರಿಗೆ ಅಥವಾ ಅಧಿಕಾರಿಗಳನ್ನು ಭೇಟಿ ನೀಡುವ ಅಗತ್ಯವಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.